Advertisement
ಸಂತುಲಿತ ಆಹಾರ ಸೇವನೆ ಅಗತ್ಯಓದುವ ಒತ್ತಡದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಗೆ ಗಮನಹರಿಸದೇ ಊಟ, ತಿಂಡಿ, ಸೇವನೆಯನ್ನು ಕಡಿಮೆ ಮಾಡುವುದು ಸಲ್ಲದು. ಉತ್ತಮ ಅಂಕ ಪಡೆಯಬೇಕಾದರೆ ನಾವು ಮೊದಲು ಆರೋಗ್ಯದಿಂದಿರಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸಂತುಲಿತ ಆಹಾರ ಸೇವನೆ ಅವಶ್ಯ. ಸರಿಯಾದ ವೇಳೆಗೆ ಆಹಾರ ಸೇವಿಸಿ, ಹಣ್ಣು-ಹಂಪಲ, ಮತ್ತು ಕಾಳು, ಹಾಲು ಸೇವನೆಗೆ ಹೆಚ್ಚು ಒತ್ತು ನೀಡಿ. ನಿದ್ದೆಗೆ ಜಾರಿಸುವಂತ ಮತ್ತು ಜಂಕ್‌ಫುಡ್‌ಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡಿ.
ಓದಿನಲ್ಲಿ ಶಿಸ್ತು ಪಾಲನೆ ಬಹಳ ಮುಖ್ಯ. ಆದ್ದರಿಂದ ನಿಮ್ಮ ಅಭ್ಯಾಸದ ಸಮಯ ದಿನಚರಿ ಮತ್ತು ವಿಷಯಗಳ ಒಂದು ಉತ್ತಮ ವೇಳಾಪಟ್ಟಿಯನ್ನು ನಿಗದಿಗೋಳಿಸಿ ಮತ್ತು ಅದನ್ನು ಸರಿಯಾಗಿ ಪಾಲಿಸಿ. ಬೆಳಗ್ಗೆYಯಿಂದ ನೀವು ಮಲಗುವ ಸಮಯಕ್ಕೂ ಸರಿಯಾಗಿ ಹೊಂದಿಕೆಯಾಗುವಂತೆ ಸಮಯ ನಿಗದಿಮಾಡಿ. ನಿಮಗೆ ಯಾವ ಗಳಿಗೆಯಲ್ಲಿ ಹೆಚ್ಚು ಸಮಯಾವಕಾಶವಿದೆಯೋ ಅದನ್ನ ಲೆಕ್ಕಹಾಕಿ ಹೆಚ್ಚು ಉಪಯೋಗ ಪಡಿಸಿಕೊಳ್ಳಿ. ಆಟ, ನಿದ್ರೆಗೂ ಅಷ್ಟೇ ಪ್ರಾಮುಖ್ಯ ಇರಲಿ
ಮಕ್ಕಳೂ ಸರಿಯಾಗಿ ನಿದ್ದೆ ಮಾಡಿದರೆ. ಅವರು ಒದುವುದಕ್ಕೆ ಉತ್ಸಾಹವಿರುತ್ತದೆ. ನಿದ್ದೆ ಬಿಟ್ಟು ಓದುವುದು ಅಥವಾ ಸಿನೆಮಾ, ವಿಡಿಯೋ ಗೇಮ್ ಆಡುವುದರಿಂದ ಅವರಿಗೆ ಓದುವ ಸಮಯದಲ್ಲಿ ತೂಕಡಿಯ ಸಮಸ್ಯೆ ಎದುರಾಗುತ್ತದೆ. ಓದಿನಷ್ಟೇ ಪ್ರಾಮುಖ್ಯತೆ ಆಟಕ್ಕೂ ನೀಡಿ. ದಿನನಿತ್ಯ ಬೆಳಗ್ಗೆ ಅಥವಾ ಸಂಜೆ ಸಮಯ ಮಕ್ಕಳನ್ನು ಆಡಲು ಬಿಡಿ. ಇದರಿಂದ ಮಕ್ಕಳು ಶುದ್ಧಗಾಳಿ ಸೇವಿಸಿ, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ.
Related Articles
ಮಕ್ಕಳೂ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೋ ಆ ವಿಷಯಕ್ಕೆ ಹೆಚ್ಚು ಸಮಯ ನೀಡುವುದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಸಹಕಾರಿಯಾಗುತ್ತದೆ. ಮಕ್ಕಳಿಗೆ ಕಷ್ಟದ ವಿಷಯ ಓದಿ ಉದಾಸೀನವಾದಾಗ ಅವರ ಇಷ್ಟದ ವಿಷಯ ಓದುವುದರಿಂದ ಮತ್ತೆ ಅವರು ರೀಚಾರ್ಜ್ ಆಗುತ್ತಾರೆ.
Advertisement
ಬೇಗನೇ ಏಳುವುದುಬೆಳಗಿನ 5ರಿಂದ 8 ಗಂಟೆ ಯವರೆಗೂ ಪ್ರಕೃತಿ ಅತ್ಯಂತ ಪ್ರಶಾಂತ ಮತ್ತು ನಿರ್ಮಲ ಗಾಳಿಯಿಂದ ಮನಸ್ಸು ಪ್ರಪುಲ್ಲವಾಗುತ್ತದೆ. ಈ ಸಮಯದಲ್ಲಿ ನೀವು ಓದುವುದು ನಿಮ್ಮ ಸ್ಮತಿ ಪಟಲದಲ್ಲಿ ಹೆಚ್ಚು ಸಮಯ ಉಳಿಯುತ್ತದೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಕೆಲವು ಕ್ಷಣ ಧ್ಯಾನ, ಅಥವಾ ದೇವರನ್ನು ಸ್ತುತಿಸಿ ನಿಮ್ಮ ಓದನ್ನು ಆರಂಭಿಸಿ ಇದು ನಿಮ್ಮ ಮನಸ್ಸನ್ನು ಇನ್ನಷ್ಟು ಶಾಂತವಾಗಿಸುತ್ತದೆ. ಇದರ ಜತೆಗೆ ಬೆಳಗಿನ ಸಮಯದಲ್ಲಿ ಓದುವಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅಧ್ಯಯನ ಮಾಡುವುದು ಅವಶ್ಯ. - ಶಿವಾನಂದ ಎಚ್.