Advertisement

ಎಚ್ಚರವಿರಲಿ, ಚಟ್ಟ ಹತ್ತಿಸುತ್ತವೆ ದುಶ್ಚಟಗಳು: ಸುಂಕದ

11:08 AM Aug 02, 2018 | |

ಕಲಬುರಗಿ: ಮಾರಕ ರೋಗಗಳಿಗೆ ಕಾರಣವಾಗುವ ಮದ್ಯವ್ಯಸನದಂತಹ ದುಶ್ಚಟಗಳು ಮನುಷ್ಯನನ್ನು ಚಟ್ಟಕ್ಕೆ ಕರೆದೊಯ್ಯುತ್ತದೆ. ಇಂದಿನ ಯುವಕರು ಹೆಚ್ಚಾಗಿ ಮೊಬೈಲ್‌, ಗಣಕಯಂತ್ರದ ಮುಂದೆ ಕೂತು, ಮೊಬೈಲ್‌ನಲ್ಲಿ ಮಾತನಾಡಲು ಹೆಚ್ಚಿನ ಸಮಯ ಕಳೆಯುವ ಬದಲು ಒಂದಿಷ್ಟು ಓದಿನಲ್ಲಿ ಕಳೆದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುವುದು ಎಂದು ವೈದ್ಯ ಸಾಹಿತಿ ಡಾ| ಶಾಂತವೀರ ಬಿ. ಸುಂಕದ ತಿಳಿಸಿದರು.

Advertisement

ಇಲಕಲ್‌-ಚಿತ್ತರಗಿಯ ವಿಜಯ ಮಹಾಂತೇಶ್ವ ಸಂಸ್ಥಾನಮಠದ ಲಿಂ.ಪೂಜ್ಯ ಡಾ| ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದ ಮಲ್ಲಿಕಾರ್ಜುನ ಖರ್ಗೆ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ವ್ಯಸನಮುಕ್ತ ಸಮಾಜಕ್ಕೆ ಬಸವಾದಿ ಶರಣರ ಕೊಡುಗೆ’ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗದೀಶ ಮರಪಳ್ಳಿ ಮಾತನಾಡಿ, ಭಾರತ ಸಮಷ್ಟಿ ರಾಷ್ಟ್ರವಾಗಬೇಕಾದರೆ ಶರಣತತ್ವವನ್ನು ಸಂವಿಧಾನ ರೂಪವಾಗಿ ಪರಿವರ್ತನೆಯಾಗಬೇಕು. ಆರ್ಥಿಕ ಸಮಾನತೆಗೆ ಕಾಯಕ ಮತ್ತು ದಾಸೋಹ ಎಂಬ ಎರಡು ಮಹತ್ವದ ಸೂತ್ರಗಳನ್ನು ಕಡ್ಡಾಯಗೊಳಿಸಬೇಕು ಎಂದರು.
 
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ| ಕುಪೇಂದ್ರ ಪಾಟೀಲ ಮಾತನಾಡಿ, ಲಿಂ| ಮಹಾಂತಪ್ಪರವರು ಬಸವಾದಿ ಶರಣರ ತತ್ವಗಳಂತೆ ನಡೆದುಕೊಂಡವರು. ತಮ್ಮ ಮಹಾಂತ ಜೋಳಿಗೆಯ ಮೂಲಕ ಸಾವಿರಾರು ವ್ಯಸನಿಗಳನ್ನು ಸನ್ಮಾರ್ಗಕ್ಕೆ ತಂದರು ಎಂದರು. 

ಮಹಾತ್ಮಾ ಜ್ಯೋತಿಭಾಫುಲೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಕೋಡ್ಲಾ, ಜಿ.ಪಂ. ಮಾಜಿ ಸದಸ್ಯೆ ಜಯಶ್ರೀ ಅಶೋಕ ಸಾವಳೇಶ್ವರ, ಜಗನ್ನಾಥ ಲಗಶೆಟ್ಟಿ, ಎಸ್‌.ಬಿ. ಸಾಗರ, ಬಿ.ಎಸ್‌. ಮಾಲಿಪಾಟೀಲ, ಬಿ.ವಿ. ಮಾಲೆ, ಆರ್‌.ಆರ್‌
.ಹಿರೇಮಠ, ನೀಲಕಂಠ ಕಣ್ಣಿ, ಬಕ್ಕಪ್ಪ ಕಳಸ್ಕರ್‌, ಶಿವರಾಜ ಅಂಡಗಿ, ಎಸ್‌.ಎಂ. ಪಟ್ಟಣಕರ, ಶಿವಾನಂದ ಮಠಪತಿ, ಶ್ರೀಕಾಂತ ಪಾಟೀಲ ತಿಳಗೂಳ, ಸತೀಶ ಸಜ್ಜನ, ನಾಗರಾಜ ಕಾಮಾ ಹಾಜರಿದ್ದರು. ಕಾಲೇಜನ ಪ್ರಾಚಾರ್ಯೆ
ನಿರ್ಮಲಾ ಲದ್ದಿಮಠ ಅಧ್ಯಕ್ಷತೆ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next