Advertisement

ಭ್ರೂಣ ಹತ್ಯೆ ಸಂಭವಿಸದಂತೆ ಜಾಗೃತರಾಗಿ; ರಾಮಚಂದ್ರನ್

06:21 PM Mar 10, 2021 | Team Udayavani |

ಬೀದರ: ಭ್ರೂಣ ಹತ್ಯೆಯಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಂಭವಿಸದಂತೆ ಅಧಿಕಾರಿಗಳು ಮತ್ತು ಇನ್ನಿತರ ಎಲ್ಲರೂ ಜಾಗೃತರಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಹೇಳಿದರು.ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಪೋಷಣ್‌ ಅಭಿಯಾನ ಯೋಜನೆ, ಮಹಿಳಾ ಶಕ್ತಿ ಕೇಂದ್ರ, ಸ್ವಯಂ ಸೇವಾ ಸಂಸ್ಥೆಗಳ ಹಾಗೂ “ಸಬಿ’ ಒನ್‌ ಸ್ಟಾಪ್‌ ಸೆಂಟರ್‌ ಆಶ್ರಯದಲ್ಲಿ ನಡೆದ ಮಹಿಳಾ
ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಿಇಒ ಜಹೀರಾ ನಸೀಮ್‌ ಮಾತನಾಡಿ, ಮಹಿಳಾ ದಿನಾಚರಣೆಯು ಮಹಿಳೆಯರಿಗೆ ಒಂದು ವಿಶೇಷ ದಿನವಾಗಿದೆ. ಈಗ ಮಹಿಳೆಯರು ವಿಭಿನ್ನ ಕ್ಷೇತ್ರಗಳಲ್ಲಿ
ಕೆಲಸ ಮಾಡುತ್ತಿರುವುದು ವಿಶೇಷ ಬೆಳವಣಿಗೆಯಾಗಿದೆ. ಉದ್ಯೋಗ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ಕಾರ್ಯನಿರ್ವಹಿಸುತ್ತ ಪ್ರತಿಯೊಂದು ವಿಷಯದಲ್ಲಿಯೂ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಹೇಳಿದರು.

ಸಿಪಿಐ ಮಲ್ಲಮ್ಮ ಚೌಬೆ ಮಾತನಾಡಿ, ಪ್ರತಿಯೊಬ್ಬ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ಘನತೆ, ಗೌರವ ಹೊಂದಿರುವುದರ ಜೊತೆಗೆ ಜವಾಬ್ದಾರಿಯುತವಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಸ್ವಾಗತಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನೊಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌., ಸ್ತ್ರೀರೋಗತಜ್ಞೆ ಡಾ| ಉಮಾ ದೇಶಮುಖ, ಬಿಸಿಎಂ ಅಧಿಕಾರಿ ಸರೋಜಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಿಜಯಲಕ್ಷ್ಮೀ , ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಬಿ. ಯದಲಾಪುರೆ, ಪಿಎಸ್‌ಐ ಸುವರ್ಣ, ಸಾಮಾಜಿಕ ಭದ್ರತೆಗೆ ಹಾಗೂ ಪಿಂಚಣಿ ಶಾಖೆಯ ಸಹಾಯಕ ನಿರ್ದೇಶಕಿ ಪಾವನಿ, ತಹಶೀಲ್ದಾರ್‌ ಗಂಗಾದೇವಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ, ಸಾಹಿತಿ ರಜೀಯಾ ಬಳಬಟ್ಟಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಗೀತಾ ಗಡ್ಡೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next