ಕುಂಬಳೆ: ಬಾಯಾರು ಹಿರಣ್ಯ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ವೇ|ಮೂ| ಪರಕ್ಕಜೆ ಅನಂತನಾರಾಯಣ ಭಟ್ ಅವರ ನೇತƒತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು.
ಕಾರ್ಯಕ್ರಮದಂಗವಾಗಿ ಮೇ 14ರಂದು ಅಪರಾಹ್ನ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹಿರಣ್ಯ ಕ್ಷೇತ್ರಕ್ಕೆ ಸಾಗಿತು.
ಬಳಿಕ ಹಿರಣ್ಯ ಶ್ರೀಕ್ಷೇತ್ರಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಶಿಲ್ಪಿಗಳಿಂದ ನೂತನ ಆಲಯ ಪರಿಗ್ರಹ, ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯನಡೆಯಿತು.
ಮೇ 15ರಂದು ಪ್ರಾತಃಕಾಲ ಪುಣ್ಯಾಹಾರ್ಚನೆ, ಗಣಪತಿ ಹೋಮ, ಪ್ರಾಯಶ್ಚಿತ್ತ ಹವನಗಳು, ಸುವಾಸಿನಿ ಪೂಜೆ, ಕನ್ನಿಕಾ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಪ್ರಸಾದ ಭೋಜನ ನಡೆದವು.
ಅಂದು ಸಂಜೆ ದೀಪಾರಾಧನೆ, ತ್ರಿಕಾಲ ಪೂಜೆ, ಜಲಶುದ್ಧಾದಿ ಕ್ರಿಯೆಗಳು, ಮಂಟಪ ಸಂಸ್ಕಾರ ಹಾಗೂ ಮಹಾಪೂಜೆ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.