Advertisement
ಸಣ್ಣದಾಗಿ ತಲೆನೋವು ಇರಲಿ, ಸ್ವಲ್ಪ ಜ್ವರ ಇರಲಿ ತತ್‌ಕ್ಷಣ ಉಪಶಮನ ಆಗಬೇಕು ಎಂಬ ಉದ್ದೇಶಕ್ಕೆ ಅನೇಕರು ಆ್ಯಂಟಿ ಬಯೋಟಿಕ್ ಔಷಧಗಳನ್ನು ಸೇವಿಸುತ್ತಾರೆ. ರೋಗವೇನೋ ಕೆಲವೇ ಸಮಯದಲ್ಲಿ ವಾಸಿಯಾಗುತ್ತದೆ. ಆದರೆ, ಆ್ಯಂಟಿ ಬಯೋಟಿಕ್‌ಗಳು ಮಾನವನ ಜೀವಕ್ಕೆ ಅಪಾಯಕಾರಿ ಎಂಬ ಅಂಶವನ್ನು ಹೆಚ್ಚಿನ ಮಂದಿ ಗಮನಿಸುತ್ತಿಲ್ಲ.
Related Articles
Advertisement
ಹೆಚ್ಚಿನ ರೋಗಕ್ಕೆ ಮನೆಯಲ್ಲಿದೆ ಮದ್ದುಸಣ್ಣ ಪುಟ್ಟ ರೋಗಕ್ಕೆ ಆ್ಯಂಟಿ ಬಯೋಟಿಕ್ ಔಷಧಿಗಳನ್ನು ಸೇವೆನೆ ಮಾಡಬಾರದು. ಅದರ ಬದಲು ಮನೆ ಮದ್ದು ಮಾಡುವುದು ಒಳಿತು. ಅದರಲ್ಲಿಯೂ ಮುಖ್ಯವಾಗಿ ಬೆಳ್ಳುಳ್ಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ. ಇದರಿಂದ ಅಸ್ತಮಾ, ಶೀತ-ಕೆಮ್ಮು, ಅಲರ್ಜಿಗಳನ್ನು ನಿವಾರಿಸುತ್ತದೆ. ಸುಟ್ಟ ಗಾಯ, ಚರ್ಮದ ತೊಂದರೆಗೆ ಜೇನುತುಪ್ಪ ಬಳಕೆ ಮಾಡಬಹುದು. ಇನ್ನು, ರಕ್ತದೊತ್ತಡ, ನಿಶ್ಯಕ್ತಿಗೆ ಶುಂಠಿ ಒಳ್ಳೆಯ ಔಷಧಿ. ಆ್ಯಂಟಿ ಬಯೋಟಿಕ್ ಬಳಕೆ ಹೆಚ್ಚಳ
ಅಂಕಿ ಅಂಶವೊಂದರ ಪ್ರಕಾರ ಅಮೆರಿಕಾ ದೇಶದಲ್ಲಿ ಅತೀ ಹೆಚ್ಚು ಮಂದಿ ಆ್ಯಂಟಿ ಬಯೋಟಿಕ್ ಸೋಂಕಿನಿಂದ ಬಳಲುತ್ತಿದ್ದಾರೆ. ವರ್ಷಕ್ಕೆ 2 ಮಿಲಿಯನ್ ಮಂದಿಗೆ ಸೋಂಕು ತಗುಲುತ್ತಿದ್ದು, ಸುಮಾರು 23,000 ದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿಯೂ ಹೆಚ್ಚಿನ ಮಂದಿ ಆ್ಯಂಟಿ ಬಯೋಟಿಕ್ ಬಳಕೆ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷವೊಂದರಲ್ಲಿ ಪ್ರತಿಯೊಬ್ಬ ಭಾರತೀಯ 11 ಆ್ಯಂಟಿ ಬಯೋಟಿಕ್ ಔಷಧವನ್ನು ಸೇವನೆ ಮಾಡುತ್ತಾನೆ ಎಂದು ತಿಳಿದು ಬಂದಿದೆ. ಎಚ್ಚರ ತಪ್ಪಿದರೆ ಅಪಾಯ
· ಆ್ಯಂಟಿ ಬಯೋಟಿಕ್ ಔಷಧ ಸೇವಿಸದೆ ಕಾಯಿಲೆ ಗುಣಪಡಿಸಬಹುದೇ ಎಂದು ವೈದ್ಯರ ಬಳಿ ಸಲಹೆ ಪಡೆಯಿರಿ
· ಆ್ಯಂಟಿ ಬಯೋಟಿಕ್ ಔಷಧ ಬಳಕೆ ಮಾಡಿಯೇ ರೋಗ ಗುಣಪಡಿಸಿ ಎಂಬ ವೈದ್ಯರ ಬಳಿ ಒತ್ತಾಯ ಮಾಡಬೇಡಿ
· ಇನ್ನೊಬ್ಬರ ರೋಗಕ್ಕೆ ನೀಡಿದ ಔಷಧವನ್ನು ಸೇವನೆ ಮಾಡಬೇಡಿ
· ಸಾಮಾನ್ಯ ಕೆಮ್ಮು, ಜ್ವರ, ಶೀತಕ್ಕೆ ಆ್ಯಂಟಿ ಬಯೋಟಿಕ್ ಔಷಧದ ಅಗತ್ಯ ಇರುವುದಿಲ್ಲ
· ವೈದ್ಯರು ಸೂಚಿಸಿದ ಸಮಯದಲ್ಲಿ ಸೂಚಿಸಿದ ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸಿ ವೈದ್ಯರ ಅನುಮತಿ ಪಡೆಯಿರಿ
ಯಾವುದೇ ಸೋಂಕುಗಳಿಗೆ ವೈದ್ಯರ ಅನುಮತಿ ಇಲ್ಲದೆ ಆ್ಯಂಟಿ ಬಯೋಟಿಕ್ ಔಷಧಿ ಸೇವನೆ ಮಾಡುವುದು ಅಪಾಯಕಾರಿ. ಸಣ್ಣ ಪುಟ್ಟ ರೋಗಕ್ಕೆ ಮಾತ್ರೆಗಳ ಆವಶ್ಯಕತೆ ಇಲ್ಲ. ಏಕೆಂದರೆ ಅದಕ್ಕೆ ಪ್ರತಿರೋಧ ಒಡ್ಡಬಲ್ಲ ಔಷಧ ನಮ್ಮ ದೇಹದಲ್ಲಿಯೇ ಇರುತ್ತದೆ. ಹೆಚ್ಚಾಗಿ ಆ್ಯಂಟಿ ಬಯೋಟಿಕ್ ಔಷಧ ಸೇವೆನೆ ಮಾಡಿದರೆ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ.
– ಡಾ| ಮುರಲೀ ಮೋಹನ್ ಚೂಂತಾರು, ವೈದ್ಯರು - ನವೀನ್ ಭಟ್ ಇಳಂತಿಲ