Advertisement
ಆದರೆ ಯೋಚಿಸಿ, ಮನೆಯಲ್ಲಿ ಇದ್ದಾಗ ನಮ್ಮ ಮನೆಯ ಹಿರಿಯರು, ಕೆಲಸದವರು, ನೆರೆಹೊರೆಯವರನ್ನು ಮಾತನಾಡಿಸಿದಾಗ ನಾವು ಹೇಳುವ ಕೆಲವು ಸಂಗತಿಗಳನ್ನು ಕೇಳಿ ಹೌದಾ ! ಎಂದು ಆಶ್ಚರ್ಯದಿಂದ ಕೇಳಿದಾಗ, ಅಲ್ಲೇ ಇರುವ ನಮ್ಮವರು ಹೆಮ್ಮೆಯಿಂದ ನಮ್ಮತ್ತ ಒಮ್ಮೆ ನೋಡಲಿಲ್ಲವೇ ? ಮೊನ್ನೆ ಹೀಗೆ ವಾಟ್ಸಪ್‌ನಲ್ಲಿ ಒಂದು ಜೋಕ್ ಹರಿದಾಡುತ್ತಿತ್ತು. ವರ್ಕ್ ಫ್ರಮ್ ಹೋಮ್ ಬಿಟ್ಟು ಹೋಮ್ ವರ್ಕ್ ಕೊಟ್ಟರೆ ಒಳ್ಳೆಯದಿತ್ತು ಅಂತ.
Related Articles
Advertisement
ಮನೆಯವರೊಂದಿಗೆ ಕುಳಿತುಕೋ, ಮಾತಾನಾಡು, ನಗಿಸು, ನಗೆಯಾಡು, ಬಾಲ್ಯದ ತುಣುಕುಗಳನ್ನು, ಹಳೆ ಮನೆಯ ವಿನ್ಯಾಸವನ್ನು, ನಮ್ಮೂರಿನ ರಸ್ತೆಗಳನ್ನು, ಕಾಡುಗಳಲ್ಲಿರುವ ಹಣ್ಣುಗಳನ್ನು ಅಪರೂಪದ ವಸ್ತುವಿನಂತೆ ನೋಡಿದರೇ ಆಹಾ, ಎಂತಹ ಸುಂದರ ಅನುಭೂತಿ.
ಯಾರೋ ಒಬ್ಬ ಹೇಳಿದ್ದ ಅಂತೆ ಇದ್ದಾಗ ಏನೂ ಪ್ರಾಮುಖ್ಯತೆ ಪಡೆಯದ ವಸ್ತು ಇಲ್ಲದಿರುವಾಗ ಕಾಡುತ್ತದೆ. ನಿಜವೇ ಅಲ್ಲವೇ, ಈಗಲೂ ಕಾಲ ಮಿಂಚಿಲ್ಲ. ಮನೆಯಲ್ಲಿ ಕೆಲಸ ಮಾಡಿದರೂ ನಿಂತಲ್ಲಿ, ಕೂತಲ್ಲಿ, ಕೆಲಸವೇ ಕಾಡಿದರೂ ಮೊದಲು ನೀವು ಮಾಡುವುದು ಮನೆಯ ಹಿರಿಯರನ್ನು,ಮುಳ್ಳು ತುಂಬಿದ ರಸ್ತೆಗಳಲ್ಲಿ ಹೋಗಿ ಬರುವ ಅವರ ಕಾಲುಗಳನ್ನು. ನಿರ್ಜೀವ ರಸ್ತೆಗಳು ಅವರ ಪಾಲಿಗೆ ಹೇಗೆ ಸಜೀವ ವಸ್ತು ಆಯ್ತು ಎಂಬುದು ಅರ್ಥ ಆದಾಗ, ನಮಗೆ ಕುಟುಂಬದಿಂದಜೀವನ ಮಾನಸಿಕ ಸದೃಢತೆ ಕೊಡುತ್ತದೆ ಎಂಬ ಅಂಶ ತಿಳಿಯುತ್ತದೆ. ಹಲವರಲ್ಲಿ ಕುಟುಂಬ ಅಥವಾ ಪರಿವಾರ ಚಿಕ್ಕದಿದ್ದರೇ ಏನು ಮಾಡುವುದು? ಆಲೋಚನೆ ಬಂದರೇ ! ಸಿಂಪಲ್ ಅಕ್ಕಪಕ್ಕದವರನ್ನು, ಸಂತೆಯಲ್ಲಿ ಸಿಕ್ಕಿದವರನ್ನು ಮಾತಾನಾಡಿಸಿ. ಒಬ್ಬ ರಸ್ತೆ ಗುಡಿಸುವವನನ್ನು ಮಾತಾಡಿಸಿದರೇ ಒಂದು ಕಥೆ ತಿಳಿಯುತ್ತದೆ. ಇದರಿಂದ ನಮ್ಮ ಮಾನಸಿಕ ಒತ್ತಡ ಕಡಿಮೆ ಆಗಿ, ಕುಟುಂಬ ಸಣ್ಣದಿದ್ದರೂ ತೃಪ್ತವಾದ ಭಾವನೆ ನಮ್ಮೊಳಗೆ ಮೂಡುತ್ತದೆ.ಒಬ್ಬರ ಆಗಮನ ಇನ್ನೊಬ್ಬರ ನಿರ್ಗಮನಕ್ಕೆ ಕಾರಣವಾಗಿರುತ್ತದೆ. ಅರಿತರೇ ಜೀವನ ಸುಲಭ,
ಸರಳವಾಗಿರುತ್ತದೆ ಮಾತ್ರವಲ್ಲ ಸಂಭ್ರಮವನ್ನು ಕೊಡುತ್ತದೆ.
– ಶಾರದಾ ಭಟ್