Advertisement

ಪರಿಸರ ರಕ್ಷಣೆಯ ಬಗ್ಗೆ ಜಾಗೃತರಾಗಿ –ದೇವರಾಜ ಪಾಣ

09:00 PM Jul 13, 2019 | sudhir |

ಕಟಪಾಡಿ: ಗಿಡಮರಗಳ ರಕ್ಷಣೆ ಎಂದರೆ ಅದು ಭೂಮಿಯ ಮೇಲೆ ಜೀವಿಸುವ ಸಕಲ ಜೀವ ಸಂಕುಲಗಳ ರಕ್ಷಣೆ. ಗಿಡ ಮರಗಳ ರಕ್ಷಣೆಯಿಂದ ನಾವೆಲ್ಲರೂ ನೆಮ್ಮದಿಯಿಂದ ಜೀವನವನ್ನು ಸಾಗಿಸುವಂತಾಗುತ್ತದೆ ಎಂದು ಉಡುಪಿ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ದೇವರಾಜ ಪಾಣ ಹೇಳಿದರು.

Advertisement

ಅವರು ಜು.13ರಂದು ಉದ್ಯಾವರ ಸ್ಮಾರ್ಟ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಉದ್ಯಾವರ ಫ್ರೆಂಡ್ಸ್‌ ಸರ್ಕಲ್‌ ಆಶ್ರಯದಲ್ಲಿ ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡಿದರು.

ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪರಿಸರವನ್ನು ರಕ್ಷಿಸಲು ಜಾಗƒತರಾಗಬೇಕಾಗಿದೆ. ಹಾಗಾಗಿ ಗಿಡ ನೆಟ್ಟು ಬೆಳೆಸಿ ರಕ್ಷಿಸುವ ಕೆಲಸ ನಮ್ಮ ಆದ್ಯ ಕರ್ತವ್ಯವಾಗಬೇಕು. ಎಂದರು.

ಮುಖ್ಯ ಅತಿಥಿಯಾಗಿದ್ದ ಸದಿಯ ಸಾಹುಕಾರ್‌ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಉದ್ಯಾವರ ಮಾತನಾಡಿ, ಇದೊಂದು ಪರಿಸರ ರಕ್ಷಣೆಯ ಕಾಳಜಿ ಇರುವ ಕಾರ್ಯಕ್ರಮ. ಸಂಸ್ಥೆ ಯು ನಿರಂತರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದು, ಉತ್ತಮವಾಗಿ ಪೋಷಿಸಿದಲ್ಲಿ ವಿದ್ಯಾರ್ಥಿಯು ಬಹುಮಾನವನ್ನು ಗೆಲ್ಲಲಿದ್ದಾರೆ ಎಂದರು.

ಭೂಮಿ ಗ್ಲೋಬಲ್‌ ವಾರ್ಮಿಂಗ್‌ಗೆ ಸಿಲುಕಿದೆ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಯಾವರ ಫ್ರೆಂಡ್ಸ್‌ ಸರ್ಕಲ್‌ನ ನಿರ್ದೇಶಕ ಉದ್ಯಾವರ ನಾಗೇಶ್‌ ಕುಮಾರ್‌, ಓಝೋನ್‌ ಪದರ ದುರ್ಬಲವಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಇದರಿಂದ ಭೂಮಿ ಗ್ಲೋಬಲ್‌ ವಾರ್ಮಿಂಗ್‌ಗೆ ಸಿಲುಕಿದೆ. ಈ ಅಪಾಯದಿಂದ ನಾವು ತಪ್ಪಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ನಾವು ಗಿಡ ಮರಗಳನ್ನು ಬೆಳೆಸಬೇಕೆಂದರು ಅತಿಥಿಗಳಾಗಿದ್ದ ಉದ್ಯಾವರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಗಂಧಿಶೇಖರ್‌, ಉಪಾಧ್ಯಕ್ಷ ರಿಯಾಜ್‌ ಇಸ್ಮಾಯಿಲ್‌ ಪಳ್ಳಿ ಮಾತನಾಡಿದರು.

Advertisement

ಸುಮಾರು 500 ಸಾಗುವಾನಿ ಮತ್ತು ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ಚೆನ್ನಾಗಿ ಗಿಡವನ್ನು ಬೆಳೆಸಿದವರಿಗೆ ಮೂರು ನಗದು ಬಹುಮಾನಗಳನ್ನು ನೀಡಲಾಗುವುದಾಗಿ ಘೋಷಿಸಲಾಯಿತು.

ಸ್ಮಾರ್ಟ್‌ ಇಂಡಿಯನ್‌ ಸ್ಕೂಲ್‌ ಇದರ ಮುಖ್ಯ ಶಿಕ್ಷಕಿ ಅರ್ಚನಾ ಎ. ಬಂಗೇರ ಸ್ವಾಗತಿಸಿದರು. ಉದ್ಯಾವರ ಫ್ರೆಂಡ್ಸ್‌ ಸರ್ಕಲ್‌ ಅಧ್ಯಕ್ಷ ತಿಲಕ್‌ರಾಜ್‌ ಸಾಲ್ಯಾನ್‌ ಪ್ರಸ್ತಾವನೆಗೈದರು. ಕಾರ್ಯದರ್ಶಿ ಗಿರೀಶ್‌ ಗುಡ್ಡೆಯಂಗಡಿ ವಂದಿಸಿದರು. ಶಿಕ್ಷಕಿ ದೀಪಶ್ರೀ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next