ಕಲಬುರಗಿ: ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ ಅವರು ಡಿಸಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾದ ಹಾನಿ, ನೈಸರ್ಗಿಕ ವಿಕೋಪ ಪರಿಹಾರ, ಮುಂಗಾರು, ಹಿಂಗಾರು ಮಳೆಯ ಪ್ರಮಾಣ ಮತ್ತು ಬೆಳೆದ ಬೆಳೆಗಳ ಬಗ್ಗೆ ಸಂಬಂಧಿ ಸಿದ ಇಲಾಖೆಯ ಅ ಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದ ಅವರು ರೈತರಿಗೆ ಯಾವುದೇ ರೀತಿಯ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಮಾತನಾಡಿ, 2019-20ನೇ ಸಾಲಿಗೆ ಹಿಂಗಾರು ಹಂಗಾಮಿನಲ್ಲಿ 22225 ನೀರಾವರಿ ಹಾಗೂ 310725 ಖುಷ್ಕಿ ಸೇರಿದಂತೆ 332950 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, 1758 ನೀರಾವರಿ ಮತ್ತು 138679 ಖುಷ್ಕಿ ಸೇರಿದಂತೆ ಒಟ್ಟಾರೆ 140437 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಸಾಲಿಗೆ ಯೂರಿಯಾ, ಡಿ.ಎ.ಪಿ., ಎಮ್.ಪಿ.ಓ., ಮತ್ತು ಎನ್.ಪಿ.ಕೆ. ಸೇರಿದಂತೆ ಒಟ್ಟು 76692 ಮೆಟ್ರಿಕ್ ಟನ್ ರಸಗೊಬ್ಬರ ಪೈಕಿ 55449 ಮೆಟ್ರಿಕ್ ಟನ್ ವಿತರಣೆ ಮಾಡಲಾಗಿದ್ದು, 21243 ವೆಟ್ರಿಕ್ ಟನ್ ದಾಸ್ತಾನು ಇದೆ ಎಂದರು.
ವಾಡಿ-ಗದಗ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆಕಲಬುರಗಿ ಜಿಲ್ಲೆಯ ಭೂಮಿ ಭೂಸ್ವಾ ಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಭೂಸ್ವಾಧಿಧೀನಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ರೈಲ್ವೆ ಯೋಜನೆಗೆ ಜಿಲ್ಲೆಯ ಜೇವರ್ಗಿ ಮತ್ತು ಚಿತ್ತಾಪುರ ತಾಲೂಕಿನಲ್ಲಿ ಒಟ್ಟಾರೆ 296 ಎಕರೆ ಪ್ರದೇಶ ಭೂಸ್ವಾಧಿಧೀನಕ್ಕೆ ಗುರುತಿಸಿ ಇದೂವರೆಗೆ 284 ಎಕರೆ ಪ್ರದೇಶ ಭೂಸ್ವಾ ಧೀನ ಮಾಡಿಕೊಂಡು ಸಂಬಂಧಿ ಸಿದ ರೈತರಿಗೆ ಹಣ ಪಾವತಿ ಮಾಡಲಾಗಿದೆ ಎಂದು ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಶರಣಪ್ಪ ಬಿ. ಮಾಹಿತಿ ನೀಡಿದರು.
ಪಶುಪಾಲನಾ ಮತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ ಅವರು ವಿವಿಧ ಇಲಾಖೆಯ ಪ್ರಗತಿ ಕುರಿತು ಪ್ರತ್ಯೇಕವಾಗಿ ಪರಿಶೀಲನೆ
ನಡೆಸಿದರು. ಸಭೆಯಲ್ಲಿ ಜಿಲ್ಲಾ ಧಿಕಾರಿ ಶರತ್ ಬಿ., ಅಪರ ಜಿಲ್ಲಾಧಿಕಾರಿ ಡಾ| ಶಂಕರಪ್ಪ ವಣಿಕ್ಯಾಳ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.