ಸುರಪುರ: ಅಂಗವಿಕಲ ಮಕ್ಕಳನ್ನು ಅಪಮಾನಿಸದೆ ಸಾಮಾನ್ಯರಂತೆ ಗೌರವದಿಂದ ನೋಡಿಕೊಳ್ಳಬೇಕು ಎಂದು ಶಾಸಕ ನರಸಿಂಹ ನಾಯಕ ರಾಜೂಗೌಡ ಹೇಳಿದರು. ನಗರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವ ಶಿಕ್ಷಣ ಅಭಿಯಾನದಲ್ಲಿ ವಿಶೇಷ ಅಗತ್ಯವುಳ್ಳ ಅಂಗವಿಕಲ ಮಕ್ಕಳಿಗೆ ಏರ್ಪಡಿಸಲಾಗಿದ್ದ ವೈದ್ಯಕೀಯ ಮೌಲ್ಯಾಂಕನ ಶಿಬಿರದದಲ್ಲಿ ಅವರು ಮಾತನಾಡಿದರು.
ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸರಕಾರ ಸರ್ವ ಶಿಕ್ಷಣ ಅಭಿಯಾನದಡಿ ಅಂಗವಿಕಲ ಮಕ್ಕಳಿಗೆ ಆರೋಗ್ಯ ತಪಾಸಣೆಯೊಂದಿಗೆ ಶಿಕ್ಷಣ ಕೊಡಿಸಲು ವಿಶೇಷ ಯೋಜನೆ ರೂಪಿಸಿದೆ. ಅಂಗವಿಕಲ ಮಕ್ಕಳು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಗವಿಕಲ ಮಕ್ಕಳ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು. ಇತರೆ ಮಕ್ಕಳಿಗೆ ನೀಡುವಷ್ಟು ಪ್ರೋತ್ಸಾಹ ಅವರಿಗೂ ನೀಡಬೇಕು. ಅಂಗವಿಕಲರೆ ಶಾಪ ಎಂದು ಭಾವಿಸದೇ ಪೋಷಕರು ಇತರೆ ಮಕ್ಕಳಂತೆ ಪರಿಗಣಿಸಿ ಹೆಚ್ಚಿನ ಕಾಳಜಿ ವಹಿಸಬೇಕು. ಸಮಾಜದಲ್ಲಿ ಅವರು ಮುಂದೆ ಬರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಒಟ್ಟು 254 ವಿಶೇಷ ಚೇತನ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಹುಬ್ಬಳ್ಳಿ ಮನೋ ವಿಕಾಸ ತಜ್ಞ ಡಾ| ಜೆ.ಕೆ. ಹಿರೇಮಠ ಮತ್ತು ತಂಡದವರು ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು.
ಈ ವೇಳೆ 154 ಮಕ್ಕಳಿಗೆ ಸಾಧನ ಸಲಕರಣೆಗಳ ಅವಶ್ಯಕತೆ ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ(ತಾತಾ), ಯಲ್ಲಪ್ಪ ಕುರುಕುಂದಿ, ಬಿಇಒ ನಾಗರತ್ನ ಓಲೇಕಾರ, ಕಾಲೇಜಿನ ಉಪ ಪ್ರಾಚಾರ್ಯ ಯಲ್ಲಪ್ಪ ಕಾಡಮೂರು, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ¤ಕ್ಷ ಹಳೆಪ್ಪ ಕಾಜಾಂಜಿ, ಸುರಪುರ ತಾಲೂಕು ಸಂಘದ ಅಧ್ಯಕ್ಷ ಸೋಮರೆಡ್ಡಿ ಮಂಗೀಹಾಳ, ಡಾ| ಜೆ.ಕೆ.ಹಿರೇಮಠ, ಓಂಪ್ರಕಾಶ ಅಂಬುರೆ, ಡಾ| ಹರ್ಷವರ್ಧನ ರಫಗಾರ್, ಡಾ| ಇಮಿ¤ಯಾಜ್ ಹುಸೇನ್ ರಂಗಂಪೇಟೆ. ಎಪಿಎಫ್‌ನ ಅನ್ವರ್ ಜಮಾದಾರ್, ಮುಖಂಡ ಗುರುರಾಜ್ ಗುತ್ತೇದಾರ ಇದ್ದರು.