ಕುಳಾಯಿ: ಪ್ರವಾಸೋಧ್ಯಮಕ್ಕೆ ನೂರಾರು ಜನ ಬರುವ ಕುಳಾಯಿ ಬೀಚ್ ದಡವನ್ನು ಸಂಪರ್ಕಿಸುವ ಜಾಗದಲ್ಲೇ ಸಹಾಯಕ ಆಯುಕ್ತರ ಆದೇಶದಂತೆ ಜೆಸಿಬಿ ಬಳಸಿ ಬೃಹತ್ ಗುಂಡಿ ತೆಗೆದ ಘಟನೆ ಆ.1ರ ಮಂಗಳವಾರ ನಡೆದಿದೆ.
ಜಿಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯಪ್ರವೇಶ ಮಾಡಿದ್ದು, ಬೀಚ್ ರಸ್ತೆಯನ್ನು ಯಥಾಸ್ಥಿತಿಗೆ ತರಲು ಗುಂಡಿ ಮುಚ್ಚಲಾಯಿತು.
ಕುಳಾಯಿ ಬೀಚ್ ಪ್ರವಾಸೋಧ್ಯಮ ಸ್ಥಳವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಹಾಕಿ ಮುಂಭಾಗದ ಸರಕಾರಿ ಜಾಗದಲ್ಲಿ ಒಂದೆರಡು ಬೆಂಚ್ ಗಳನ್ನು ಇಟ್ಟು ಸಹಕಾರಿ ದುರೀಣ ಉಮೇಶ್ ಕರ್ಕೇರ ಅವರು ನೋಡಿಕೊಂಡಿದ್ದರು.
ಇದರಿಂದ ಯಾವುದೇ ಬೇಡದ ಚಟುವಟಿಕೆ ಶೇ. ನೂರರಷ್ಟು ನಿಂತಿತ್ತು. ಇದು ಸರಕಾರಿ ಜಾಗವಾಗಿದ್ದರಿಂದ ಸುರಕ್ಷತೆಗಾಗಿ ಹಾಕಲಾದ ಧರೆಯನ್ನು ಕೆಡವಲು ಸಹಾಯಕ ಆಯುಕ್ತರು ಆದೇಶಿಸಿದ್ದರೂ, ಜತೆಗೆ ಬೃಹತ್ ಗುಂಡಿ ತೋಡಿ ಎಂದು ಸೂಚಿಸಿರುವುದು ವಿವಾದಕ್ಕೆ ಕಾರಣವಾಯಿತು.
ಬಳಿಕ ಜಿಲ್ಲಾಧಿಕಾರಿಗಳು ಮರಳು ಜಾಗವಾಗಿರುವುದರಿಂದ ದಕ್ಕೆಗೆ ಹೋಗುವ ಬೃಹತ್ ಟ್ರಕ್ ಓಡಾಟದಿಂದ ರಸ್ತೆ ಕುಸಿಯುವ ಭೀತಿಯೂ ಇದ್ದುದರಿಂದ ಹಾಗೂ ಪ್ರವಾಸಿಗಳ, ಸ್ಥಳೀಯ ಜನರ ಸುರಕ್ಷತೆಯಿಂದ ಗುಂಡಿ ಮುಚ್ಚಲು ಆದೇಶಿಸಿದರು.
ಸಂಜೆ ಹೊತ್ತು ಹಿರಿಯರು, ಸ್ಥಳೀಯರು ಈ ದಾರಿಯಾಗಿಯೇ ಬೀಚ್ ಗೆ ಒಂದಿಷ್ಟು ವಿಶ್ರಾಂತಿ ಪಡೆಯಲು ಹೋಗುವ ದಾರಿಯಾಗಿದೆ.