Advertisement
ಗೌರಿ -ಗಣೇಶ ಹಬ್ಬದ ಸಂದರ್ಭದಲ್ಲಿ ಕಣ್‌ಮಿಣಿಕೆ ಫ್ಲ್ಯಾಟ್‌ಗಳ ಮೇಲೆ ಶೇ.5 ಮತ್ತು 10 ರಿಯಾಯಿತಿಯನ್ನು ಬಿಡಿಎ ಘೋಷಣೆ ಮಾಡಿತ್ತು. ರಿಯಾಯಿತಿ ಪ್ರಕಟಿಸಿದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಣ್‌ಮಿಣಿಕೆ ಫ್ಲ್ಯಾಟ್‌ಗಳನ್ನು ಖರೀದಿಸಲು ಮುಂದೆ ಬಂದಿಲ್ಲ. ಈ ದೃಷ್ಟಿಯಿಂದ ಗಂಭೀರ ಆಲೋಚನೆಯಲ್ಲಿ ತೊಡಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ ಕಣ್‌ಮಿಣಿಕೆ ವಸತಿ ಸಮುತ್ಛಯದಲ್ಲಿ ” ಕ್ಲಬ್‌ಹೌಸ್’ ನಿರ್ಮಾಣ ಮಾಡಿ ಖರೀದಿದಾರರನ್ನು ಆಕರ್ಷಿಸುವ ಮತ್ತೂಂದು ಪ್ರಯತ್ನಕ್ಕೆ ಹೆಜ್ಜೆ ಇರಿಸಿದೆ.
Related Articles
Advertisement
ಐಷಾರಾಮಿ ರೆಸ್ಟೋರೆಂಟ್: ಕ್ಲಬ್‌ಹೌಸ್‌ನಲ್ಲಿ ಗ್ರಾಹಕರಿಗೆ ಅನುಕೂಲಕ್ಕೆ “ಐಷಾರಾಮಿ ರೆಸ್ಟೋರೆಂಟ್’ ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ವಿಶೇಷ ಶುಭ ಸಮಾರಂಭಗಳಿಗೆ ಸದ್ಬಳಕೆಯಾಗಲಿ ಎಂಬ ದೃಷ್ಟಿಯಿಂದ “ಕಮ್ಯೂನಿಟಿ ಹಾಲ್’ ಕೂಡ ನಿರ್ಮಾಣ ಮಾಡಲಿದೆ ಎಂದು ಬಿಡಿಎ ಹಿರಿಯ ಎಂಜಿನಿಯರ್ ರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಮಾರಾಟವಾಗಬೇಕಾಗಿವೆ: ಹೊಸ ಸಮುತ್ಛಯಗಳನ್ನು ನಿರ್ಮಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಬಿಡಿಎ ಈ ಹಿಂದೆ ಒಂದು ಫ್ಲ್ಯಾಟ್ ಖರೀದಿಸುವವರಿಗೆ ಶೇ.5 ಮತ್ತು ಒಂದಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳನ್ನು ಖರೀದಿಸಿದವರಿಗೆ ಶೇ.10 ರಷ್ಟು ರಿಯಾಯ್ತಿ ನೀಡಿತ್ತು. ಈ ವೇಳೆ 2 ಬಿಎಚ್‌ಕೆಯ ಐದುನೂರ ನಾಲ್ವತ್ತಾರು ನಿವೇಶನಗಳ ಪೈಕಿ, 225 ಫ್ಲ್ಯಾಟ್‌ಗಳು ಮಾರಾಟವಾಗಿದ್ದು ಇನ್ನೂ 271 ನಿವೇಶನಗಳು ಮಾರಾಟವಾಗದೆ ಹಾಗೇ ಉಳಿದಿವೆ.
ಬಿಡಿಎ ನಿರ್ಮಿಸಿರುವ ನಿವೇಶನಗಳಿಗೆ ಭಾರೀ ಬೇಡಿಕೆ ಇದೆ. ಕಣ್‌ಮಿಣಿಕೆ ಫ್ಲ್ಯಾಟ್‌ಗಳತ್ತ ಗ್ರಾಹಕರನ್ನು ಸೆಳೆಯಲು ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದ್ದು ಇದರಲ್ಲಿ ಕ್ಲಬ್ ಹೌಸ್ ಕೂಡ ಸೇರಿದೆ.-ರಾಕೇಶ್ ಸಿಂಗ್, ಬಿಡಿಎ ಆಯುಕ್ತ. * ದೇವೇಶ ಸೂರಗುಪ್ಪ