Advertisement

ಅತಿಕ್ರಮಣ ಬಗ್ಗೆ ಚೀನ ಗಡಿಯಲ್ಲಿ ಕಟ್ಟೆಚ್ಚರ: ಪಡೆಗಳಿಗೆ ರಾಜನಾಥ್‌

07:23 PM May 20, 2017 | udayavani editorial |

ಗ್ಯಾಂಗ್‌ಟೋಕ್‌ : ಭಾರತ – ಚೀನ ಗಡಿಯಲ್ಲಿ ಚೀನೀಯರ ಅತಿಕ್ರಮಣದ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು ಶನಿವಾರ ಐಟಿಬಿಪಿ ದಳ ಮತ್ತು ಹಿಮಾಲಯ ತಪ್ಪಲಿನ ರಾಜ್ಯಗಳಿಗೆ ಕರೆ ನೀಡಿದರು. ಚೀನೀ ಅತಿಕ್ರಮಣವು ಪರಿಕಲ್ಪನೆಗಳ ವ್ಯತ್ಯಾಸಗಳಿಂದ ಘಟಿಸಬಹುದಾದ ಸಾಧ್ಯತೆಗಳಿವೆ ಎಂದವರು ಎಚ್ಚರಿಸಿದರು. 

Advertisement

ಐದು ಹಿಮಾಲಯನ್‌ ರಾಜ್ಯಗಳ ಮುಖ್ಯಮಂತ್ರಿಗಳ ಮೊತ್ತ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್‌ ಸಿಂಗ್‌, 3,488 ಕಿ.ಮೀ. ಚೀನ – ಭಾರತ ಗಡಿಯುದ್ದಕ್ಕೂ ವಾಸವಾರುವ ಭಾರತೀಯರು ಬೇರೆಡೆಗೆ ವಲಸೆ ಹೋಗದಂತೆ ಮಾಡಲು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸರಕಾರಗಳು ನಿರಂತರವಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. 

ಗಡಿ ಕುರಿತಾದ ಪರಿಕಲ್ಪನೆಗಳಲ್ಲಿನ ವ್ಯತ್ಯಾಸದಿಂದಾಗಿ ಚೀನಿಯರು ಭಾರತೀಯರಿಗೆ ಮುಖಾಮುಖೀಯಾಗುವ ಸಾಧ್ಯತೆಗಳಿವೆ; ಚೀನೀಯರ ಸಂಭವನೀಯ ಅತಿಕ್ರಮಣದ ಬಗ್ಗೆ ಹಿಮಾಲಯ ತಪ್ಪಲ ರಾಜ್ಯಗಳು, ಗಡಿ ಕಾವಲು ಪಡೆಗಳು ಕಟ್ಟೆಚ್ಚರ ವಹಿಸಬೇಕು ಎಂದು ರಾಜನಾಥ್‌ ಸಿಂಗ್‌ ಪುನರುಚ್ಚರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next