Advertisement
ಸ್ತನದ ಕ್ಯಾನ್ಸರ್ ಜಾಗೃತಿ ಮಾಸಪ್ರತೀ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನದ ಕ್ಯಾನ್ಸರ್ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಸ್ತನದ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸುವ ಆಂದೋಲನಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಎಲ್ಲ ಕ್ಯಾನ್ಸರ್‌ಗಳಲ್ಲಿ ಅತ್ಯಂತ ಸಾಮಾನ್ಯವಾದುದು ಮತ್ತು ಹೆಚ್ಚು ಕಾಣಿಸಿಕೊಳ್ಳುವಂಥದ್ದು ಸ್ತನದ ಕ್ಯಾನ್ಸರ್. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಈ ಕಾಯಿಲೆಯು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ.
1. ಇದು ಅತಿ ಹೆಚ್ಚು ಕಂಡುಬರುವ ಕ್ಯಾನ್ಸರ್
2. ಹೆಚ್ಚು ಮರಣ ಉಂಟಾಗುವ ಕ್ಯಾನ್ಸರ್
3. ತಪಾಸಣೆ ಮತ್ತು ಶೀಘ್ರ ಪತ್ತೆ ಹಚ್ಚುವುದು ಸಾಧ್ಯವಿದೆ
4. ಸುಲಭವಾಗಿ ಚಿಕಿತ್ಸೆ ನೀಡಬಹುದು ಮತ್ತು ಉತ್ತಮ ಚಿಕಿತ್ಸೆಗಳು ಲಭ್ಯವಿವೆ
5. ಬೇಗನೆ ಪತ್ತೆ ಹಚ್ಚಿದರೆ ಮರಣ ಸಾಧ್ಯತೆಯನ್ನು ತಡೆಗಟ್ಟಬಹುದು
6. ಜಾಗೃತಿಯ ಕಾರ್ಯಕ್ರಮಗಳ ಮೂಲಕ ಸ್ತನದ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಜಗತ್ತಿನ ಅನೇಕ ದೇಶಗಳು ಜಯ ಸಾಧಿಸುವಲ್ಲಿ ಯಶಸ್ವಿಯಾಗಿವೆ. ಭಾರತದಂತಹ ದೇಶದಲ್ಲಿ ಸ್ತನದ ಕ್ಯಾನ್ಸರ್ ಬಗ್ಗೆ ಜಾಗೃತಿ ಈ ಕಾಲಘಟ್ಟದ ಆತ್ಯವಶ್ಯಕತೆಯಾಗಿದೆ. ಸ್ತನದ ಕ್ಯಾನ್ಸರ್ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ – ಎರಡೂ ವರ್ಗಗಳ ದೇಶಗಳಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಡುತ್ತಿದೆ. ಯಾವುದೇ ವಯಸ್ಸಿನಲ್ಲಿ ಇದು ಉಂಟಾಗಬಹುದಾದರೂ 40ರ ವಯೋಮಾನದವರಲ್ಲಿ ಉಂಟಾಗುವುದು ಹೆಚ್ಚು. ಸ್ತನದ ಕ್ಯಾನ್ಸರ್ ಉಂಟಾಗುವ ವಯೋಮಾನವೂ ಪಲ್ಲಟಗೊಂಡಿದ್ದು, 50ರಿಂದ 60ರ ವಯಸ್ಸಿನ ಬದಲಾಗಿ 30ರಿಂದ 50ರ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ.”ಕ್ಯಾನ್ಸರ್ ತಡೆಗೆ ಶೀಘ್ರ ಪತ್ತೆಯೇ ಮಹತ್ವದ ಅಂಶವಾಗಿದೆ”
Related Articles
ಕೌಟುಂಬಿಕ ಇತಿಹಾಸ: ಯಾವ ಮಹಿಳೆಯ ತಾಯಿ ಅಥವಾ ಸಹೋದರಿ ಸ್ತನದ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆಯೋ ಅಂಥವರಿಗೆ ಸಾಧ್ಯತೆ ಹೆಚ್ಚಿರುತ್ತದೆ.
ಸ್ತನಗಳಲ್ಲಿ ಗಡ್ಡೆಗಳು: ಸ್ತನಗಳಲ್ಲಿ ಕ್ಯಾನ್ಸರೇತರ ಗಡ್ಡೆಗಳನ್ನು ಹೊಂದಿರುವ ಮಹಿಳೆಯರು ಭವಿಷ್ಯದಲ್ಲಿ ಸ್ತನದ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಯಿರುತ್ತದೆ.
ಸ್ತನದ ಅಂಗಾಂಶಗಳು ಹೆಚ್ಚು ಸಾಂದ್ರವಾಗಿರುವುದು: ಸ್ತನದ ಅಂಗಾಂಶಗಳು ಹೆಚ್ಚು ಸಾಂದ್ರವಾಗಿರುವ ಮಹಿಳೆಯರು ಸ್ತನ ಕ್ಯಾನ್ಸರ್‌ಗೊಳಗಾಗುವ ಅಪಾಯ ಅಧಿಕ.
ವಯಸ್ಸು: ವಯಸ್ಸಾಗುತ್ತಿದಂತೆ ಮಹಿಳೆಯರು ಸ್ತನದ ಕ್ಯಾನ್ಸರ್ ಬೆಳೆಯಿಸಿಕೊಳ್ಳುವ ಅಪಾಯ ಹೆಚ್ಚುತ್ತದೆ.
ಆಹಾರಾಭ್ಯಾಸ ಮತ್ತು ಜೀವನಶೈಲಿ ಆಯ್ಕೆಗಳು: ಧೂಮಪಾನ ಮಾಡುವ, ಹೆಚ್ಚು ಕೊಬ್ಬುಳ್ಳ ಆಹಾರ ಸೇವಿಸುವ, ಮದ್ಯಪಾನ ಮಾಡುವ ಮಹಿಳೆಯರಿಗೆ ಅಪಾಯ ಹೆಚ್ಚು.
ಬೊಜ್ಜು: ಹೆಚ್ಚು ದೇಹತೂಕ ಹೊಂದಿರುವ, ಬೊಜ್ಜುಳ್ಳ ಮಹಿಳೆಯರಿಗೂ ಅಪಾಯ ಅಧಿಕ.
ಹಾರ್ಮೋನ್ ಅಂಶಗಳು: ಸಹಜ ಅವಧಿಗೆ ಮುನ್ನವೇ ಋತುಚಕ್ರ ಆರಂಭವಾಗಿರುವವರು ಅಥವಾ ಸಾಮಾನ್ಯಕ್ಕಿಂತ ವಿಳಂಬವಾಗಿ ಋತುಚಕ್ರ ಬಂಧ ಅನುಭವಿಸಿರುವ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಯಾಕೆಂದರೆ ಅವರು ಹೆಚ್ಚು ದೀರ್ಘಕಾಲ ಈಸ್ಟ್ರೊಜೆನ್‌ಗೆ ತೆರೆದುಕೊಂಡಿರುತ್ತಾರೆ.
ಸ್ತನದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ – ಸಮಾನತೆ: ಪ್ರಸವಿಸದ ಮಹಿಳೆಯರು |ಹೆಚ್ಚು ಹೆತ್ತ ಮಹಿಳೆಯರು, 30 ವರ್ಷ ವಯಸ್ಸಿನ ಬಳಿಕ ಮಕ್ಕಳಾದವರು
ವಿಕಿರಣಕ್ಕೆ ಒಡ್ಡಿಕೊಳ್ಳುವಿಕೆ: ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಪದೇಪದೇ ಎದುರಿಸುವುದು ಕೂಡ ಮಹಿಳೆ ಸ್ತನದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದಾಗಿದೆ.
Advertisement
ಸ್ತನದ ಕ್ಯಾನ್ಸರ್ ತಡೆಗೆ ಸಲಹೆಗಳು
ಆರೋಗ್ಯಕರ ಜೀವನ ವಿಧಾನ: ನಿಯಮಿತವಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರಾಭ್ಯಾಸ, ಕೊಬ್ಬು ಸೇವನೆಯನ್ನು ಕಡಿಮೆ ಮಾಡುವುದು.
ದೈನಿಕ ಆಹಾರದಲ್ಲಿ ಹೆಚ್ಚು ಪ್ರಮಾಣದ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಸೇರಿಸಿಕೊಂಡರೆ ಆರೋಗ್ಯಕರ ದೇಹತೂಕ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಹೊಸ ತಾಯಂದಿರು ತಮ್ಮ ಮಗುವಿಗೆ ಕನಿಷ್ಠ ಒಂದು ವರ್ಷದ ಕಾಲ ಎದೆಹಾಲು ಉಣಿಸಬೇಕು.
ಅತಿಯಾದ ಧೂಮಪಾನ ಮತ್ತು ಮದ್ಯಪಾನ ಬೇಡ. ಶೀಘ್ರ ಪತ್ತೆಗೆ
ಪ್ರಮುಖ ಅಂಶಗಳು
1. ಯಾವುದೇ ಶಂಕಾಸ್ಪದ ಗಡ್ಡೆ ಕಂಡುಬಂದರೆ: ವೈದ್ಯರನ್ನು, ಅದರಲ್ಲೂ ಓಂಕಾಲಜಿಸ್ಟ್ ಅವರನ್ನು ಸಂದರ್ಶಿಸಿದರೆ ಉತ್ತಮ.
2. ಸ್ತನದ ಸ್ವಯಂ ತಪಾಸಣೆ
3. ಸ್ತನದ ಕ್ಯಾನ್ಸರ್ ಉಂಟಾದ ಇತಿಹಾಸವು ಕುಟುಂಬದಲ್ಲಿ ಬಲವಾಗಿದ್ದರೆ ಆಗಾಗ ಓಂಕಾಲಜಿಸ್ಟ್ ಭೇಟಿಯಾಗಿ ತಪಾಸಣೆ
4. 40 ವರ್ಷ ವಯಸ್ಸಿನ ಬಳಿಕ ಬಿ/ಎಲ್ ಮ್ಯಾಮೊಗ್ರಾಮ್ ಸ್ತನದ ಕ್ಯಾನ್ಸರ್: ಸುಳ್ಳು ಮತ್ತು ನಿಜಗಳು
ಸ್ತನದಲ್ಲಿ ಗಡ್ಡೆ ಇದೆ ಎಂದರೆ ಸ್ತನದ ಕ್ಯಾನ್ಸರ್ ಇದೆ ಎಂದರ್ಥ
ಸ್ತನದಲ್ಲಿ ಕಾಣಿಸಿಕೊಳ್ಳುವ ಗಡ್ಡೆಗಳ ಪೈಕಿ ಅಲ್ಪ ಪ್ರತಿಶತ ಗಡ್ಡೆಗಳು ಮಾತ್ರ ಕ್ಯಾನ್ಸರ್‌ಕಾರಕವಾಗುತ್ತವೆ. ಸ್ತನದಲ್ಲಿ ಗಡ್ಡೆ ಅಥವಾ ಗಂಟು ಕಾಣಿಸಿಕೊಂಡರೆ ಯಾ ಸ್ತನದ ಅಂಗಾಂಶದಲ್ಲಿ ಯಾವುದೇ ಶಂಕಾಸ್ಪದ ಬದಲಾವಣೆ ಉಂಟಾದರೆ ಸ್ತನದ ವೈದ್ಯಕೀಯ ಪರೀಕ್ಷೆಗಾಗಿ ವೈದ್ಯರನ್ನು ಭೇಟಿಯಾಗಿ.
ನಿಮ್ಮ ಕುಟುಂಬ ಸ್ತನದ ಕ್ಯಾನ್ಸರ್ ಇತಿಹಾಸ ಹೊಂದಿದ್ದರೆ ನಿಮಗೂ ಅದು ಉಂಟಾಗುತ್ತದೆ.
ಸ್ತನದ ಕ್ಯಾನ್ಸರ್ ಹೊಂದಿರುವವರ ಪೈಕಿ ಶೇ.10 ಮಂದಿಯ ಕುಟುಂಬದಲ್ಲೂ ಈ ಕಾಯಿಲೆಯ ಇತಿಹಾಸ ಇರುತ್ತದೆ. ಸ್ತನದ ಕ್ಯಾನ್ಸರ್‌ಗೆ ತುತ್ತಾಗುವ ಬಹುತೇಕ ಮಹಿಳೆಯರ ಕುಟುಂಬದಲ್ಲಿ ಈ ಕಾಯಿಲೆ ಕಂಡುಬಂದಿರುವುದಿಲ್ಲ.
ಸ್ತನದ ಕ್ಯಾನ್ಸರ್ ಸಾಂಕ್ರಾಮಿಕ
ಸ್ತನದ ಕ್ಯಾನ್ಸರ್ ಒಬ್ಬರಿಂದ ಇನ್ನೊಬ್ಬರಿಗೆ ಹರಡು ವುದಿಲ್ಲ ಅಥವಾ ವರ್ಗಾವಣೆ ಆಗುವುದಿಲ್ಲ. ಇದು ಸಾಂಕ್ರಾಮಿಕ, ಸೋಂಕು ಅಲ್ಲದ ರೋಗವಾಗಿದ್ದು, ಸ್ತನದ ಅಂಗಾಂಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಉಂಟಾಗುತ್ತದೆ.
ಮ್ಯಾಮೊಗ್ರಾಮ್ ಮಾಡಿಸಿದರೆ ಸ್ತನದ ಕ್ಯಾನ್ಸರ್ ಹರಡುತ್ತದೆ.
ಸ್ತನದ ಮ್ಯಾಮೊಗ್ರಾಮ್ ಮತ್ತು ಎಕ್ಸ್‌ರೇ ಗಳಿಂದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಇವುಗಳಿಗೆ ಸಣ್ಣ ಪ್ರಮಾಣದ ವಿಕಿರಣ ಸಾಕಾಗುತ್ತದೆ. ಈ ವಿಕಿರಣಗಳಿಂದ ಹಾನಿಯುಂಟಾಗುವ ಸಾಧ್ಯತೆ ತೀರಾ ಅಲ್ಪ. -ಡಾ| ಹರೀಶ್ ಇ.
ಕನ್ಸಲ್ಟೆಂಟ್ ಸರ್ಜಿಕಲ್ ಓಂಕಾಲಜಿಸ್ಟ್
ಕೆಎಂಸಿ ಆಸ್ಪತ್ರೆ, ಮಂಗಳೂರು