Advertisement
ವಿರೋಧವನ್ನು ಬಿಸಿಸಿಐ ಒಪ್ಪಿಕೊಂಡಿದೆ. ಕೋಲ್ಕತಾದಲ್ಲಿ ನಡೆದ ಬಿಸಿಸಿಐ ತಾಂತ್ರಿಕ ಸಮಿತಿ ಸಭೆಯಲ್ಲಿ ಮತ್ತೆ ಹಳೆಯ ಪದ್ಧತಿಗೆ ಹಿಂತಿರುಗುವ ತೀರ್ಮಾನವಾಗಿದೆ. ಆದರೆ ನಾಕೌಟ್ ಹಂತದ ಪಂದ್ಯಗಳನ್ನು ಮಾತ್ರ ತಟಸ್ಥ ತಾಣದಲ್ಲಿ ಆಡಿಸುವ ನಿರ್ಧಾರ ಮುಂದುವರಿಸಲಾಗಿದೆ.
ದೇಶದ ಎಲ್ಲ ಕ್ರಿಕೆಟಿಗರು ಎಲ್ಲ ರೀತಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂಬ ಕಾರಣದಿಂದ 28 ರಣಜಿ ತಂಡಗಳು ಬೇರೆ ರಾಜ್ಯಗಳಲ್ಲಿ ಆಡುವ ವ್ಯವಸ್ಥೆಯಿದು. ಅಂದರೆ ಯಾವುದೇ ತಂಡಗಳು ತಮ್ಮ ನೆಲದಲ್ಲಿ ಪಂದ್ಯವಾಡುವುದಿಲ್ಲ. ಹಿಂದಿನ ಮಾದರಿ ಹೇಗಿತ್ತು?
ಹಿಂದೆ ಪ್ರತಿ ತಂಡಗಳು ಒಂದು ಪಂದ್ಯವನ್ನು ತಮ್ಮ ನೆಲದಲ್ಲಿ ಮತ್ತೂಂದು ಪಂದ್ಯವನ್ನು ಎದುರಾಳಿಗಳ ನೆಲದಲ್ಲಿ ಆಡುತ್ತಿದ್ದವು. ಆಗ ಸ್ಥಳೀಯ ಪ್ರೇಕ್ಷಕರ ಬೆಂಬಲವನ್ನೂ ಹೊಂದಲು ಸಾಧ್ಯವಿತ್ತು.
Related Articles
ಹಿಂದಿನ ಬಾರಿ ಲೀಗ್ ಹಂತದ ಗುಂಪುಗಳ ಸಂಖ್ಯೆ ಮೂರು ಮಾತ್ರವಿತ್ತು. ಎ, ಬಿ, ಸಿ ಎಂದು ವಿಂಗಡಿಸಲಾಗಿತ್ತು. ಎ ಮತ್ತು ಗುಂಪಿನಲ್ಲಿ ತಲಾ 9 ತಂಡಗಳಿದ್ದವು. ಸಿ ಗುಂಪಿನಲ್ಲಿ 10 ತಂಡಗಳಿದ್ದವು. ಎ,ಬಿ ಗುಂಪಿನಿಂದ ತಲಾ 3 ತಂಡಗಳು, ಸಿಯಿಂದ 2 ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಆಡುತ್ತಿದ್ದವು. ಈ ಬಾರಿ ಎ,ಬಿ,ಸಿ,ಡಿ ಎಂಬ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ಪ್ರತಿ ಗುಂಪಿನಲ್ಲೂ 7 ತಂಡಗಳು ಆಡುತ್ತವೆ. ಪ್ರತಿ ಗುಂಪಿನಿಂದ ತಲಾ 2 ತಂಡಗಳು ಕ್ವಾರ್ಟರ್ ಫೈನಲ್ ಆಡುತ್ತವೆ.
Advertisement
ಗುಲಾಬಿ ಚೆಂಡಿನ ಪ್ರಯೋಗಮುಂದುವರಿಕೆ ಇದೀಗ ವಿಶ್ವದಲ್ಲಿ ಹಗಲು ರಾತ್ರಿಯ ಟೆಸ್ಟ್ ಜನಪ್ರಿಯವಾಗುತ್ತಿದೆ. ಭಾರತದಲ್ಲೂ ಈ ಮಾದರಿ ಟೆಸ್ಟ್ ಆಡಿಸಬೇಕೆಂದರೆ ಗುಲಾಬಿ ಚೆಂಡಿನಲ್ಲಿ ಆಡಿದ ಅನುಭವ ಆಟಗಾರರಿಗಿ ರಬೇಕಾಗುತ್ತದೆ. ಆದ್ದರಿಂದ ದುಲೀಪ್ ಟ್ರೋಫಿಯಲ್ಲಿ ಈ ಬಾರಿಯೂ ಗುಲಾಬಿ ಚೆಂಡಿನ ಬಳಕೆ ಮಾಡ ಲಾಗುತ್ತದೆ. ಕಳೆದ ಬಾರಿಯೂ ಈ ಚೆಂಡಿನಲ್ಲಿ ಆಡಿಸಲಾಗಿತ್ತು. ವಿರೋಧಕ್ಕೆ ಕಾರಣಗಳೇನು?
ಬಹಳ ದೀರ್ಘಕಾಲ ಪ್ರವಾಸದಲ್ಲೇ ಇರಬೇಕಾಗುತ್ತದೆ ಎನ್ನುವುದು ಮೊದಲನೇ ಮುಖ್ಯ ಕಾರಣ. ಎರಡೂ ತಂಡಗಳು ತಮ್ಮದಲ್ಲದ ಪ್ರದೇಶದಲ್ಲಿ ಆಡುತ್ತವೆ. ಪಂದ್ಯಕ್ಕೆ ಪ್ರೇಕ್ಷಕರೇ ಇರುವುದಿಲ್ಲ. ಸ್ಥಳೀಯ ಪ್ರೇಕ್ಷಕರ ಬೆಂಬಲದ ಕೊರತೆ ಉಂಟಾಗುವುದು. ಪಂದ್ಯವನ್ನು ನಡೆಸಿಕೊಡಬೇಕಾದ ರಾಜ್ಯ ಸಂಸ್ಥೆಗಳು ಬೇರೆ ರಾಜ್ಯದ ತಂಡಗಳತ್ತ ತೋರಿದ ಅನಾಸಕ್ತಿ. ತಂಡಗಳು ತಮ್ಮದೇ ನೆಲದಲ್ಲಿ ಆಡಬೇಕು ಎಂದು ರಾಜ್ಯ ಸಂಸ್ಥೆಗಳು ಬಯಸಿದ್ದು.