Advertisement

ಮನಸ್ಸಿನ ದಾರಿ ಸರಿಯಾಗಿರಲಿ

03:17 PM Dec 17, 2018 | |

ಪ್ರತಿಯೊಬ್ಬರಲ್ಲೂ ಒಂದು ಮನಸ್ಸು ಇರುತ್ತದೆ. ಇದರ ಕಾರ್ಯ ಅಮೂರ್ತ ಹಾಗೂ ಅನೂಹ್ಯ. ಇದರ ರೂಪ- ಸ್ವರೂಪ- ಆಗುಹೋಗುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಲ್ಲಿ ಇಂದಿಗೂ ಸಿಕ್ಕಿಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ.

Advertisement

ಒಬ್ಬನ(ಳ) ಆಲೋಚನೆ- ಮೆದುಳಿನ ಶಕ್ತಿ ಅವನ ಹುಟ್ಟು ಅಥ ವಾ ಅದಕ್ಕೂ ಮೊದಲೇ ಹುಟ್ಟು ಹಾಕಿರುತ್ತದೆ. ಇಂಥ ಆಲೋಚನೆ ಮಾಡುವ ಮನಸ್ಸು ಹೊಂದಿದ ಮೆದುಳಿನ ಕಾರ್ಯದಲ್ಲಿ ಒಂದಿಷ್ಟು ಸೂಕ್ಷ್ಮತೆ ಇರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಯೋಚನೆ ಮಾಡುತ್ತಾರೆಂದರೆ ಆಶ್ಚರ್ಯವಾಗುತ್ತದೆ. ಒಂದೊಂದು ವಸ್ತು ವಿಷಯ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ಹತ್ತು ಹಲವಾರು ರೀತಿಯಲ್ಲಿ ಯೋಚನೆಗಳನ್ನು ಮಾಡುತ್ತಾರೆ. ಎಲ್ಲಿಯವರೆಗೆಂದರೆ ಒಬ್ಬರು ಭಾಷಣ ಮಾಡಿದ್ದನ್ನು ಕೇಳಿದ ಹಲವರು ಹಲವಾರು ರೀತಿಯಲ್ಲಿ ಅದನ್ನು ಅರ್ಥೈಸಿಕೊಳ್ಳುವುದುಂಟು. ಹಾಗಾದರೆ, ವ್ಯಕ್ತಿಯೊಬ್ಬನ ಆಲೋಚನೆಗಳು ತೀರಾ ವಯಕ್ತಿಕವೇ ಆಗಿದೆ ಎಂಬುದು ನಿಜ.

ಹಾಗಾದರೆ ಯಾವುದೇ ಒಂದು ವಿಚಾರದತ್ತ ನೋಟ ಹರಿಸುವಾಗ, ಕೇಳಿಸಿಕೊಳ್ಳುವಾಗ ಅದಕ್ಕೆ ಪ್ರತಿಕ್ರಿಯಿಸಬೇಕು ಎನ್ನುವಾಗ ನಮ್ಮ ಆಲೋಚನೆಗಳು ಹೇಗಿದ್ದರೆ ಚೆನ್ನ ?.  ಈ ಪ್ರಶ್ನೆಗೆ ಉತ್ತರ ಅಷ್ಟೇ ಕಠಿನ, ಅಷ್ಟೇ ಸಂಕೀರ್ಣ. ಪ್ರತಿಯೊಂದು ಕೆಲಸ ಕಾರ್ಯಗಳೊಡನೆ ಸಮತೂಕವಾಗಿ ಸಂವಹಿಸಬಲ್ಲ ಮೌಖಿಕ, ಶಾಬ್ದಿಕ ಕ್ರಿಯೆಗಳು ಹೇಗೋ ನಡೆದರೆ ಅದರಲ್ಲಿ ಸಮತೋಲನದ ಸಂಪರ್ಕ ಸಾಧ್ಯವಿಲ್ಲ. ಹೀಗಿರುವಾಗ ಅದರ ಪರಿಣಾಮದ ಸಂಪರ್ಕ ಸಾಧ್ಯವಿಲ್ಲ. ಹಾಗಾ ಗಿ ಅದರ ಪರಿಣಾಮಕಾರಿತ್ವದ ಬಗ್ಗೆ ಆತ ತುಂಬಾ ಯೋಚಿಸಬೇಕಾಗಿದೆ. ಇದನ್ನೇ 360 ಡಿಗ್ರಿ ಯೋಚನೆ ಎನ್ನುವುದು. ಇದುವೇ ಹತ್ತು, ನೂರು ಸಹಸ್ರಾರು ದಿಕ್ಕಿನ ಆಲೋಚನೆ.

ಬುದುಕು ನಮ್ಮ ಮೊದಲ ಮಾತುಗಳಲ್ಲಿ ಜನನದಾರಂಭವಾಗಿರಬಹುದು. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ಬದಲಿಗೆ ಇವೆಲ್ಲವೂ ಇತರರಿಗೆ, ಇನ್ನೊಬ್ಬರಿಗೆ, ಇನ್ನೊಬ್ಬರಿಂದ ನಮಗೆ ಎಂಬುದು ಎಲ್ಲರಿಗೂ ಅನ್ವಯವಾಗುವಂಥದ್ದು. ಇಂತಿರುವಾಗ ವ್ಯಕ್ತಿಯೊಬ್ಬ ಉತ್ತಮ ಸಂವಾಹಕನಾಗುವಲ್ಲಿ ಹೇಗೆ ನುಡಿಯಬೇಕು? ಅವನ ಆಲೋಚನೆಗಳು ಹೇಗಿರಬೇಕು? ಎಂಬಲ್ಲಿ ಒಂದಿಷ್ಟು ತರ್ಕಬದ್ಧ, ವಿಮರ್ಶಾತ್ಮಕ, ವಿಶ್ಲೇಷಣಾತ್ಮಕ ಚಿಂತನೆ ಇದ್ದರೆ ಅದರ ಪ್ರಕಟನೆಯಲ್ಲಿ ಒಂದಿಷ್ಟು ನ್ಯಾಯವಿರುತ್ತದೆ. ಆತ್ಮಸಾಕ್ಷಿ ಇರುತ್ತದೆ. ಇದು ಶಕ್ತಿಶಾಲಿಯೂ ಆಗಿರುತ್ತದೆ. 

ವ. ಉಮೇಶ್‌ ಕಾರಂತ,
ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next