Advertisement
ವಸತಿ ವ್ಯವಸ್ಥೆ: ಪ್ರವಾಸ ಹೋದಲ್ಲಿ ಸುರ ಕ್ಷಿತ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯ. ಸರಿಯಾದ ಹೊಟೇಲ್ ಪರಿಶೀಲಿಸಿ ಡಿಸ್ಕೌಂಟ್ ಲೆಕ್ಕಾಚಾರ ಹಾಕಿ ಹೊಟೇಲನ್ನು ಬುಕ್ ಮಾಡಿಕೊ ಳ್ಳುವುದು ಒಳ್ಳೆಯದು. ಸುರಕ್ಷಿತ ಮತ್ತು ಹಣ ಉಳಿತಾಯ ಎರಡು ದೃಷ್ಟಿಯಿಂದಲೂ ಉತ್ತಮ.
Related Articles
Advertisement
ಸಾರಿಗೆ: ಪ್ರವಾಸ ಹೋದಲ್ಲಿ ಅಲ್ಲಿನ ಸುತ್ತ ಮುತ್ತ ಸ್ಥಳ ವೀಕ್ಷಿಸಲು ಟ್ಯಾಕ್ಸಿ, ಆಟೋ ಹಿಡಿಯುವ ಬದಲು ಸ್ಥಳೀಯ ಬಸ್ಸು, ರೈಲನ್ನು ಹತ್ತಬಹುದು. ಇದರಿಂದ ಖರ್ಚು ಕಡಿಮೆ ಮಾಡಬಹುದು.
ಮೊಬೈಲ್ ಬಳಕೆ: ಬೇರೆ ರಾಜ್ಯ, ಬೇರೆ ದೇಶಕ್ಕೆ ಹೋದರೆ ಮೊಬೈಲ್ ಕರೆನ್ಸಿ ಚಾರ್ಜ್ ದುಪ್ಪಟ್ಟಾ ಗುತ್ತದೆ. ಈ ಸಂದರ್ಭ ಸ್ಥಳೀಯ ಸಿಮ್ ಬಳ ಸಬಹುದು.
ಮಕ್ಕಳ ಸುರಕ್ಷೆ: ಪ್ರವಾಸದಲ್ಲಿ ಮಕ್ಕಳನ್ನು ಕರೆದು ಕೊಂಡು ಹೋಗುವುದಿದ್ದರೆ ಅವರ ಆಹಾರ, ಆಟಿಕೆ, ಬಟ್ಟೆಬರೆಗಳನ್ನು ಮನೆಯಿಂದಲೇ ಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ಹೋದಲ್ಲಿ ತೆಗೆದುಕೊಂಡರೆ ದುಬಾರಿ ಎನಿಸುತ್ತದೆ.
ಆನ್ ಲೈನ್ ಬುಕ್ಕಿಂಗ್: ಡಿಜಿಟಲ್ ಲೋಕದಲ್ಲಿ ಬದುಕ ಬಂಡಿಯನ್ನು ಓಡಿಸುತ್ತಿರುವ ನಮಗೆ ಕೈ ಬೆರಳಿನ ತುದಿಯಲ್ಲಿ ಎಲ್ಲ ಸೌಲಭ್ಯಗಳು ಲಭ್ಯ ವಾಗುತ್ತವೆ. ಹಿಂದೆ ಎಲ್ಲ ಗಂಟೆ ಗಟ್ಟಲೆ ಸರದಿ ಸಾಲಿ ನಲ್ಲಿ ನಿಲ್ಲುವ ಗೋಜಲು 4ಜಿ-5ಜಿ ಕಾಲದಲ್ಲಿಲ್ಲ. ಆದ ಕಾರಣ ಎಲ್ಲಿಗೆ, ಯಾವಾಗ ಹೋಗುವುದು ಎಂದು ನಿರ್ಧರಿಸಿ ಏಜೆಂಟರ ಬಳಿ ಹೋಗಿ ಟಿಕೆಟ್ ಬುಕ್ ಮಾಡುವ ಬದಲು ಇಂಟರ್‌ನೆಟ್‌ನಲ್ಲಿ ಬುಕ್ಕಿಂಗ್ ಮಾಡುವುದು ಸುಲಭ.