Advertisement
ಮಂಗಳೂರು ವಿವಿಯ ಎಂಬಿಎ ಸಭಾ ಭವನದಲ್ಲಿ ವಿವಿಯ ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್‌ಮೆಂಟ್ ವಿಭಾಗ ಹಾಗೂ ಪ್ರವಾಸೋದ್ಯಮ ಇಲಾಖೆ ಮಂಗ ಳೂರು ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತ್ಯಂತ ಅಕರ್ಷಕವಾಗಿರುವ ತಲಪಾಡಿ ಬೀಚ್‌ನ್ನು ಸುಸಜ್ಜಿತ ಬೀಚ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ವದೇಶ ದರ್ಶನ್ ಕೋಸ್ಟಲ್ ಸರ್ಕಿಟ್ ಕಾರ್ಯಕ್ರಮದಲ್ಲಿ ತಲಪಾಡಿ ಬೀಚನ್ನು ಆಯ್ಕೆ ಮಾಡಲಾಗಿದ್ದು ಹಂತಹಂತವಾಗಿ ಮೂಲ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಇದು ಮುಂದಿನ ಐದು ವರ್ಷಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ಬೀಚ್ ಆಗಿ ಬದಲಾಗಲಿದೆ. ಈಗಾಗಲೇ ತಲಪಾಡಿ ಬೀಚ್ ಅಭಿವೃದ್ಧಿ ಕಾಮಗಾರಿ ಬಗ್ಗೆ ಖಾಸಗಿ ಸಂಸ್ಥೆಗೆ ಟೆಂಡರ್ ವಹಿಸಲಾಗಿದೆ ಎಂದರು. ಇಲಾಖೆ ವತಿಯಿಂದ ಸಬ್ಸಿಡಿ
ಪ್ರವಾಸೋದ್ಯಮ ನೀತಿಯಡಿ ಪ್ರವಾಸಿಗರಿಗೆ ಅನುಕೂಲವಾಗುವ ಸುಮಾರು 20 ಯೋಜನೆಗಳಲ್ಲಿ ಬಂಡವಾಳ ಹೂಡುವವರಿಗೆ ಇಲಾಖೆ ವತಿಯಿಂದ ಶೇ. 20 ಸಬ್ಸಿಡಿ ಸಿಗಲಿದೆ. ಈಗಾಗಲೇ ಗುರುತಿಸಲ್ಪಟ್ಟಿರುವ ಪ್ರವಾಸಿ ಕೇಂದ್ರವಾಗಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಧರ್ಮಸ್ಥಳ ಪಂಚಾಯತ್ ವ್ಯಾಪ್ತಿಯಲ್ಲಿ ಹೊಟೇಲ್, ಹೋಂ ಸ್ಟೇ, ರೆಸಾರ್ಟ್ ತೆರೆಯಲು ಅವಕಾಶವಿದ್ದು ಶೇ. 40 ಸಬ್ಸಿಡಿ ದೊರಕಲಿದೆ. ಎರಡು ಕೇಂದ್ರಗಳಲ್ಲಿ ಈಗಾಗಲೇ ಅಧಿಕೃತ ಹದಿನೈದು ಹೋಂ ಸ್ಟೇಗಳು ಕೆಲಸ ಮಾಡುತ್ತಿದೆ. ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.
Related Articles
Advertisement
ಪ್ರವಾಸಿಗರ ಸಂಖ್ಯೆ ಹೆಚ್ಚಳ ಜೆಟ್ ಏರ್‌ವೇಸ್ ಬೆಂಗಳೂರು ಮಾರಾಟ ವಿಭಾಗದ ಮುಖ್ಯ ವ್ಯವಸ್ಥಾಪಕ ಹರೀಶ್ ಕೆ. ಶೆಣೈ ಮಾತನಾಡಿ, ಭಾರತಕ್ಕೆ ಬರುವ ಪ್ರವಾಸಿಗರಲ್ಲಿ ಶೇ.80 ಜನರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಉದ್ದೇಶದಿಂದ ಬಂದರೆ ಇನ್ನುಳಿದ ಪ್ರಯಾಣಿಕರು ಬೀಚ್ ನೋಡಲು ಬರುತ್ತಾರೆ. ಪ್ರವಾಸೋದ್ಯಮ ಕ್ಷೇತ್ರ ಇತ್ತೀಚೆಗೆ ಹಂತ- ಹಂತವಾಗಿ ಅಭಿವೃದ್ಧಿ ಕಾಣುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲು ಹೆಚ್ಚಳವಾಗಿದೆ. ಅದಕ್ಕೆ ಅನುಗುಣವಾಗಿ ವಾಯಯಾನ ಇಲಾಖೆ ಕಾರ್ಯಾಚರಿಸುತ್ತಿದೆ ಎಂದರು. ಸರ್ಫಿಂಗ್ ಉತ್ಸವ
ಸಸಿಹಿತ್ಲು ಬೀಚ್‌ನಲ್ಲಿ ಕಳೆದ ವರ್ಷ ಖಾಸಗಿ ಸಂಸ್ಥೆಗಳ ಜತೆಗೂಡಿ ಮೇ ತಿಂಗಳ ಕೊನೆಯ ಮೂರು ದಿನ ಸರ್ಫಿಂಗ್ ಉತ್ಸವ ಆಯೋಜಿಸಿದ್ದು, ಸಸಿಹಿತ್ಲು ಬೀಚನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವನ್ನಾಗಿ ರೂಪಿಸಲು 160ಕೋಟಿ. ರೂ. ಅನುದಾನ ಮಂಜೂರು ಮಾಡುವಂತೆ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆ ಮೂಲಕ ನಿತ್ಯವೂ ಸರ್ಫಿಂಗ್ ನಡೆಸುವ ಯೋಜನೆ ಇದೆ ಎಂದು ಡಾ| ಉದಯ ಶೆಟ್ಟಿ ಹೇಳಿದರು.