Advertisement

ಚಿಕ್ಕಮಗಳೂರಿನಲ್ಲಿ ಶಾಂತಿ ನೆಲೆಸಲು ಸಿ.ಟಿ.ರವಿ ಸೋಲಿಸಿ

12:25 PM May 04, 2018 | Team Udayavani |

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಯಬೇಕಾದರೆ ಕ್ಷೇತ್ರದ ಜನತೆ ಮೊದಲು ಶಾಸಕ ಸಿ.ಟಿ.ರವಿ ಅವರನ್ನು ಮನೆಗೆ ಕಳಿಸಬೇಕು ಎಂದು ಹಿರಿಯ ರಂಗಭೂಮಿ ಕಲಾವಿದ, ಕಿರುತೆರೆ ನಟ ನಾಗರಾಜ್‌ ಮೂರ್ತಿ ಸಲಹೆ ಮಾಡಿದರು.

Advertisement

ಕಡೂರು ತಾಲೂಕು ಸಖರಾಯಪಟ್ಟಣ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ| ಬಿ.ಎಲ್‌. ಶಂಕರ್‌ ಅವರೊಂದಿಗೆ ಗುರುವಾರ ಚುನಾವಣಾ ಪ್ರಚಾರ ನಡೆಸಿದರು. ಇದೇ ವೇಳೆ ವಿವಿಧ ಗ್ರಾಮಗಳಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಯುವಜನತೆ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕಾದರೆ ಬಿ.ಎಲ್‌.ಶಂಕರ್‌ ಅವರನ್ನು ಗೆಲ್ಲಿಸುವುದಕ್ಕಿಂತ ಮೊದಲು ಶಾಸಕ ಸಿ.ಟಿ.ರವಿ ಅವರನ್ನು ಸೋಲಿಸಿ ಎಂದರು. 

ಶಾಸಕ ಸಿ.ಟಿ. ರವಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಕಳೆದ 15 ವರ್ಷಗಳಿಂದ ಜಾತಿ ಜಾತಿ ಮತ್ತು ಧರ್ಮ ಧರ್ಮಗಳ ನಡುವೆ ವಿಷ ಬೀಜ ಭಿತ್ತಿ ಸಂಘರ್ಷವನ್ನು ಸೃಷ್ಠಿಸುತ್ತಿದ್ದಾರೆ. ಮುಗ್ದ ಯುವ ಜನತೆಗೆ ಧರ್ಮದ ಅಫೀಮನ್ನು ಉಣಿಸುವ ಮೂಲಕ ಅವರಲ್ಲಿ ಅಸಹಿಷ್ಣುತೆಯನ್ನು ಬೆಳೆಸುತ್ತಿದ್ದಾರೆ ಇದರಿಂದಾಗಿ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಅಶಾಂತಿಯ ಬೀಡಾಗುತ್ತಿದೆ ಎಂದು ಆರೋಪಿಸಿದರು.

ಕ್ಷೇತ್ರದ ಜನತೆಗೆ ಕುಡಿಯಲು ನೀರು ಕೊಡದ ರವಿ ಅವರು ಚುನಾವಣೆಯಲ್ಲಿ ಗೆಲ್ಲಲು ಯುವ ಜನತೆಯನ್ನು ಮದ್ಯದ ದಾಸರನ್ನಾಗಿ ಮಾಡುತ್ತಿದ್ದಾರೆ. ದುಶ್ಚಟಗಳನ್ನು ಅಕ್ರಮ ದಂಧೆಗಳನ್ನು ಹೇಳಿಕೊಡುವ ಮೂಲಕ ಯುವಕರನ್ನು ಸಮಾಜ ಘಾತಕರನ್ನಾಗಿ ಬೆಳೆಸುತ್ತಿದ್ದಾರೆ ಎಂದು ದೂರಿದರು.

ಭಾವೈಕ್ಯತೆಗೆ, ಕೋಮು ಸೌರ್ಹಾದತೆಗೆ, ಶಾಂತಿಗೆ ಹೆಸರಾದ ಈ ಕ್ಷೇತ್ರ ಅಶಾಂತಿಯ ಗೂಡಾಗುವುದಕ್ಕೆ ಮುಂಚೆಯೇ ಎಚ್ಚೆತ್ತುಕೊಳ್ಳಿ ಎಂದು ಮನವಿ ಮಾಡಿದ ಅವರು, ಶಾಸಕ ಸಿ.ಟಿ.ರವಿ ಅವರನ್ನು ಮನೆಗೆ ಕಳುಹಿಸಿದರೆ ಕ್ಷೇತ್ರದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.

Advertisement

ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಶಾಸಕ ಸಿ.ಟಿ.ರವಿ ಅವರು ಚುನಾವಣೆಯಲ್ಲಿ
ಗೆಲ್ಲಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಹಣದ ಹೊಳೆಯನ್ನು ಹರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಭ್ಯರ್ಥಿ ಡಾ|ಬಿ.ಎಲ್‌.ಶಂಕರ್‌ ಮಾತನಾಡಿ, ಕಳೆದ 15 ವರ್ಷಗಳ ಅವಧಿಯಲ್ಲಿ ಕ್ಷೇತ್ರ ಅಭಿವೃದ್ದಿಯಾಗಿಲ್ಲ. ಆದರೆ ಶಾಸಕ ಸಿ.ಟಿ.ರವಿ ಮತ್ತು ಅವರ ಹಿಂಬಾಲಕರು ಮಾತ್ರ ಉದ್ಧಾರವಾಗಿದ್ದಾರೆ. ಶಾಸಕ ಸಿ.ಟಿ.ರವಿಯವರ ದುರಾಡಳಿತ ಕೊನೆಗಾಣಿಸಿ ಪ್ರಗತಿಗಾಗಿ ತಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರಾದ ರವೀಶ್‌ ಬಸಪ್ಪ, ಮಹಡಿಮನೆ ಸತೀಶ್‌, ನಟರಾಜ್‌ ಎಸ್‌. ಕೊಪ್ಪಲು, ಹೇಮಾವತಿ, ರೇಣುಕಾಮೂರ್ತಿ, ಅಶೋಕ್‌, ಎನ್‌.ಡಿ. ಚಂದ್ರಪ್ಪ, ಎಸ್‌.ಎನ್‌. ಮಂಜುನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next