Advertisement

ಗಂಗೂಲಿಗಾಗಿ ಬಿಸಿಸಿಐ ನಿಯಮ ಬದಲಾವಣೆ?

08:04 PM Nov 15, 2019 | Team Udayavani |

ಲೋಧಾ ಶಿಫಾರಸಿನ ಪ್ರಕಾರ 6 ವರ್ಷ ಅಧಿಕಾರದಲ್ಲಿದ್ದವರು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ನಲ್ಲಿ ಮತ್ತೆ ಅಧಿಕಾರ ಹೊಂದುವಂತಿಲ್ಲ. ಹಿಂದೆ ಸುಪ್ರೀಂ ಕೋರ್ಟ್‌ಗೆ ಲೋಧಾ ಸಮಿತಿಯು ಕ್ರಿಕೆಟ್‌ನಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವು ಶಿಫಾರಸು ಮಾಡಿತ್ತು. ಅದರಲ್ಲಿ 6 ವರ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿಯೊಬ್ಬರು ಬಿಸಿಸಿಐನಲ್ಲಿ ಹುದ್ಧೆ ಹೊಂದಿರಬಾರದು ಎನ್ನುವ ಅಂಶವೂ ಒಳಗೊಂಡಿತ್ತು.

Advertisement

ಬಿಸಿಸಿಐಗೆ ವಿನೋದ್‌ ರಾಯ್‌ ನೇತೃತ್ವದ ಆಡಳಿತಾಧಿಕಾರಿಗಳು ಅಧಿಕಾರದಲ್ಲಿದ್ದಾಗ ಈ ನಿಯಮ ಜಾರಿಯಾಗಿತ್ತು. ಈಗ ಬಿಸಿಸಿಐಗೆ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ 5 ವರ್ಷ 3 ತಿಂಗಳು ಕಾರ್ಯ ನಿರ್ವಹಿಸಿರುವುದರಿಂದ ಅವರು ಮುಂದೆ ಬಿಸಿಸಿಐನಲ್ಲಿ 9 ತಿಂಗಳು ಆಡಳಿತ ಮಾಡುವ ಅವಕಾಶ ಮಾತ್ರ ಬಾಕಿ ಇದೆ.

ಮೂಲಗಳ ಪ್ರಕಾರ, ಗಂಗೂಲಿಯಂತಹ ಆಡಳಿತಾಧಿಕಾರಿಗಳು ಭಾರತ ಕ್ರಿಕೆಟ್‌ಗೆ ಬೇಕು ಎನ್ನುವ ಉದ್ದೇಶದಿಂದ ಬಿಸಿಸಿಐ ಇದೀಗ ತನ್ನ ನಿಯಮವನ್ನೇ ಬದಲಾವಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಕೆಲವರು ಈ ನಿರ್ಧಾರವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಮತ್ತೆ ಕೆಲವರು ನಿಯಮ ಉಲ್ಲಂಘನೆ ನಡೆಸುವುದನ್ನು ವಿರೋಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next