Advertisement
ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 40 ಲಕ್ಷ ರೂ., ಸಹಾಯಕ ಸಿಬಂದಿಗೆ ತಲಾ 25 ಲಕ್ಷ ರೂ. ನಗದು ಬಹುಮಾನ ನೀಡಲಿದೆ. ಇದರ ಬೆನ್ನಲ್ಲೇ ತಂಡ ಭಾರತಕ್ಕೆ ಮರಳಿದ ಬಳಿಕ ಅದ್ಧೂರಿ ಸಮ್ಮಾನ ಸಮಾರಂಭ ಏರ್ಪಡಿಸುವುದಾಗಿ ತಿಳಿಸಿದೆ.
ಅಂಡರ್-19 ತಂಡಕ್ಕೆ ಗಯಾನಾದ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ಔತಣ ಕೂಟವನ್ನು ಏರ್ಪಡಿಸ ಲಾಯಿತು. ಭಾರತೀಯ ಕಾಲಮಾನ ಪ್ರಕಾರ ತಂಡ ಸೋಮವಾರ ಬೆಳಗ್ಗೆ ಗಯಾನಾದಿಂದ ಭಾರತದತ್ತ ಹೊರ ಟಿದೆ. ಇದೊಂದು ಸುದೀರ್ಘ ಪ್ರಯಾಣ ವಾಗಿದ್ದು, ಆ್ಯಮ್‌ಸ್ಟರ್ಡಮ್ ಮೂಲಕ ಬೆಂಗಳೂರಿಗೆ ಬಂದು, ಅಲ್ಲಿಂದ ಅಹ್ಮದಾಬಾದ್‌ಗೆ ಆಗಮಿಸಬೇಕಿದೆ.
Related Articles
Advertisement
ಇದನ್ನೂ ಓದಿ:ಪ್ರೊ ಕಬಡ್ಡಿ : ಜೈಪುರ್ ಪಿಂಕ್ ಪ್ಯಾಂಥರ್ ಎಂಟನೇ ಗೆಲುವು
“ಇದೊಂದು ಅವಿಸ್ಮರಣೀಯ ಕ್ಷಣ. ಸೂಕ್ತ ಕಾಂಬಿನೇಶನ್ ಒಂದನ್ನು ರೂಪಿಸುವುದು ಸವಾಲಾಗಿ ಕಾಡಿತು. ಕ್ರಮೇಣ ಇದರಲ್ಲಿ ಯಶಸ್ವಿಯಾದೆವು. ನಮ್ಮ ಯಶಸ್ಸಿನಲ್ಲಿ ತಂಡದ ಸಹಾಯಕ ಸಿಬಂದಿಯ ಪಾತ್ರ ಮಹತ್ವದಾಗಿತ್ತು. ಅವರಿಗೆ ಕೃತಜ್ಞತೆಗಳು’ ಎಂಬುದಾಗಿ ನಾಯಕ ಯಶ್ ಧುಲ್ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.
ಭಾರತದ ಮಾಜಿ ಕ್ರಿಕೆಟಿಗರಾದ ಹೃಷಿಕೇಶ್ ಕಾನಿಟ್ಕರ್ ತಂಡದ ಪ್ರಧಾನ ಕೋಚ್ ಆಗಿದ್ದರು. ಮಾಜಿ ಸ್ಪಿನ್ನರ್ ಸಾಯಿರಾಜ್ ಬಹುತುಳೆ ಕೂಡ ಈ ತಂಡದಲ್ಲಿದ್ದರು.
ಇವರೆಲ್ಲರಿಗಿಂತ ಮಿಗಿಲಾಗಿ, ಮಾಜಿ ಆಟಗಾರ, ಎನ್‌ಸಿಎಯ ಹಾಲಿ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ತಂಡದ ಮೆಂಟರ್ ಆಗಿದ್ದುದು ಕಿರಿಯ ಕ್ರಿಕೆಟಿಗರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿತು.