Advertisement
ಸಮಸ್ಯೆಗೆ ಕಾರಣವಾಗ ಬಹುದಾದ ಅಂಶಗಳುಸಕ್ಕರೆಯ ಪ್ರಮಾಣ ಏರಿಸುವುದು
ತೂಕ ಇಳಿಸಿಕೊಳ್ಳಲು ಓಟ್ಸ್ ಸೇವನೆ ಒಳ್ಳೆಯದೆ. ಆದರೆ ಓಟ್ಸ್‌ಗೆ ಹೆಚ್ಚಿನ ಪ್ರಮಾಣದ ಸಕ್ಕರೆ ಸೇರಿಸಿ ಆಹಾರ ತಯಾರಿಸಿಕೊಳ್ಳುವುದು ಉತ್ತಮವಲ್ಲ. ಬ್ರೌನ್ ಶುಗರ್ ಅಥವಾ ವೈಟ್‌ಶುಗರ್ ಯಾವುದಾದರೂ ಇರಲಿ ಅತೀ ಹೆಚ್ಚು ಸಕ್ಕರೆ ಡಯೆಟ್‌ಗೆ ಪೂರಕವಲ್ಲ. ಹೆಚ್ಚು ಸಕ್ಕರೆಯಾಂಶ ಸೇರಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಓಟ್ಸ್ ಸಿಹಿಯಿಂದ ಕೂಡಿರಬೇಕು ಎಂದು ಬಯಸಿದರೆ ತಾಜಾ ಹಣ್ಣು, ದಾಲ್ಚಿನ್ನಿಯನ್ನು ಬಳಸಬಹುದು.
ಪ್ಯಾಕ್ ಮತ್ತು ಸುವಾಸನೆಭರಿತ ಓಟ್ಸ್ ಆಹಾರ ತಯಾರಿಸುವಿಕೆ ಸಮಯ ಉಳಿಸುತ್ತವೆ ನಿಜ. ಆದರೆ, ಅದರಲ್ಲಿ ಅಷ್ಟೇ ರಾಸಾಯನಿಕ ಮತ್ತು ಸಕ್ಕರೆ ಅಂಶಗಳಿರುತ್ತವೆ. ಕೆಲವೊಂದು ಪ್ಯಾಕ್ ಆಗಿರುವ ಓಟ್ಸ್‌ಗಳು 14 ಗ್ರಾಂನಷ್ಟು ಸಕ್ಕರೆ ಮತ್ತು ಕೃತಕ ಬಣ್ಣಗಳನ್ನು ಹೊಂದಿರುತ್ತದೆ. ಹೀಗಾಗಿ ಸುವಾಸೆಯಿಲ್ಲದ, ಪ್ಯಾಕ್ ಮಾಡಿರದ ಓಟ್ಸ್‌ಗಳನ್ನು ಖರೀದಿಸುವುದು ಉತ್ತಮ. ಹೆಚ್ಚು ಸೇವನೆ
ಮುಂಜಾನೆಯ ಉಪಹಾರ ಮುಖ್ಯವಾದುದು. ಆದರೆ ಅತೀ ಹೆಚ್ಚು ಸೇವನೆ ಒಳ್ಳೆಯ ದಲ್ಲ. ಇದು ಹೊಟ್ಟೆಗೆ ತೊಂದರೆ ನೀಡುವುದಲ್ಲದೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಒಂದು ಬಾರಿಗೆ ಅರ್ಧಕಪ್‌ನಷ್ಟು ಒಣ ಓಟ್ಸ್‌ನ್ನು ಮಾತ್ರ ಸೇವಿಸುವ ಅಭ್ಯಾಸವಿರಲಿ.
Related Articles
ಒಂದು ಬೌಲ್ ಓಟ್ಸ್ ಆಹಾರದ ಮೇಲೆ ಹೆಚ್ಚು ಅಲಂಕಾರವನ್ನು ಬಳಸುತ್ತಿದ್ದರೇ ತೂಕ ಇಳಿಕೆ ಯೋಜನೆ ಕೆಡುವುದು ಖಂಡಿತ. ಆಹಾರದ ಮೇಲೆ ಬಾದಾಮಿ, ದ್ರಾಕ್ಷಿ, ತಾಜಾ ಹಣ್ಣು ಮೊದಲಾದವುಗಳನ್ನು ಬಳಸಿದರೆ ಸೇವಿಸುವ ಒಟ್ಟು ಕ್ಯಾಲೋರಿ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಟಾಪಿಂಗ್ಸ್ ಹಾಕಲೇಬೇಕೆಂದಾದರೇ ಎಲ್ಲ ಸೇರಿ 150 ಗ್ರಾಮ್ ಕ್ಯಾಲೋರಿಗಿಂತ ಹೆಚ್ಚಾಗುವುದು ಬೇಡ. ಸಣ್ಣ ಪ್ರಮಾಣದಲ್ಲಿ ಟಾಪಿಂಗ್ಸ್ ಇರಲಿ.
Advertisement
ಸರಿಯಾದ ಟಾಪಿಂಗ್ಸ್ ಇಲ್ಲದಿರುವುದುಓಟ್ಸ್ ಆರೋಗ್ಯಕರ. ಆದರೆ ಟಾಪಿಂಗ್ಸ್‌ನಲ್ಲಿ ಒಂದು ಚಮಚದಷ್ಟು ನ್ಯೂಟ್ರೇಲಾ ಅಥವಾ ಚಾಕೋಚಿಪ್ಸ್ ಬಳಸುವುದು ಉತ್ತಮ ಆಹಾರವನ್ನು ಕೆಡಿಸುತ್ತದೆ. ಟಾಪಿಂಗ್ಸ್‌ಗೆ ಉತ್ತಮವಾದುದನ್ನು ಆರಿಸುವುದು ಫಿಟ್ ಮತ್ತು ಆರೋಗ್ಯಕರವಾಗಿರಲು ಒಳ್ಳೆಯದು. ಹಿಡಿಯಷ್ಟು ಬಾದಾಮಿ ಅಥವಾ ತಾಜಾ ಹಣ್ಣುಗಳನ್ನು ಬಳಸಬಹುದು. ಚಾಕೋಚಿಪ್ ಬದಲು ಕೋಕೋ ಪೌಡರ್ ಬಳಸಬಹುದು. ಚಾಕೋಚಿಪ್‌ಗಿಂತ ಕೋಕೋ ಪೌಡರ್ ಶುದ್ಧವಾಗಿದ್ದು, ಕಬ್ಬಿಣ ಮತ್ತು ರೋಗ ನಿರೋಧಕ ಅಂಶಗಳಿಂದ ಕೂಡಿದೆ.