Advertisement

ಬಿಸಿಸಿಐ ನಿರಾಕರಣೆ: ಆಸೀಸ್‌ನಲ್ಲಿ ಹಗಲುರಾತ್ರಿ ಟೆಸ್ಟ್‌ ರದ್ದು

01:35 AM May 10, 2018 | Team Udayavani |

ಸಿಡ್ನಿ: ಭಾರತ ನಿರಾಕರಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾವು ಹಗಲು-ರಾತ್ರಿ ಟೆಸ್ಟ್‌ ಪಂದ್ಯ ಆಯೋಜಿಸುವುದನ್ನು ರದ್ದು 
ಗೊಳಿಸಿದೆ. ಇದರ ಬದಲು ಬೆಳಗ್ಗಿನ ಅವಧಿಯಲ್ಲಿ ಈ ಟೆಸ್ಟ್‌ ನಡೆಸಲಾಗುತ್ತದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಡಿಲೇಡ್‌ನ‌ಲ್ಲಿ ಡಿ.6ರಿಂದ 10ರವರೆಗೆ ನಡೆಯುವ ಟೆಸ್ಟ್‌ ಪಂದ್ಯವನ್ನು ಗುಲಾಬಿ ಚೆಂಡಿನೊಂದಿಗೆ ಆಡಲು
ನಿರ್ಧರಿಸಲಾಗಿತ್ತು. ಈ ಸಂಬಂಧ ಭಾರತೀಯ ಕ್ರಿಕೆಟ್‌ ಮಂಡಳಿಗೆ ಪತ್ರ ಬರೆಯಲಾಗಿತ್ತು. ಆದರೆ ಪ್ರಸ್ತಾ ಪಿತ
ಹಗಲು-ರಾತ್ರಿ ಟೆಸ್ಟ್‌ನಲ್ಲಿ ಆಡಲು ನಾನು ಸಿದ್ಧನಾಗಿಲ್ಲವೆಂದು ತಿಳಿಸಿದ ಬಿಸಿಸಿಐ ಪತ್ರ ಸಿಕ್ಕಿದ ಕಾರಣ ಟೆಸ್ಟ್‌ ಪಂದ್ಯ ವನ್ನು ರದ್ದುಗೊಳಿಸಲಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯಸ್ಥ ಜೇಮ್ಸ್‌ ಸದರ್‌ಲ್ಯಾಂಡ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದಾಗಿ ಈ ಟೆಸ್ಟ್‌ ಪಂದ್ಯವನ್ನು ಹಗಲಿನಲ್ಲಿ ನಡೆಸಲಾಗುವುದನ್ನು ದೃಢಪಡಿಸುತ್ತಿದ್ದೇವೆ ಎಂದವರು ಖಚಿತಪಡಿಸಿದರು.ವಿಶ್ವದ ಎರಡು ಅಗ್ರ ತಂಡಗಳ ನಡುವೆ ಈ ಹೋರಾಟ ನಡೆ ಯುತ್ತಿದೆ. ಹಾಗಾಗಿ ಮೊದಲ ಟೆಸ್ಟ್‌ ಪಂದ್ಯ ವನ್ನುಹಗಲು-ರಾತ್ರಿಯಲ್ಲಿ ನಡೆ ಸಲು ನಮಗೆ ಇಷ್ಟವಿಲ್ಲ ಎಂದು ಬಿಸಿಸಿಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next