Advertisement

“ಆಟಿಯ ಆಹಾರ ಸೇವನೆಗಳ ಮಹತ್ವದ ಅರಿವು ಮೂಡಲಿ’

06:35 AM Jul 31, 2017 | |

ಮಲ್ಪೆ: ಅಂಬಲಪಾಡಿ ಬಿಲ್ಲವ ಸಮಾಜ ಸೇವಾ ಸಂಘ ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ  ದಿನ ಕಾರ್ಯಕ್ರಮವು ಜು. 30 ರಂದು ಸಂಘದ ಸಮುದಾಯ ಭವನದಲ್ಲಿ ಜರಗಿತು.

Advertisement

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಸತೀಶ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬದಲಾದ ಕಾಲಘಟ್ಟದಲ್ಲಿ ಆಟಿಡೊಂಜಿ ಕಾರ್ಯಕ್ರಮವು ಇಂದು ಅನೇಕ ಬಗೆಯಲ್ಲಿ ರೂಪಾಂತರಗೊಂಡಿದೆ. ವಿವಿಧ ಆಚರಣೆ ನಂಬಿಕೆಗಳುಳ್ಳ ನಮ್ಮ ತುಳುನಾಡಿನ ಹಿಂದಿನ ಸಂಸðತಿ ಸಂಪ್ರದಾಯ, ಆಚರಣೆಯನ್ನು ಪರಿಚಯಿಸಿ, ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತೋಷ ವಿಷಯವಾಗಿದೆ ಎಂದರು.  ಹಿಂದಿನ ಕಾಲದಲ್ಲಿ ನಮ್ಮ ಮನೆಯ ಸುತ್ತಮುತ್ತ ಸಿಗುತ್ತಿದ್ದ ನಮ್ಮ ಆರೋಗ್ಯಕ್ಕೆ ಪೂರಕವಾಗುವ ಔಷಧೀಯ ಗಿಡಗಳನ್ನು ಈಗಲೂ ನಾವು ನಮ್ಮ ಮನೆಯಂಗಳದಲ್ಲಿ ಬೆಳಸುವಂತಹ ಕೆಲಸ ಮಾಡಬೇಕು, ಜೊತೆಗೆ ನಮ್ಮ ಮಕ್ಕಳಿಗೂ ಅದನ್ನು ಪರಿಚಯಿಸುವುದರ ಮೂಲಕ ಪ್ರಕೃತಿ ದತ್ತವಾದ ಆಹಾರ ಸೇವನೆಗಳ ಮಹತ್ವ ಎಲ್ಲರಿಗೂ ತಿಳಿಯುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಲಪಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಅವರು ಮಾತನಾಡಿ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ತುಳುನಾಡಿನ ವಿಚಾರಧಾರೆಯನ್ನು ಯುವ ಜನರಿಗೆ ತಲುಪಿಸಲು ಆಟಿಡೊಂಜಿ ದಿನ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಮಹಿಳಾ ಘಟಕದ ಸಹ ಸಂಚಾಲಕಿ ಗೋದಾವರಿ ಎಂ. ಸುವರ್ಣ, ದೇವಕಿ ಕೆ. ಕೋಟ್ಯಾನ್‌,  ಹಿರಿಯರಾದ ರಾಧು ಪೂಜಾರಿ¤, ಜಲಜ ಸೋಮಪ್ಪ ಪೂಜಾರಿ, ಬೇಬಿ ರಾಜು ಪೂಜಾರಿ, ಸುಮತಿ ಭಾಸ್ಕರ ಪೂಜಾರಿ, ಸಂಘದ ಉಪಾಧ್ಯಕ್ಷ ಎ. ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಕೃಷ ¡ ಕೋಟ್ಯಾನ್‌,  ಕೋಶಾಧಿಕಾರಿ  ದಯಾನಂದ ಎ., ಮಾಜಿ ಅಧ್ಯಕ್ಷರಾದ ಕೆ. ಮಂಜಪ್ಪ ಸುವರ್ಣ, ಎ. ಭಾಸ್ಕರ ಪೂಜಾರಿ  ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಘಟಕದ ಸಂಚಾಲಕಿ ವಿಜಯ ಗೋಪಾಲ ಬಂಗೇರ ಸ್ವಾಗತಿಸಿದರು. ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

ಆಟಿ ತಿಂಗಳ ವಿವಿಧ 31 ಬಗೆಯ ಖಾದ್ಯಗಳ ಪ್ರಾತ್ಯಕ್ಷಿಕೆಯೊಂದಿಗೆ ಸಾಮೂಹಿಕ ಸಹಭೋಜನ ನಡೆಯಿತು. ಬಳಿಕ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಕ್ರೀಡೆಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next