Advertisement
ಸೋಮವಾರ ಇಲ್ಲಿನ ಸಕೀìಟ್ ಹೌಸ್‌ನಲ್ಲಿ ಮುಂಗಾರು ಪೂರ್ವ ಸಿದ್ಧತೆ ಹಾಗೂ ಪ್ರಾಕೃತಿಕ ವಿಕೋಪ ಕುರಿತು ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ, ಈ ವೇಳೆ ಪ್ರಾಕೃತಿಕ ಅವಘಡ ಉಂಟಾದಲ್ಲಿ ಸರಕಾರ ಜನರೊಂದಿಗೆ ಇರುತ್ತದೆ ಎಂದರು.
Related Articles
Advertisement
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪ್ರತಿಕ್ರಿಯೆ ನೀಡಿ, ಈ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಆಧಾರದ ಮೇಲೆ ಈಗಾಗಲೇ 87 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ, ಸಂತ್ರಸ್ತರ ಸ್ಥಳಾಂತರ ಸೇರಿದಂತೆ ಅಲ್ಲಿ ಊಟ, ಉಪಾಹಾರ ಸೇರಿದಂತೆ ಎಲ್ಲ ರೀತಿಯ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಎಸ್‌ಡಿಆರ್‌ಎಫ್ ತಂಡಗಳು ಸಿದ್ಧವಿದ್ದು, ಎನ್‌ಡಿಆರ್‌ಎಫ್ ತಂಡ ಆಗಮಿಸಬೇಕಿದೆ, ಜಿಲ್ಲೆಗೆ ಮುಂಗಾರು ಜೂನ್ 4ಕ್ಕೆ ಪ್ರವೇಶವಾಗಲಿದ್ದು, ಜೂನ್ 1ಕ್ಕೆ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸನ್ನದ್ದ ಸ್ಥಿತಿಯಲ್ಲಿರಿಸಲಾಗುವುದು, ಸದ್ಯ ಪರಿಹಾರ ನೀಡುವುದಕ್ಕಾಗಿ ತಹಶೀಲ್ದಾರರಿಗೆ 3.5 ಕೋಟಿ ರೂ.ನೀಡಿದ್ದು ಹೆಚ್ಚಿನ ಅನುದಾನಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ರಸ್ತೆ ದುರಸ್ತಿಗೆ ಸೂಚನೆಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಆರ್‌ಡಿಪಿಆರ್ ಇಲಾಖೆ ವ್ಯಾಪ್ತಿಯ ರಸ್ತೆಗಳಲ್ಲಿ ಎಲ್ಲೆಲ್ಲಿ ಹೊಂಡ ಇದೆಯೋ ಮುಚ್ಚಿ, ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದರು. ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ದ.ಕ ಜಿ. ಪಂ. ಸಿಇಒ ಡಾ| ಕುಮಾರ್, ಮಂಗಳೂರು ಡಿಸಿಪಿ ಅನುÏಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ರಾಜು, ಗಿರೀಶ್ ನಂದನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರರು ಉಪಸ್ಥಿತರಿದ್ದರು. ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಹೊಣೆ
ಮೆಸ್ಕಾಂ ಸಬ್‌ಸ್ಟೇಷನ್ ಹಾಗೂ ಸೆಕ್ಷನ್ ವ್ಯಾಪ್ತಿಯಲ್ಲಿ ಹೆಚ್ಚುವರಿ ಎರಡು ಜೀಪ್ ಹಾಗೂ ಸಿಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಜಂಟಿಯಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ, ಮನೆಗಳು, ವಿದ್ಯುತ್ ಮಾರ್ಗದ ಮೇಲಿರುವ ಮರಗಳ ಗೆಲ್ಲು ತೆರವು ಮಾಡಬೇಕು, ತೆರವು ಮಾಡಲು ಅನುಮತಿ ಕೇಳಿದರೆ ತತ್‌ಕ್ಷಣ ಅನುಮತಿಯನ್ನೂ ನೀಡಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿದರೆ ಅದಕ್ಕೆ ಆಯಾ ಜೆಇ ಮತ್ತು ವಲಯ ಅರಣ್ಯಾಧಿಕಾರಿ ಹೊಣೆಯಾಗುತ್ತಾರೆ, ಅವರ ವಿರುದ್ಧ ಕ್ರಮ ಜರಗಿಸಬೇಕಾಗುತ್ತದೆ ಎಂದು ಖಾದರ್ ಎಚ್ಚರಿಸಿದರು. ಶಾಲಾರಂಭ ಮುಂದೂಡಿಕೆ ಇಲ್ಲ
ಜಿಲ್ಲೆಯಲ್ಲಿ ನಿಗದಿಯಂತೆ ಶಾಲೆ ಪುನರಾರಂಭಗೊಳ್ಳಲಿದೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಮಕ್ಕಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು. ಶಾಲೆ ಮುಂದೂಡಿದರೆ ವೇಳಾಪಟ್ಟಿಯಲ್ಲಿ ಸಮಸ್ಯೆಯಾಗಬಹುದು, ಹಾಗಾಗಿ ಸದ್ಯ ಶಾಲೆ ಮುಂದೂಡುವ ಪರಿಸ್ಥಿತಿ ಇಲ್ಲ. ಶಾಲೆಗಳಿಗೆ ಬೇಕಾದ ಪಠ್ಯಪುಸ್ತಕ, ಸಮವಸ್ತ್ರಗಳೂ ಶೇ.100ರಷ್ಟು ಲಭ್ಯವಿವೆ. ಶಾಲೆಗಳಿಗೆ ನಮ್ಮ ಜಿಲ್ಲೆಗೆ 1008 ಅತಿಥಿ ಶಿಕ್ಷಕರ ನಿಯೋಜನೆ ಮಾಡಿದ್ದು, ಇದರಿಂದಾಗಿ ಶೇ.60ರಷ್ಟು ಶಿಕ್ಷಕರ ಕೊರತೆಯೂ ನೀಗಿದಂತಾಗಿದೆ ಎಂದರು. 10 ದಿನದೊಳಗೆ ಪರಿಹಾರ
ವಿಕೋಪದಿಂದಾಗಿ ಮನೆಗೆ ಹಾನಿಯುಂಟಾದರೆ ಕೂಡಲೇ ತತ್‌ಕ್ಷಣದ ಪರಿಹಾರವಾಗಿ ಅಗತ್ಯ ವಸ್ತು ಖರೀದಿಗೆ 10 ಸಾವಿರ ರೂ. ನೀಡಲಾಗುವುದು, ಬಳಿಕ ಎರಡು ದಿನದೊಳಗೆ ಮನೆಹಾನಿಯನ್ನು ಅಂದಾಜಿಸಿ ವರದಿ ಪಡೆದುಕೊಂಡು 10 ದಿನದೊಳಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬ ಸೂಚನೆ ನೀಡಲಾಗಿದೆ.