Advertisement
ಅಷ್ಟೇ ಅಲ್ಲ, ಆದಾಯ ಮತ್ತು ಸ್ವತ್ತುಗಳ ಮಾಹಿತಿಯನ್ನು ಇಲಾಖೆಗೆ ತಪ್ಪಾಗಿ ನೀಡಿದವರ ಬಗ್ಗೆ ನಿಖರ ವಿವರ ನೀಡಿದರೂ 50 ಲಕ್ಷ ರೂ.ಗಳವರೆಗೆ ಬಹುಮಾನ ನೀಡಲಾಗುತ್ತದೆ. ಈ ಸಂಬಂಧ ಪ್ರಸ್ತುತ ಆದಾಯ ತೆರಿಗೆ ಮಾಹಿತಿದಾರರ ಬಹುಮಾನ ಯೋಜನೆಯ ನೀತಿಗಳನ್ನು ಬದಲಿಸಲಾಗಿದೆ.
ಬೇನಾಮಿ ಸ್ವತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದಾಗ ಮಧ್ಯಾಂತರ ಬಹುಮಾನ ನೀಡಲಾಗುತ್ತದೆ. ಅಂತಿಮವಾಗಿ ಸ್ವತ್ತನ್ನು ವಶಪಡಿಸಿಕೊಂಡಾಗ ಒಟ್ಟು ಬಹುಮಾನ ಸಿಗುತ್ತದೆ. ಜಪ್ತಿ ಮಾಡಿದ 4 ತಿಂಗಳೊಳಗೆ ಸ್ವತ್ತಿನ ಶೇ.1ರಷ್ಟು ಅಥವಾ ಗರಿಷ್ಠ 10 ಲಕ್ಷ ರೂ. ಅನ್ನು ಮಧ್ಯಾಂತರವಾಗಿ ನೀಡಲಾಗುತ್ತದೆ. ಎರಡು ವರ್ಷದೊಳಗೆ ಯಾವುದೇ ಪ್ರಕರಣ ಈ ಸಂಬಂಧ ಬಾಕಿ ಇಲ್ಲದಿದ್ದರೆ ಪ್ರಕರಣ ಅಂತಿಮ ಎಂದು ಪರಿಗಣಿಸಿ, ಬಹುಮಾನದ ಮೊತ್ತ ಬಿಡುಗಡೆ ಮಾಡಲಾಗುತ್ತದೆ. ಆದರೆ ಜಪ್ತಿ ಮಾಡಿದ ಸ್ವತ್ತಿನ ಶೇ.5ರಷ್ಟು ಅಥವಾ ಗರಿಷ್ಠ 1 ಕೋಟಿ ರೂ. ಮಾತ್ರ ಬಹುಮಾನ ಸಿಗಲಿದೆ. ವಿದೇಶಿಯರೂ ಸಹಿತ ಯಾವುದೇ ವ್ಯಕ್ತಿಯು ಜಂಟಿ ಅಥವಾ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತರಿಗೆ ಮಾಹಿತಿ ನೀಡಬಹುದಾಗಿದೆ. ಆದರೆ ಮಾಹಿತಿ ನೀಡಿದ ವ್ಯಕ್ತಿಯ ಯಾವ ವಿವರಗಳನ್ನು ವ್ಯಕ್ತಿಯ ಭದ್ರತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಬಹಿರಂಗಗೊಳಿಸಲಾಗುವುದಿಲ್ಲ. ಬೇನಾಮಿ ಸ್ವತ್ತುಗಳ ಬಹಿರಂಗಗೊಳಿಸುವಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಯೋಜನೆ ಘೋಷಿಸಲಾಗಿದೆ.