Advertisement

ಕೌಂಟಿ ಬಿಟ್ಟು ಐತಿಹಾಸಿಕ ಟೆಸ್ಟ್‌ ಆಡಿ: ಕೊಹ್ಲಿಗೆ ಖಡಕ್‌ ಸೂಚನೆ

06:00 AM Apr 28, 2018 | Team Udayavani |

ಹೊಸದಿಲ್ಲಿ: ಬೆಂಗಳೂರಿನ ಕ್ರಿಕೆಟ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ. ಜೂ.14ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡಲಿದ್ದಾರೆ. 

Advertisement

ಈ ಹಿಂದೆ ಭಾರತ ತಂಡದ ನಾಯಕ ಅಫ್ಘಾನ್‌ ವಿರುದ್ಧ ಟೆಸ್ಟ್‌ ಪಂದ್ಯವನ್ನು ಬಿಟ್ಟು ಇಂಗ್ಲೆಂಡ್‌ನ‌ಲ್ಲಿನ ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ ಎನ್ನಲಾಗಿತ್ತು. ಇಂಗ್ಲೆಂಡ್‌ ನೆಲದಲ್ಲಿ ನಡೆಯಲಿರುವ ಸರಣಿಗೂ ಮೊದಲು ಕೊಹ್ಲಿ ಅಲ್ಲಿನ ವಾತಾವರಣಕ್ಕೆ ಸರಿಯಾಗಿ ಹೊಂದಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಹೀಗಾಗಿ ಸರಣಿಗೂ ಮೊದಲು ಕೌಂಟಿ ಕ್ರಿಕೆಟ್‌ ಆಡುವುದಾಗಿ ತಿಳಿಸಿದ್ದರು. 

ಆದರೆ ಮೂಲಗಳ ಪ್ರಕಾರ ಸಿಒಎ (ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ) ಇದಕ್ಕೆ ಅನುಮತಿ ನೀಡಿಲ್ಲ ಎನ್ನಲಾಗಿದೆ. ಅಫ್ಘಾನ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಐತಿಹಾಸಿಕ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ಭಾಗವಹಿಸದಿದ್ದರೆ ಅದು ಕೂಟಕ್ಕೆ ಮಾಡಿದ ಅವಮಾನ. ಜತೆಗೆ ಪ್ರವಾಸಿ ತಂಡಕ್ಕೂ ಅಪಮಾನ ಮಾಡಿದ್ದಂತಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next