Advertisement
ಫರ್ನೀಚರ್ ಗಳ ಬಣ್ಣ ಬದಲಾಯಿಸಿಮನೆಯ ಒಳಾಂಗಣ, ಹೊರಾಂಗಣ ಅಲಂಕಾರಕ್ಕೆ ಬಳಸುವ ಫರ್ನಿಚರ್ ಅಥವಾ ಅವುಗಳ ಫ್ಯಾಬ್ರಿಕ್ ಗಳ ಬಣ್ಣ ಬದಲಾವಣೆ ಸಾಧ್ಯವಿದ್ದರೆ ಮಾಡಿ. ಮುಖ್ಯವಾಗಿ ಗಾಢ ಹಸುರು, ಕ್ರೀಮ್, ಪೀಚ್, ತೆಳು ಹಳದಿ ಬಣ್ಣದ ಫರ್ನೀಚರ್ ಗಳು ಹೆಚ್ಚು ಆಕರ್ಷಕವಾಗಿ ಕಾಣುವುದು.
ಒಂದೇ ಬಣ್ಣದ ಹೆಚ್ಚು ಬ್ರೈಟ್ ಆಗಿ ಕಾಣುವ ಕುಶನ್ಸ್ ಗಳನ್ನು ಬಳಸಿ. ಅದು ಮನೆಯ ಗೋಡೆ, ಸೋಫಾ ಸೆಟ್‌ಗೆ ಹೊಂದಿಕೆಯಾಗುವಂತಿರಲಿ. ಬೇರೆ ಬೇರೆ ಆಕೃತಿಯ, ಗಾತ್ರದ ಕುಶನ್ಸ್ ಗಳನ್ನು ಅಲಂಕಾರಕ್ಕೆ ಬಳಸಬಹುದು. ಹಗುರವಾದ ವಸ್ತುಗಳಿಂದ ಅಲಂಕರಿಸಿ
ಕಾಡಿನಲ್ಲಿ ಸಿಗುವ ಬಳ್ಳಿಯಿಂದ ಮಾಡಿರುವ ಫರ್ನಿಚರ್ ಗಳು, ಬಾಸ್ಕೆಟ್, ಬುಟ್ಟಿಗಳನ್ನು ಮನೆಯ ಅಲಂಕಾರಕ್ಕೆ ಬಳಸಬಹುದು. ಇವು ಹೆಚ್ಚು ಆರಾಮದಾಯಕ ಮತ್ತು ಪರಿಸರ ಸ್ನೇಹಿ ವಸ್ತುಗಳಾಗಿವೆ. ಮನೆಗೆ ಸಾಂಪ್ರದಾಯಿಕ ಲುಕ್ ಕೊಡುವ ಈ ವಸ್ತುಗಳು ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಲಿವಿಂಗ್ ರೂಮ್‌ನ ಮೂಲೆಗಳಲ್ಲಿ ಇಂಥ ವಸ್ತುಗಳಿಂದ ಮಾಡಿದ ಬುಟ್ಟಿಗಳಲ್ಲಿ ಪ್ಲಾಸ್ಟಿಕ್ ಹೂಗಳನ್ನು ಇಟ್ಟು ಅಲಂಕರಿಸಬಹುದು.
Related Articles
ಇನ್ನು ಮನೆಯ ಸೌಂದರ್ಯ ಹೆಚ್ಚಿಸುವಲ್ಲಿ ನೇತಾಡುವ ಗಿಡಗಳು ಹೆಚ್ಚು ಪ್ರಾಮುಖ್ಯ ಪಡೆದಿವೆ. ಮನೆಯ ಒಳಾಂಗಣ, ಹೊರಾಂಗಣದಲ್ಲಿ ಗಾಜಿನ ಪಾತ್ರೆಗಳಲ್ಲಿ ನೇತಾಡುವ ಗಿಡಗಳನ್ನು ಹಾಕಿದರೆ ಮನೆಯೊಳಗೆ ತಾಜಾ ಗಾಳಿ ಬರುವುದಲ್ಲದೇ ಮನೆಯನ್ನು ತಂಪಾಗಿಯೂ ಇರಿಸುತ್ತದೆ. ಇದನ್ನು ಕಿಚನ್ ಶೆಲ್ಫ್ ನ ಮೇಲೆಯೂ ಇಡಬಹುದಾಗಿದೆ.
Advertisement
ಗೋಡೆಗಳ ಬಣ್ಣಬೇಸಗೆಯಲ್ಲಿ ಗೋಡೆಗಳ ಬಣ್ಣ ಕಣ್ಣಿಗೆ ಆಕರ್ಷಕವಾಗಿ ಕಾಣುವಂತಿರಬೇಕು. ಹೆಚ್ಚಾಗಿ ನೀಲಿ, ಬಿಳಿ ಬಣ್ಣದಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಗಿಡಗಳನ್ನು ಬೆಳೆಸಿ
ಮನೆಯ ಒಳಾಂಗಣ, ಹೊರಾಂಗಣದಲ್ಲಿ ಹಸಿರು ಗಿಡಗಳನ್ನು ಬೆಳೆಸಿ. ಇದು ಇತ್ತೀಚಿನ ಟ್ರೆಂಡ್ ಕೂಡ ಆಗಿದೆ. ಟೇಬಲ್, ಗೋಡೆಗಳ ಮೂಲೆ, ದ್ವಾರಗಳಲ್ಲಿ ಗಿಡಗಳನ್ನಿಡುವುದರಿಂದ ಮನೆಯ ಸೌಂದರ್ಯ ಹೆಚ್ಚಾಗುವುದು. ಹಸುರು- ಬಿಳಿ ಬಣ್ಣ ಇಲ್ಲಿ ಸೇರುವುದರಿಂದ ಮನೆಯ ಆಕರ್ಷಣೆ ಮತ್ತಷ್ಟು ಹೆಚ್ಚಾಗುವುದು. ಜತೆಗೆ ಮನೆಯೊಳಗೆ ಸ್ವಚ್ಛ ಗಾಳಿ ಹರಿದು ತಂಪಾಗಿರಿಸುತ್ತದೆ. ಕನ್ನಡಿ ಬಳಸಿ
ಕನ್ನಡಿಗಳು ಮನೆಯೊಳಗೆ ಹೆಚ್ಚು ಬೆಳಕು ಇರುವಂತೆ ಮಾಡುವುದು. ಜತೆಗೆ ಕೊಠಡಿಯು ಹೆಚ್ಚು ವಿಸ್ತಾರವಾಗಿ ಕಾಣುವಂತೆ ಮಾಡುತ್ತದೆ. ಸಾಮಾನ್ಯ ವಿನ್ಯಾ ಸದ ಚೌಕ, ತ್ರಿಕೋನ, ರೌಂಡ್ ಮಾದರಿಯ ಗಾಜುಗಳನ್ನು ಲೀವಿಂಗ್ ರೂಮ್ ನಲ್ಲಿ ಇರಿಸಬಹುದು. ಇದು ಮನೆಯೊಳಗೆ ಬೇಸಗೆ ಸೌಂದರ್ಯದ ಅನುಭಮತ್ತು ಹಿತವನ್ನು ಕೊಡುವುದು. ವಿ.ಕೆ.