Advertisement

ಕರಡಿ ಹಾವಳಿ: ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಷ್ಟ

09:32 AM Nov 03, 2019 | Team Udayavani |

ಗಂಗಾವತಿ: ಕರಡಿ ಹಾವಳಿಯಿಂದ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಷ್ಟವಾದ ಘಟನೆ ಗಂಗಾವತಿ ಹಾಗು ಕನಕಗಿರಿ ತಾಲೂಕಿನಲ್ಲಿ ಜರುಗಿದೆ.

Advertisement

ಉತ್ತಮ  ಮಳೆಯಿಂದಾಗಿ ರೈತರು ತಮ್ಮ ಹೊಲದಲ್ಲಿ ಮೆಕ್ಜೆ ಜೋಳ, ಶೇಂಗಾ, ಸಜ್ಜೆ ಸೇರಿ ಇತರೆ ತೋಟಗಾರಿಕೆಯ ಬೆಳೆಗಳನ್ನು, ಗುಂಪು ಗುಂಪಾಗಿ ಬರುವ ಕರಡಿಗಳು ತಿಂದು ನಂತರ ಕೆಡಿಸುತ್ತಿದ್ದು ಅರ್ಧ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ.

ಕನಕಗಿರಿ ತಾಲ್ಲೂಕಿನ ಓಬಳಬಂಡಿ ಮುಸಲಾಪೂರ, ಹಿರೇಕೇಡ, ರಾಮದುರ್ಗ ಹಾಗೂ ಗಂಗಾವತಿ ತಾಲೂಕಿನ ಆಗೋಲಿ, ವಿಠಲಾಪೂರ, ವೆಂಕಟಗಿರಿ, ಬೆಣಕಲ್, ಮುಕ್ಕುಂಪಿ, ಏಳುಗುಡ್ಡದ ಪ್ರದೇಶದಲ್ಲಿ ಕರಡಿ ಹಾವಳಿ ವಿಪರೀತವಾಗಿದೆ. ಕರಡಿ ಹಾವಳಿ ಕುರಿತು ರೈತರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಕನಕಗಿರಿ ಗಂಗಾವತಿ ತಹಸೀಲ್ದಾರ್ ರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಕೂಡಲೇ ಕರಡಿಯನ್ನು ಹಿಡಿಯಲು ಬೋನ್ (ಪಂಜರ)ಇರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next