Advertisement

ಮಧುಗಿರಿಯಲ್ಲಿ ಕರಡಿ ದಾಳಿ: ಮನೆಯ ಮುಂದೆ ಮಲಗಿದ್ದ ವ್ಯಕ್ತಿ ಗಂಭೀರ

12:16 PM Feb 27, 2022 | Team Udayavani |

ಮಧುಗಿರಿ: ವ್ಯಕ್ತಿಯೊಬ್ಬನಿಗೆ ಕರಡಿಯೊಂದು ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಐ ಡಿ ಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ಮನೆಯ ಮುಂದೆ ಮಲಗಿದ್ದ ಮಲೇರಂಗಪ್ಪ (56) ಮೇಲೆ ಕರಡಿ ದಾಳಿ ನಡೆಸಿದೆ.

ಇದನ್ನೂ ಓದಿ:ಆಧಿಕಾರ ಇಲ್ಲದೆ ಇದ್ದರೂ ಜ‌ನ ಆಶೀರ್ವಾದ ಮಾಡಿದ್ದಾರೆ: ಜನ್ಮದಿನದಂದು ಬಿಎಸ್‍ವೈ

ಮಲೇರಂಗಪ್ಪ ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಖಾಸಗಿ ವಾಹನದಲ್ಲಿ ಮಲೇರಂಗಪ್ಪ ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಗೆ ದಾಖಲಿಸಿದ್ದಾರೆ.  ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next