Advertisement

ಕರುಣೆಯ ಹೃದಯದವರಾಗಿ

11:05 AM Mar 06, 2019 | |

ಚಿತ್ರದುರ್ಗ: ದೇಶದಲ್ಲಿ ಲಕ್ಷೋಪಲಕ್ಷ ದೇವರು ಮತ್ತು ದೇವಸ್ಥಾನಗಳಿವೆ. ದೇವಸ್ಥಾನದಲ್ಲಿ ದೇವರ ಉತ್ಸವಗಳು, ಜಾತ್ರೆಗಳು, ರಥೋತ್ಸವಗಳು ನಡೆಯುತ್ತವೆ. ಮಠಗಳಲ್ಲಿ ಧಾರ್ಮಿಕ ಉತ್ಸವಗಳು ನಡೆಯುತ್ತವೆ. ಆದರೆ ಮುರುಘಾ ಮಠದಲ್ಲಿ ಸಂಸಾರಿಗಳ ಉತ್ಸವವಾದ ಕಲ್ಯಾಣ ಮಹೋತ್ಸವ
ನಡೆಯುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ಮುರುಘಾ ಮಠದ ಬಸವ ಕೇಂದ್ರದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಇವುಗಳ ಸಹಯೋಗದಲ್ಲಿ ಮಂಗಳವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು. ದೇವಾಲಯಗಳಲ್ಲಿ ದೇವರು ಅಲಂಕರಿಸಿದರೆ ಇಲ್ಲಿ ವಧು-ವರರು ಅಲಂಕರಿಸುತ್ತಾರೆ ಎಂದರು.
 
ಶ್ರೀಮಠದಲ್ಲಿ ಇದುವರೆಗೆ 16 ಸಾವಿರಕ್ಕೂ ಹೆಚ್ಚಿನ ಮದುವೆಗಳು ನಡೆದಿವೆ. ಎಲ್ಲರೂ ಸುಖವಾಗಿದ್ದಾರೆ. ಇದು ಮುರಿಗೆ ಶಾಂತವೀರ ಸ್ವಾಮಿಗಳ ತಪೋಭೂಮಿ. ಯಾವುದೇ ಅವಘಡಗಳು ನಡೆಯದಂತೆ ಆಶೀರ್ವಾದ ಸಿಗುತ್ತದೆ. ನಾವು ಕರುಣೆಯ ಹೃದಯದವರಾಗಬೇಕು. ವಧುವನ್ನು ಕಾಡುವ ಭೂತ ಎಂದರೆ ವರದಕ್ಷಿಣೆ. ಸಾಮೂಹಿಕ ವಿವಾಹದಲ್ಲಿ ವರದಕ್ಷಿಣೆಯ ಗೊಡವೆಯೇ ಇರುವುದಿಲ್ಲ ಎಂದರು.

ದಾವಣಗೆರೆ ಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎನ್‌. ಓಂಕಾರಪ್ಪ ಮಾತನಾಡಿ, ಇಲ್ಲಿನ ಕಲ್ಯಾಣೋತ್ಸವವನ್ನು ನೋಡಿದರೆ 12ನೇ ಶತಮಾನದ ಬಸವಣ್ಣನವವರು ಹುಟ್ಟು ಹಾಕಿದ ಅನುಭವ ಮಂಟಪ ನೆನಪಿಗೆ ಬರುತ್ತದೆ. ಎಲ್ಲ ಸಮಾಜದ ಪ್ರತಿಭಾವಂತರನ್ನು ಅಂದು ಒಗ್ಗೂಡಿಸಿ ಸಮಾನತೆ ಸಾರುವ ಕೆಲಸ ಮಾಡಿದರು. ಅಂದಿನ ಹೋರಾಟದ ಫಲದಿಂದ ಇಂದು ಸಮಾನತೆ ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

 ಮುರುಘಾ ಶರಣರು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಬೇರೆ ಬೇರೆ ಸಮಾಜದ ಸ್ವಾಮಿಗಳನ್ನು ಮಾಡಿ ಆ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ್ದಾರೆ. ನಾವು ಬಸವ ತತ್ವದ ಜೊತೆಯಲ್ಲಿ ಹೋಗಬೇಕಿದೆ. ಮುರುಘಾಮಠ ಸದಾ ಪ್ರಯೋಗಶೀಲವಾಗಿದ್ದು, ಶರಣರ ಇಂತಹ ಪ್ರಯತ್ನ ಯಾವತ್ತೂ ಸಫಲವಾಗುತ್ತದೆ ಎಂದರು.

ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು, ನಿಪ್ಪಾಣಿ ಮಲ್ಲಿಕಾರ್ಜುನ ಸ್ವಾಮಿಗಳು, ಹೊಳಲ್ಕೆರೆಯ ಬಸವ ಪ್ರಜ್ಞಾನಂದ ಸ್ವಾಮಿಗಳು, ಕೆಇಬಿ ಷಣ್ಮುಖಪ್ಪ, ಪೈಲ್ವಾನ್‌ ತಿಪ್ಪೇಸ್ವಾಮಿ, ಎನ್‌. ತಿಪ್ಪಣ್ಣ ಇದ್ದರು. ಈ ಸಂದರ್ಭದಲ್ಲಿ ಗಿರೀಶ (ಕಮ್ಮಾರ)-ಕೊಟ್ರಮ್ಮ (ನಾಯಕ) ಅಂತರ್ಜಾತಿ ಸೇರಿದಂತೆ 28 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನೂತನ ವಧು-ವರರಿಗೆ ಎಂ.ಸಿ.ಕೆ.ಎಸ್‌ ಫೌಂಡೇಶನ್‌ ವತಿಯಿಂದ ಉಚಿತ ತಾಳಿ, ವಸ್ತ್ರ ಹಾಗೂ ಅಲಂಕಾರದ ಕಿಟ್‌ ವಿತರಿಸಲಾಯಿತು. ಜಮುರಾ ಕಲಾವಿದರು ವಚನ ಗೀತೆ ಪ್ರಾರ್ಥಿಸಿದರು. ಪ್ರೊ| ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪ್‌ಕುಮಾರ್‌ ನಿರೂಪಿಸಿದರು.

Advertisement

ಬಡವರಿಗೆ ಸಾಮೂಹಿಕ ವಿವಾಹ ವರದಾನ ಮದುವೆ ಮಾಡಿ ಸಾಲ ತೀರಿಸಲಾಗದೆ ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ಆದ್ದರಿಂದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಇಂಥ ಆರ್ಥಿಕ ಸಂಕಷ್ಟಗಳಿಂದ ಮುಕ್ತರಾಗಬೇಕು. ಬಡವರಿಗೆ ಸಾಮೂಹಿಕ ವಿವಾಹ ವರದಾನವಾಗಿದ್ದು, ಅತ್ಯಂತ ಸರಳವಾದ ಮಾರ್ಗ ಇದು. 12ನೇ ಶತಮಾನದ ಕಾರ್ಯಗಳು ಮುರುಘಾ ಮಠದ ಮೂಲಕ ಇಂದಿಗೂ ಮುಂದುವರೆಯುತ್ತಿವೆ ಎಂದು ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next