Advertisement

ಬಾಟಲಿ ಮೇಲೆ ಎಚ್ಚರಿಕೆ!

07:25 PM Apr 02, 2019 | Lakshmi GovindaRaju |

ನವದೆಹಲಿ: ಸಿಗರೇಟು, ತಂಬಾಕಿನ ಪ್ಯಾಕೆಟ್ಟುಗಳ ಮೇಲೆ ಅವುಗಳ ಸೇವನೆಯಿಂದ ಉಂಟಾಗುವ ಅನಾರೋಗ್ಯ, ತೊಂದರೆಗಳನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ಗ್ರಾಹಕರನ್ನು ಎಚ್ಚರಿಸುವ ರೀತಿಯಲ್ಲೇ ಇನ್ನು ಮುಂದೆ ಮದ್ಯದ ಬಾಟಲಿಗಳ ಮೇಲೂ ಎಚ್ಚರಿಕೆಯ ಸಂದೇಶವೊಂದನ್ನು ಮುದ್ರಿಸುವ ಪರಿಪಾಠ ಏ. 1ರಿಂದ ಜಾರಿಯಾಗಿದೆ.

Advertisement

ಭಾರತೀಯ ಆಹಾರ ಸುರಕ್ಷೆ ಮತ್ತು ಮಾನದಂಡ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಸೂಚನೆಯ ಪ್ರಕಾರ, ಮದ್ಯಪಾನ ತಯಾರಕ ಕಂಪನಿಗಳು ಈ ವಿಧಾನವನ್ನು ಅಳವಡಿಸಿಕೊಂಡಿವೆ. ಇದರನ್ವಯ, ಬಾಟಲಿಗಳ ಮೇಲೆ ಮುದ್ರಿತವಾಗುವ ಎಚ್ಚರಿಕೆ ಸಂದೇಶದ ವಾಕ್ಯಗಳಲ್ಲಿನ ಅಕ್ಷರಗಳು ಇಂಗ್ಲೀಷ್‌ನಲ್ಲಿ 3 ಮಿ.ಮೀ. ದಪ್ಪದಷ್ಟು ಇರಬೇಕೆಂದು ಎಫ್ಎಸ್‌ಎಸ್‌ಎಐ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next