Advertisement

ಹದಿಹರೆಯದಲ್ಲಿ ಎಚ್ಚರವಿರಲಿ: ಡಾ|ಗೀತಾಲಕ್ಷ್ಮಿ

12:39 PM Feb 24, 2017 | |

ದಾವಣಗೆರೆ: ಯುವ ಜನಾಂಗ ಹದಿಹರೆಯದ ಉತ್ಸಾಹದ ಅಲೆಯಲ್ಲಿ ವ್ಯಾಮೋಹಕ್ಕೆ ಸಿಲುಕಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಎಸ್‌.ಎಸ್‌. ಹೈಟೆಕ್‌ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ಔಷಧಿ ವಿಭಾಗ ಮುಖ್ಯಸ್ಥೆ ಡಾ| ಆರ್‌.ಜಿ. ಗೀತಾಲಕ್ಷ್ಮಿಸಲಹೆ ನೀಡಿದ್ದಾರೆ. 

Advertisement

ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರಾಜ್ಯ ಏಡ್ಸ್‌ ಪ್ರಿವೆನÒನ್‌ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಏಡ್ಸ್‌ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಯುವ ಜನಾಂಗ ಯಾವುದೇ ಕಾರಣಕ್ಕೂ ವಿವಾಹಪೂರ್ವ ಲೈಂಗಿಕತೆಗೆ ಒಳಗಾಗಬಾರದು. ಜಾಗೃತಿ ಮತ್ತು ಜಾಗೂರುಕತೆಯಿಂದ ಇರಬೇಕು ಎಂದರು. 

ಭಾರತದಂತಹ ಸಂಪ್ರದಾಯ ದೇಶದಲ್ಲಿ ಹಿಂದೆಲ್ಲಾ ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣ ಇರಲೇ ಇಲ್ಲ. ಈಗ ಮಾತನಾಡುವಂತಹ ವಾತಾವರಣ ಕಂಡು ಬರುತ್ತದೆ. ಆದರೆ, ಯಾವುದೇ ಆಗಲಿ ಸ್ವೇಚ್ಛಾಚಾರಕ್ಕೆ ಕಾರಣವಾಗಬಾರದು. ಲೈಂಗಿಕ ವಿಚಾರವೂ ಸಹ ಸ್ವೇಚ್ಛಾಚಾವಾದಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪೀÅತಿ, ಪ್ರೇಮದ ಅಮಲಿನಲ್ಲಿ ನಮ್ಮತನ ಮರೆಯಬಾರದು. ಆಸಕ್ತಿ, ಕುತೂಹಲದಿಂದಾಗಿ ವಿವಾಹಪೂರ್ವ ಲೈಂಗಿಕ ಚಟುವಟಿಕೆ ತೀರಾ ಅಪಾಯಕಾರಿ. ಗೊತ್ತೋ, ಗೊತ್ತಿಲ್ಲದೆಯೋ ಮಾಡುವಂತಹ ಕೆಲಸಕ್ಕೆ ಜೀವನವೇ ಹಾಳಾಗುತ್ತದೆ. ಹಾಗಾಗಿ ಸಾಕಷ್ಟು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು. ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆಗೆ ಒಳಪಡಿಸಿದ ರಕ್ತ ಪಡೆಯುವುದು, ಪದೆ ಪದೆ ಬಳಸಿದ ಸಿರಿಂಜ್‌ ಬಳಸುವುದರಿಂದ ಮಹಾಮಾರಿ ಎಚ್‌ಐವಿ ವೈರಸ್‌ ದೇಹ ಪ್ರವೇಶಿಸುತ್ತದೆ.

ಎಚ್‌ಐವಿ ವೈರಸ್‌ನ ಪ್ರಭಾವ ಹೆಚ್ಚಾಗುತ್ತಿದ್ದಂತೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಬಿಳಿ ರಕ್ತ ಕಣಗಳು ನಾಶವಾಗಿ ಎಚ್‌ಐವಿ ಏಡ್ಸ್‌ ಆಗಿ ಪರಿವರ್ತನೆಯಾಗುತ್ತದೆ. ಮಂದೆ ಜೀವಕ್ಕೂ ಅಪಾಯ ಉಂಟು ಮಾಡುತ್ತದೆ ಎಂದು ತಿಳಿಸಿದರು. ಬಹು ಸಂಗಾತಿಗಳೊಂದಿಗೆ, ಅಸುರಕ್ಷಿತ ಲೈಂಗಿಕ ಸಂಪರ್ಕ ಕೂಡದು. ಇತರರಿಂದ ರಕ್ತ ಪಡೆಯಬೇಕಾದ ಸಂದರ್ಭದಲ್ಲಿ ಎಲ್ಲಾ ರೀತಿಯ ಪರೀಕ್ಷೆಯ ನಂತರವೇ ಪಡೆಯಬೇಕು.

Advertisement

ಎಚ್‌ಐವಿ, ಏಡ್ಸ್‌ ಪೀಡಿತರನ್ನು ಮುಟ್ಟುವುದರಿಂದ, ಪಕ್ಕದಲ್ಲಿ ಕುಳಿತುಕೊಳ್ಳುವುದರಿಂದ ಇತರೆ ಮೂಲದಿಂದ ಎಚ್‌ಐವಿ, ಏಡ್ಸ್‌ ಬರುವುದಿಲ್ಲ. ಎಚ್‌ಐವಿ, ಏಡ್ಸ್‌ ಪೀಡಿತರನ್ನು ನಿಕೃಷ್ಟವಾಗಿ ಕಾಣಬಾರದು ಎಂದು ತಿಳಿಸಿದರು. ಕಾಲೇಜು ಪ್ರಾಚಾರ್ಯ ಡಾ| ಕೆ. ಷಣ್ಮುಖ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆಪ್ತ ಸಮಾಲೋಚಕಿ ಸ್ನೇಹಾ ಎಸ್‌. ಹಂಜಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next