ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 1,611 ಪ್ಲ್ರಾಟ್‌ಗಳು ಹಲವು ವರ್ಷಗಳಿಂದ ಮಾರಾಟವಾಗದೇ ಖಾಲಿ ಯಿದ್ದರೂ ಹೊಸ ಯೋಜನೆಗಳ ಮೂಲಕ ಇನ್ನೂ ಸಾವಿರಾರು ಪ್ಲ್ರಾಟ್‌ಗಳ ನಿರ್ಮಾಣಕ್ಕೆ ಕೈ ಹಾಕಿ ಮತ್ತಷ್ಟು ಹೊರೆ ಹೊರಲು ಬಿಡಿಎ ಹೊರಟಿದೆ.
ಸಿಲಿಕಾನ್ ಸಿಟಿಯ ಹೊರ ವಲಯಗಳಲ್ಲಿ ಸುಸಜ್ಜಿತ ಮೂಲಭೂತ ಸೌಕರ್ಯ ಹೊಂದಿ ರುವ 1,611 ಪ್ಲ್ರಾಟ್‌ಗಳು ಬೇಡಿಕೆಯಿಲ್ಲದೇ ಕಳೆದ 3-4 ವರ್ಷಗಳಿಂದ ಖಾಲಿ-ಖಾಲಿಯಾಗಿ ಬಿಕೋ ಎನ್ನುತ್ತಿವೆ. ಬಿಡಿಎಯ ಅರ್ಧಕ್ಕರ್ಧ ಪ್ಲ್ರಾಟ್‌ಗಳು ಖಾಲಿಯಿದ್ದರೂ ಬೆಂಗಳೂರು ಹೊರ ವಲಯ ಗಳಲ್ಲಿ ಮತ್ತೆ ಅಪಾರ್ಟ್‌ಮೆಂಟ್ ನಿರ್ಮಾಣದ ದುಸ್ಸಾಹಸಕ್ಕೆ ಹೊರಟಿರುವುದು ಬಿಡಿಎ ಕ್ರಮ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸುಸಜ್ಜಿತ ಸವಲತ್ತುಗಳಿದ್ದರೂ ಬೇಡಿಕೆಯಿಲ್ಲ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ 1 ಕಿ.ಮೀ ದೂರದಲ್ಲಿರುವ 50 ಎಕರೆ ವಿಶಾಲವಾದ ಜಾಗದಲ್ಲಿರುವ ಕಣ್‌ಮಿಣಿಕೆಯಲ್ಲಿ ಫೇಸ್-2 ಹಾಗೂ ಫೇಸ್-3ರಲ್ಲಿ 2 ಬಿಎಚ್‌ಕೆಯ 992 ಪ್ಲ್ರಾಟ್ ನಿರ್ಮಿಸಲಾಗಿದೆ. ಈ ಪೈಕಿ ಕೇವಲ 250 ಪ್ಲ್ರಾಟ್‌ಗಳಷ್ಟೇ ಮಾರಾಟವಾ ಗಿವೆ. ಬಾಕಿ 742 ಪ್ಲ್ರಾಟ್ ಖರೀದಿಗೆ ಗ್ರಾಹಕರು ಮುಂದೆ ಬಂದಿಲ್ಲ. ಫೇಸ್-2ಗೆ 25 ಲಕ್ಷ ರೂ., ಫೇಸ್-3ಗೆ 30 ಲಕ್ಷ ರೂ. ನಿಗಡಿಪಡಿಸಲಾಗಿದೆ. ಕಣ್‌ಮಿಣಿಕೆ ಫೇಸ್-4ನಲ್ಲಿ 3 ಬಿಎಚ್‌ಕೆಯ 108 ಪ್ಲ್ರಾಟ್ ತಲೆ ಎತ್ತಿದ್ದು, 68 ಪ್ಲ್ರಾಟ್‌ಗಳು ಖಾಲಿ ಉಳಿದಿವೆ. 40 ಲಕ್ಷ ರೂ.ಗೆ ನೀಡಿದರೂ ಪ್ಲ್ರಾಟ್ ಖರೀದಿಗೆ ಜನ ಆಸಕ್ತಿ ತೋರುತ್ತಿಲ್ಲ. ಇಲ್ಲಿನ ಅಪಾರ್ಟ್‌ಮೆಂಟ್ ಸುತ್ತ-ಮುತ್ತಲೂ ಪ್ರಕೃತಿ ಸಹಜವಾದ ಸೌಂದರ್ಯ ಕಣ್ತುಂಬಿಕೊಳ್ಳಬಹುದು. ಕ್ಲಬ್‌ಹೌಸ್, ಈಜುಕೊಳ, ಶೆಟಲ್‌ಕಾಕ್ ಕೋರ್ಟ್, 10 ಅಂಗಡಿ ಮಳಿಗೆಗಳು, ಜಿಮ್, ಲಿಫ್ಟ್, 2 ಕಚೇರಿಗಳಿಗೆ ಸ್ಥಳಾವಕಾಶ, ವಿಶಾಲವಾದ ರಸ್ತೆ ಸೇರಿದಂತೆ ಆಧುನಿಕ ಸೌಲಭ್ಯ ಕಲ್ಪಿಸಿಕೊಡಲಾಗಿದೆ.
ಇನ್ನು ಮೈಸೂರು ರಸ್ತೆಗೆ 1 ಕಿ.ಮೀ. ದೂರದಲ್ಲಿರುವ ನಾಡಪ್ರಭು ಕೆಂಪೇಗೌಡ ಲೇಔಟ್ ಬಡಾವಣೆಯಲ್ಲಿ ಕೊಮ್ಮಘಟ್ಟ ಫೇಸ್-1 (25 ಲಕ್ಷ ರೂ. )ಹಾಗೂ ಫೇಸ್-2 (32 ಲಕ್ಷ ರೂ.) ನಿರ್ಮಿಸಿರುವ 536 ಅಪಾರ್ಟ್ ಮೆಂಟ್‌ಗಳಲ್ಲಿ 2 ಬಿಎಚ್‌ಕೆ ಪ್ಲ್ರಾಟ್‌ಗಳಲ್ಲಿ 414 ಮಾರಾಟವಾಗಿದ್ದು, 92 ಪ್ಲ್ರಾಟ್‌ಗಳು ಬಿಡಿಎ ಸುಪರ್ದಿಯಲ್ಲೇ ಉಳಿದಿದೆ. ಈ ಯೋಜನೆ ರೂಪಿಸಿ 3 ವರ್ಷಗಳೇ ಕಳೆದರೂ ಬಹುತೇಕ ಪ್ಲ್ರಾಟ್‌ಗಳು ಮಾರಾಟವಾಗದೇ ಇದರ ನಿರ್ವಹಣೆಯೇ ಬಿಡಿಎಗೆ ತಲೆನೋವಾಗಿದೆ.
ನೂರಾರು ಪ್ಲ್ರಾಟ್ ಖಾಲಿ: ಹಳೆ ಮದ್ರಾಸು ರಸ್ತೆಯಲ್ಲಿರುವ ಬಾಗಲೂರು ವೃತ್ತದ ಐಟಿ ಸೆಕ್ಟರ್‌ನಲ್ಲಿ ಕೋನದಾಸಪುರದಲ್ಲಿ 2 ಬಿಎಚ್‌ಕೆಯ 672 ಪ್ಲ್ರಾಟ್ 4 ತಿಂಗಳಿಂದ ಮಾರಾಟಕ್ಕೆ ಸಿದ್ಧವಾಗಿದೆ. ಕೇವಲ 70 ಪ್ಲ್ರಾಟ್‌ಗಳು ಮಾರಾಟವಾಗಿದ್ದು, 602 ಮನೆಗಳು ಖಾಲಿ ಉಳಿದುಕೊಂಡಿವೆ. 48 ಲಕ್ಷ ರೂ. ಬೆಲೆ ನಿಗದಿಪಡಿಸಿದರೂ ಗ್ರಾಹಕರು ಇತ್ತ ಸುಳಿಯುತ್ತಿಲ್ಲ. ನಾಯಂಡಹಳ್ಳಿ ಜಂಕ್ಷನ್‌ನಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಚಂದ್ರಲೇಔಟ್‌ನಲ್ಲಿ ಇತ್ತೀಚೆಗೆ ತಲೆ ಎತ್ತಿರುವ 120 ಪ್ಲ್ರಾಟ್‌ಗಳಲ್ಲಿ 107 ಮನೆಗಳು ಹಾಗೇ ಉಳಿದುಕೊಂಡಿವೆ. ಬಿಡಿಎ ನಿರ್ಮಿಸಿರುವ ಎಲ್ಲ ಪ್ಲ್ರಾಟ್‌ಗಳಲ್ಲೂ ಹಾಲ್, ಅಡುಗೆ ಮನೆ, ಡೈನಿಂಗ್, ಒಂದು ಸಿಟೌಟ್, ಅಡುಗೆ ಮನೆ ಪಕ್ಕದಲ್ಲಿ ಪಾತ್ರೆ ತೊಳೆಯಲು ಜಾಗ, ಹಾಲ್ ಬಳಿ ಸಿಟೌಟ್‌ಗಳಿವೆ.
ಸಾರ್ವಜನಿಕ ವಲಯಗಳಲ್ಲೂ ಚರ್ಚೆ: ಸಾವಿರಾರು ಪ್ಲ್ರಾಟ್‌ಗಳು ಮಾರಾಟಕ್ಕೆ ಬಾಕಿ ಇದ್ದರೂ ತುಮಕೂರು-ಮಾಗಡಿ ರಸ್ತೆಯ ಮಧ್ಯೆ ಹುಣ್ಣಿಗೆರೆಯ 26 ಎಕರೆ ವಿಶಾಲವಾದ ಪ್ರದೇಶದಲ್ಲಿ 322 ಐಷಾರಾಮಿ ವಿಲ್ಲಾಗಳು ಹಾಗೂ ಜಿ ಪ್ಲಸ್ 3 ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ 1 ಬಿಎಚ್‌ಕೆಯ 320 ಪ್ಲ್ರಾಟ್‌ಗಳನ್ನು ನಿರ್ಮಿಸಲಾಗಿದೆ. ಸೊನ್ನೇನಹಳ್ಳಿ ಸೇರಿದಂತೆ ಬೆಂಗಳೂರಿನ ಹೊರವಲಯಗಳಲ್ಲಿ ಇನ್ನೂ ಸಾವಿರಾರು ಪ್ಲ್ರಾಟ್ ನಿರ್ಮಿಸಲುಚಿಂತನೆ ನಡೆಸಲಾಗುತ್ತಿದೆ. ಬಿಡಿಎ ಇನ್ನಷ್ಟು ಹೊಸ ಪ್ಲ್ರಾಟ್ ನಿರ್ಮಿಸುತ್ತಿರುವ ಕ್ರಮವು ಸಾರ್ವಜನಿಕ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಬಿಡಿಎ ಪ್ಲ್ರಾಟ್ ಖರೀದಿಗೆ ಹಿಂದೇಟು ಏಕೆ?:
ದಕ್ಷಿಣ ಭಾರತದಲ್ಲಿ ವಾಸ್ತು ಸೇರಿದಂತೆ ಕೆಲ ನಂಬಿಕೆಗಳ ಆಧಾರದಲ್ಲಿ ಮನೆ ನಿರ್ಮಿಸಲು ಬಹುತೇಕರು ಮುಂದಾಗುತ್ತಾರೆ. ಬಿಡಿಎ ಪ್ಲ್ರಾಟ್‌ಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತದೆ. ನಂಬಿಕೆಗಳಿಗೆ ಇಲ್ಲಿ ಹೆಚ್ಚಿನ ಒತ್ತು ನೀಡುವುದಿಲ್ಲ. ಇನ್ನು ಖಾಸಗಿ ಅಪಾರ್ಟ್ ಮೆಂಟ್‌ಗಳಲ್ಲಿ ಪ್ಲ್ರಾಟ್ ನಿರ್ಮಿಸುವ ಮೊದಲೇ ಗುಣಮಟ್ಟದ ವಸ್ತು ಬಳಸಿ
ಮನೆ ನಿರ್ಮಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು. ಆದರೆ, ಬಿಡಿಎ ಪ್ಲ್ರಾಟ್‌ಗಳಲ್ಲಿ ಪ್ಲ್ರಾಟ್ ಖರೀದಿಸಿದ ಬಳಿಕವೇ ಪರಿಶೀಲಿಸಬೇಕು. ಬಿಡಿಎ ಪ್ಲ್ರಾಟ್‌ಗಳದಾಖಲೆಗಳು ಸರಿಯಿದ್ದರೂ ಜನರಲ್ಲಿ ತಮ್ಮಿಷ್ಟದ ಪ್ರಕಾರ ಮನೆ ನಿರ್ಮಿಸಬೇಕೆಂಬ ಬಯಕೆಗಳಿರುತ್ತವೆ. ಇನ್ನು ಮಾಹಿತಿ ಕೊರತೆಯೂ ಇರುತ್ತದೆ. ಪ್ರಮುಖವಾಗಿ ಇಂತಹ ಕಾರಣಕ್ಕೆ ಬಿಡಿಎ ಪ್ಲ್ರಾಟ್‌ಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಾರೆ ಎಂಬುದು ರಿಯಲ್ ಎಸ್ಟೇಟ್ ತಜ್ಞರ ಅಭಿಪ್ರಾಯ.
ಅನುಕೂಲವಾಗುವಂತೆ ಬಿಡಿಎ ಫ್ಲ್ಯಾಟ್‌ಗಳನ್ನು ನಿರ್ಮಿಸಲಾ ಗಿದೆ. ರಿಯಾಯಿತಿ ದರದಲ್ಲೇ ಮಾರಾಟ ಮಾಡಲಾಗುತ್ತಿದೆ. ಹಂತ-ಹಂತವಾಗಿ ಬಿಡಿಎ ಪ್ಲ್ರಾಟ್‌ಗಳು ಮಾರಾಟವಾಗುತ್ತಿದೆ.
-ಡಾ.ಬಿ.ದೇವರಾಜ್, ಉಪ ಕಾರ್ಯದರ್ಶಿ-2, ಆಡಳಿತ ಮತ್ತು ಹಂಚಿಕೆ ವಿಭಾಗ, ಬಿಡಿಎ
-ಅವಿನಾಶ ಮೂಡಂಬಿಕಾನ