Advertisement

Holehonnuru: ಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಹಾವಳಿ

06:11 PM Aug 20, 2024 | Poornashri K |

ಹೊಳೆಹೊನ್ನೂರು: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರ್ನಾಲ್ಕು ಕರಡಿಗಳು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿ ಜೀವನ ನಡೆಸುವ ಸಂದರ್ಭ ಎದುರಾಗಿದೆ.

Advertisement

ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ದಾಸರಕಲ್ಲಹಳ್ಳಿ, ತಿಮ್ಲಾಪುರ, ತಿಮ್ಲಾಪುರ ಕ್ಯಾಂಪ್, ಜಂಬರಘಟ್ಟೆ, ವಿಠಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಕಾಣಿಸುತ್ತಿದ್ದು, ಕೆಲ ದಿನಗಳ ಹಿಂದೆ ಎಮ್ಮೆಹಟ್ಟಿ ಆನಂದಪ್ಪ ಎಂಬುವರಿಗೆ ಕಚ್ಚಿದ್ದು, ಈಗ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜಮೀನುಗಳಿಗೆ ಹೋಗುವುದಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆ ಅಗಸನಹಳ್ಳಿ ಬಸವರಾಜ್ ಎಂಬುವರು ಹಸುಗಳಿಗೆ ಹುಲ್ಲು ಕ್ಯೂಯ್ಯಲು ಹೋದಾಗ ಕರಡಿ ದಾಳಿ ನಡೆಸಲು ಮುಂದಾಗಿದ್ದು, ತಕ್ಷಣವೇ ಅವರು ಎದ್ದು ಬಿದ್ದು ಓಡಿ ಬಂದಿದ್ದರಿಂದ ಯಾವುದೇ ಹಾನಿಯಾಗಿಲ್ಲ. ಅಲ್ಲದೇ ಸೋಮವಾರ ಮಧ್ಯರಾತ್ರಿ 2 ಗಂಟೆ ವೇಳೆಯಲ್ಲಿ ರಾಜಪ್ಪ ಎಂಬುವರ ಮನೆಯ ಹತ್ತಿರ ಕಾಣಿಸಿಕೊಂಡಿದೆ. ಹೀಗಾಗಿ ಪ್ರತಿಯೊಬ್ಬರು ಸಹ ಹಗಲು ಹೊತ್ತಿನಲ್ಲೇ ಜಮೀನಿಗೆ ತೆರಳುವುದಕ್ಕೆ ಹಿಂದೇಟು ಹಾಕುವುದಲ್ಲೇ ಭಯ ಬೀತರಾಗಿದ್ದಾರೆ.

ರಾತ್ರಿ ವೇಳೆಯಲ್ಲಿ ಕರಡಿ ಗ್ರಾಮದೊಳಗೆ ಪ್ರವೇಶ ಮಾಡುತ್ತಿದ್ದು, ಅಡಿಕೆ ಮನೆಗಳ ಸಿಸಿ ಕ್ಯಾಮಾರಗಳಲ್ಲಿ ಸೆರೆಯಾಗಿದೆ. ಗ್ರಾಮದಲ್ಲಿನ ಕಳೆದು ಮೂರು ದಿನಗಳಿಂದ ಯುವಕರು ರಾತ್ರಿ ಪಾಳೆಯಲ್ಲಿ ಕಾಯುತ್ತಿದ್ದು, ಯಾವ ಸಮಯದಲ್ಲಿ ಎಲ್ಲಿ ಬರುತ್ತದೆಯೋ ಗೊತ್ತಾಗದೇ ಇರುವುದರಿಂದ ಹಿಡಿಯಲು ಸಾಧ್ಯವಾಗುತ್ತಿಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಹಗಲು ಹೊತ್ತಿನಲ್ಲಿ ಯಾರೋ ಇಬ್ಬರು ಬೈಕ್ ನಲ್ಲಿ ಬಂದು ಊರನ್ನು ಗಸ್ತು ತಿರುಗಿದ್ದಾರೆ. ರಾತ್ರಿ ವೇಳೆಯಲ್ಲಿ ಜೀಪ್ ನಲ್ಲಿ ಬಂದು ಹೋಗಿದ್ದಾರೆ. ಹೊರತು ಕರಡಿ ಹಿಡಿಯುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮಸ್ಥರು ಅನೇಕ ಬಾರಿ ಪೋನ್ ಮಾಡಿದರೂ ಗ್ರಾಮದೊಳಗೆ ಯಾವುದೇ ಬೋನ್ ಇಟ್ಟಿಲ್ಲ ಅಗಸನಹಳ್ಳಿ ಗ್ರಾಮಸ್ಥರ ಆರೋಪವಾಗಿದೆ.

Advertisement

ವಡ್ಡರಹಟ್ಟಿ ಚೌಡಮ್ಮ ದೇವಸ್ಥಾನ ಬಳಿ ಬೋನ್ ವೊಂದನ್ನು ಇಟ್ಟಿದ್ದು, ಕಾಡು ಕಡಿಮೆಯಾಗಿದ್ದರಿಂದ ಪ್ರಾಣಿಗಳು ಗ್ರಾಮದೊಳಗೆ ನುಗ್ಗುತ್ತಿದ್ದು, ನಾವು ಮನುಷ್ಯರೇ ಜನರೇ ಹಿಡಿಯಬಹುದು. ನಾವು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಕರಡಿಯನ್ನು ಯಾವುದರೂ ಮನೆಯಲ್ಲಿ ಅಥವಾ ಅಡಿಕೆ ಮನೆಯಲ್ಲಿ ಕೂಡಿ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಮಾವಿನಕಟ್ಟೆಯ ಆರ್.ಎಫ್. ಓ. ಜಗದೀಶ್ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next