ಕೆಲಸ ಹಾಗೂ ಒತ್ತಡಗಳ ನಡುವೆ ನಮ್ಮ ದೇಹವೂ ಬಳಲಿರುತ್ತದೆ. ಸುಸ್ತಾದಂತೆ ಭಾಸವಾಗುತ್ತದೆ. ಈ ನೋವಿನ ಶಮನಕ್ಕಾಗಿ ನಾವು ಹೆಚ್ಚಾಗಿ ಮಸಾಜ್ ಥೆರಪಿಗಳಿಗೆ ಒಳಗಾಗುತ್ತೇವೆ. ಇದಕ್ಕೆ ಖರ್ಚು ಹೆಚ್ಚು. ಇದಕ್ಕೆ ಪರಿಹಾರೋಪಾಯವಾಗಿ ವೈದ್ಯಲೋಕವು ಸ್ವ-ಮಸಾಜ್ ತಂತ್ರಗಳನ್ನು ರೂಢಿಸಿಕೊಳ್ಳಲು ಸಲಹೆ ನೀಡುತ್ತದೆ.
ನಮ್ಮ ಕೈ ಬೆರಳುಗಳ ಮೂಲಕವೇ ನಾವು ಮಸಾಜ್ ಮಾಡಿಕೊಳ್ಳಬಹುದು. ದೇಹದ ಆರೋಗ್ಯ, ಸರಿಯಾಗಿ ರಕ್ತ ಚಲನೆಗೂ ಸಹಾಯ ಮಾಡುತ್ತದೆ. ನೋವೂ ಪರಿಣಾಮಕಾರಿಯಾಗಿ ನಿವಾರಣೆ ಆಗುತ್ತದೆ ಎನ್ನುತ್ತಾರೆ ತಜ್ಞರು.
1 ಮಸಾಜ್ ಪ್ರಕ್ರಿಯೆಯನ್ನು ನಮ್ಮಷ್ಟಕ್ಕೆ ನಾವೇ ಮಾಡಿಕೊಳ್ಳುವುದು ಒಳ್ಳೆಯದು. ಬೆಳಗ್ಗೆ ಎದ್ದ ಕೂಡಲೇ ನಮ್ಮ ದೇಹವೂ ಭಾರವೆನಿಸಿದಾಗ, ನಾವು ಮುಷ್ಟಿಯನ್ನು ಬಿಗಿಮಾಡಿಕೊಂಡು ನೋವು ಎನಿಸಿದ ಭಾಗದಲ್ಲಿ ಹೊಡೆದುಕೊಳ್ಳಬೇಕು. ಇದು ಕೂಡ ಸ್ವ-ಮಸಾಜ್ ತಂತ್ರವಾಗಿದೆ. ಇದರಿಂದ ನಮ್ಮ ದೇಹದ ಎಲುಬುಗಳು ಶಕ್ತಿಯುತವಾಗುತ್ತವೆ. ಅಲ್ಲದೇ ರಕ್ತ ಪರಿಚಲನೆ ಸರಾಗವಾಗುತ್ತದೆ.
2 ಹೆಚ್ಚಿನ ಆಹಾರ ಸೇವಿಸಿದಾಗ, ಅದು ಸರಿಯಾದ ಜೀರ್ಣವಾಗುವುದಿಲ್ಲ ಎಂದು ಭಾವಿಸುತ್ತೇವೆ. ಇದರಿಂದ ಅನಾರೋಗ್ಯಕ್ಕೆ ಈಡಾಗುತ್ತೇವೆ ಎಂಬ ಭಯವೂ ಇರು ತ್ತದೆ. ಊಟವಾದ ಬಳಿಕ ನಮ್ಮ ಕೈ ಬೆರಳುಗಳಿಂದ ಹೊಟ್ಟೆಯ ಮೇಲೆ ಮೃದು ವಾಗಿ ಮುಟ್ಟ ಬೇಕು. ಇದರಿಂದ ಆಹಾರವೂ ನೈಸರ್ಗಿಕವಾಗಿ ಜೀರ್ಣಶಕ್ತಿ ಪಡೆದುಕೊಳ್ಳುತ್ತದೆ.
3 ಜಿಮ್ ಅಥವಾ ವ್ಯಾಯಾ ಮದ ಮೂಲ ಕ ದೇಹವನ್ನು ನಿತ್ಯವೂ ದಂಡಿಸುತ್ತಿದ್ದರೆ, ಮಸಾಜ್ ಪ್ರಕ್ರಿಯೆಗೆ ಒಳಾಗಾಗಬೇಕಾಗುತ್ತದೆ. ತೋಳು, ಕಾಲು ಹಾಗೂ ದೇಹದ ಭಾಗಗಳಿಗೆ ದಿನಾವೂ ಸ್ವ-ಮಸಾಜ್ ಮಾಡಿಕೊಳ್ಳಬೇಕಾಗುತ್ತದೆ.
– ಶಿವ ಸ್ಥಾವರಮಠ