Advertisement

ಮಕ್ಕಳ ಕೋಣೆಯಲ್ಲಿರಲಿ ಧನಾತ್ಮಕ ಶಕ್ತಿ

10:04 PM Nov 01, 2019 | mahesh |

ಆಧುನಿಕ ಮನೆಗಳಲ್ಲಿ ಒಬ್ಬೊಬ್ಬರಿಗೆ ಒಂದು ಒಂದು ಕೋಣೆಗಳಿರುವುದು ಸಾಮಾನ್ಯ. ಆಯಾ ಕೊಠಡಿಗಳನ್ನು ಅವುಗಳಿಗೆ ತಕ್ಕಂತೆ ಜೋಡಿಸಿಡುವುದರಿಂದ ಆ ರೂಮುಗಳಿಗೆ ಹೆಚ್ಚು ಮಹತ್ವ ಬರುತ್ತದೆ. ಮಕ್ಕಳಿಗಾಗಿಯೇ ಇಂದು ಪ್ರತ್ಯೇಕ ರೂಮ್‌ಗಳನ್ನು ಮಾಡಲು ಹೆತ್ತವರು ಜಾಸ್ತಿ ಇಷ್ಟಪಡುತ್ತಾರೆ. ಮಕ್ಕಳ ಕೋಣೆ ಬೇರೆ ರೂಮ್‌ಗಳಿಗಿಂತ ವಿಭಿನ್ನವಾಗಿರಬೇಕೆಂದು ಹೆತ್ತವರು ಬಯಸುತ್ತಾರೆ. ಮಕ್ಕಳ ಕೋಣೆ ಹೆಚ್ಚು ಆಕರ್ಷಕ, ವಿನೂತನ ಮತ್ತು ಕ್ರಿಯಾತ್ಮಕವಾಗಿರುವುದು ಅಗತ್ಯ. ಮಕ್ಕಳು ತಮ್ಮ ಆಟದ ಸಾಮಾನುಗಳನ್ನು, ಪುಸ್ತಕಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡವುದು ಸಾಮಾನ್ಯ. ಅದನ್ನು ಸರಿಯಾಗಿ ಜೋಡಿಸಿಡುವುದು ಅವಶ್ಯವಾದುದು.

Advertisement

ಮಕ್ಕಳ ಅಭಿರುಚಿಯಂತಿರಲಿ
ಮಕ್ಕಳ ಅಭರುಚಿ ಹೇಗಿದೆ ಎನ್ನುವುದನ್ನು ತಿಳಿದುಕೊಂಡು ಮಕ್ಕಳ ಕೋಣೆಯನ್ನು ಜೋಡಿಸಿಕೊಳ್ಳಿ. ಅವರಿಗೆ ಸಂಗೀತ ಪ್ರಿಯವಾಗಿದ್ದರೆ ಅದಕ್ಕೆ ಹೆಚ್ಚು ಆದ್ಯತೆ ಇರುವಂತಹ ವಸ್ತುಗಳನ್ನು ಕೋಣೆಯಲ್ಲಿ ಜೋಡಿಸಿ. ಹೀಗೆ ಅವರಿಗೆ ಯಾವುದರ ಮೇಲೆ ಹೆಚ್ಚು ಆಸಕ್ತಿ ಎನ್ನುವುದನ್ನು ತಿಳಿದುಕೊಂಡು ಅದಕ್ಕನುಸಾರ ಕೋಣೆಯನ್ನು ಸಿದ್ಧಪಡಿಸಿ. ಮಕ್ಕಳ ಭಾವನೆಗಳಿಗೂ ಬೆಲೆ ಕೊಡಿ.

ಮಕ್ಕಳ ಕೋಣೆ ಹೇಗಿರಬೇಕು?
ಮಕ್ಕಳ ಕೋಣೆ ಎಂದರೆ ಅದರ ಗೋಡೆಯ ಬಣ್ಣದಿಂದ ಹಿಡಿದು ಎಲ್ಲವೂ ಅಚ್ಚುಕಟ್ಟಾಗಿರಬೇಕು. ಮಕ್ಕಳ ಕೋಣೆಯನ್ನು ನೋಡಿಕೊಂಡರೆ ಮಕ್ಕಳು ಹೆಚ್ಚು ಚುರುಕಾಗಿರಲು ಸಾಧ್ಯ. ಮಕ್ಕಳಿಗೆ ಉತ್ತಮ ವಾತಾವರಣ ನೀಡುವ ಜತೆಗೆ ಹೆಚ್ಚು ಆಕರ್ಷಕವಾಗಿರುವಂತೆ ರೂಮ ಇದ್ದರೆ ಉತ್ತಮ. ಮಕ್ಕಳ ಹೆಚ್ಚು ಸಮಯ ರೂಮಿನಲ್ಲೇ ಕಳೆಯುವುದರಿಂದ ಮಕ್ಕಳ ಕೊಠಡಿಗಳನ್ನು ಕ್ರಿಯಾತ್ಮಕವಾಗಿ ಜೋಡಿಸುವುದು ಅಗತ್ಯ.

ಗಾಳಿ,ಬೆಳಕು ಬರುವಂತೆ ಜೋಡಿಸಿ
ಮಕ್ಕಳ ರೂಮುಗಳಲ್ಲಿ ಬೇಕಾದಷ್ಟು ಬೆಳಕು ಇರಲಿ. ಗಾಳಿ , ಬೆಳಕು ಚೆನ್ನಾಗಿ ಬರುವಂತೆ ಮಾಡುವುದು ಅವಶ್ಯಕ.

ಪುಟ್ಟ ಗ್ರಂಥಾಲಯವಿರಲಿ
ಮಕ್ಕಳಿಗೆ ಕುತೂಹಲ ಹುಟ್ಟಿಸುವಂತಹ, ಜತೆಗೆ ಅವರ ಬುದ್ಧಿಶಕ್ತಿ ಹೆಚ್ಚುಸುವಂತಹ ಪುಸ್ತಕಗಳನ್ನು ಮಕ್ಕಳ ಕೋಣೆಯಲ್ಲಿ ಸುಂದರವಾಗಿ ಜೋಡಿಸಿಡಿ. ಇದರಿಂದ ಮಕ್ಕಳಿಗೆ ಪುಸ್ತಕಗಳ ಮೇಲೆ ಆಸಕ್ತಿ ಮೂಡುವ ಸಾಧ್ಯತೆ ಇದೆ.

Advertisement

ಧನಾತ್ಮಕ ಶಕ್ತಿ ಇರಲಿ
ಕೊಠಡಿಯೊಳಗಡೆ ಮಕ್ಕಳಿಗೆ ಮನೋರಂಜನೆ, ಅವರ ಅಭಿರುಚಿ ತಕ್ಕಂತೆ ಇರುವುದರ ಜತೆಗೆ ಧನಾತ್ಮಕ ಶಕ್ತಿ ಇರುವಂತೆ ಮಾಡಿ. ಸಕರಾತ್ಮಕ ಕೋಟ್‌ಗಳು, ಚಿತ್ರಗಳು, ಹಾಡು ಮುಂತಾದವುಗಳನ್ನು ಅಳವಡಿಸಿಕೊಳ್ಳಬಹುದು. ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬುವಂತಹ ವಾತಾವರಣ ರೂಪಿಸುವುದು ಇಂದು ಅಗತ್ಯವಾಗಿದೆ. ಮಕ್ಕಳ ಕೋಣೆ ಎಂದ ಮೇಲೆ ಅಲ್ಲಿರುವ ಎಲ್ಲ ವಸ್ತುಗಳ ಮೇಲೂ ಮನೆಯವರಿಗೆ ನಿಗಾ ಇರಬೇಕು. ಮಕ್ಕಳ ಬೇಕು ಬೇಡಗಳನ್ನು ಚೆನ್ನಾಗಿ ಅರಿತುಕೊಂಡಿರಬೇಕು. ಮಕ್ಕಳಿಗೆ ಒಂಟಿತನ ಕಾಡದಂತೆ, ಮಾನಸಿಕವಾಗಿ ಬಲಗೊಳ್ಳವಂತೆ ಮಾಡುವ ಪ್ರಯತ್ನ ಅವರ ಕೋಣೆಯಿಂದಲೇ ನಡೆಯಬೇಕು.

ವಸ್ತುಗಳು ಕೈಗೆಟಕುವಂತಿರಲಿ
ಮಕ್ಕಳಿಗೆ ಕೈಗೆ ದೊರಕುವಂತೆ ಪುಸ್ತಕ, ಆಟದ ಸಾಮಗ್ರಿಗಳನ್ನು ಜೋಡಿಸಿಡಿ. ಪ್ರತಿಯೊಂದಕ್ಕೂ ದೊಡ್ಡವರನ್ನು ಕೇಳವಂತೆ ಮಾಡುವುದರಿಂದ ಅವರಿಗೆ ಕಿರಿಕಿರಿಯೆನಿಸಬಹದು, ಜತೆಗೆ ಆಸಕ್ತಿಯೂ ಕಡಿಮೆಯಾಗಬಹುದು.

-   ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next