ಬೆಂಗಳೂರು: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ನಡೆಸಿದ್ದ ಬೇರ್ ಗ್ರಿಲ್ಸ್ ಈ ಬಾರಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಕಾಡು ಸುತ್ತಲಿದ್ದಾರೆ. ಈ ಕಾರ್ಯಕ್ರಮದ ಚಿತ್ರೀಕರಣ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಇಂದು ನಡೆಯುತ್ತಿದೆ.
ಇಂಗ್ಲೆಂಡ್ ಮೂಲದ ಸಾಕ್ಷ್ಯ ಚಿತ್ರ ತಯಾರಕನಾದ ಬೇರ್ ಗ್ರಿಲ್ಸ್ ತನ್ನ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಮೂಲಕ ವಿಶ್ವ ಪ್ರಸಿದ್ದಿ ಪಡೆದವರು. ಕಳೆದ ವರ್ಷ ನರೇಂದ್ರ ಮೋದಿಯ ಕಾರ್ಯಕ್ರಮದ ನಂತರ ಬೇರ್ ಗ್ರಿಲ್ಸ್ ಭಾರತದಲ್ಲೂ ಸಾಕಷ್ಟು ಜನಪ್ರೀಯತೆ ಪಡೆದಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ಮಂಗಳವಾರ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಾಡುಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿತ್ರೀಕರಣ ಮಾಡಬೇಕೆಂಬ ಶರತ್ತಿನ ನೆಲೆಯಲ್ಲಿ ಅವಕಾಶ ನೀಡಲಾಗಿದೆ ಎನ್ನಲಾಗಿದೆ.
ಗುರುವಾರ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಕೂಡಾ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಬೇರ್ ಗ್ರಿಲ್ಸ್ ಮ್ಯಾನ್ ವರ್ಸಸ್ ವೈಲ್ಡ್ ನ ಹೊಸ ಸರಣಿಯನ್ನು ಆರಂಭಿಸಲಿದ್ದು ಅದರಲ್ಲಿ ಡೇವ್ ಬಟಿಷ್ಟ ಸೇರಿದಂತೆ ಹಾಲಿವುಡ್ ಸೆಲೆಬ್ರೆಟಿಗಳು ಪಾಲ್ಗೊಳ್ಳಲಿದ್ದಾರೆ.