Advertisement
ಈಗಿನ ಮಾದರಿ ಪ್ರಕಾರ ಹಲವು ಅಗ್ರ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಆಡುವ ಅವಕಾಶಗಳಿಸುತ್ತಿಲ್ಲ. ಆದ್ದರಿಂದ ಮುಂದಿನ ವರ್ಷದಿಂದ ಪ್ರೀ ಕ್ವಾರ್ಟರ್ ಫೈನಲ್ ಸೇರಿಸುವ ಯೋಚನೆಯನ್ನು ಬಿಸಿಸಿಐ ಹೊಂದಿದೆ ಎಂದು ಮಂಡಳಿ ಮೂಲಗಳು ಹೇಳಿವೆ.
ಪ್ರಸ್ತುತ ಎ ಮತ್ತು ಬಿ ಗುಂಪಿನಲ್ಲಿ ಅಗ್ರ 18 ತಂಡಗಳು ಆಡುತ್ತವೆ. ಸಿ ಗುಂಪಿನಲ್ಲಿ 10, ಪ್ಲೇಟ್ ಗುಂಪಿನಲ್ಲಿ 10 ತಂಡಗಳು ಆಡುತ್ತವೆ. ಸಿ ಮತ್ತು ಪ್ಲೇಟ್ ಅತ್ಯಂತ ದುರ್ಬಲ ತಂಡಗಳಿರುವ ಗುಂಪು. ಎ ಮತ್ತು ಬಿ ಗುಂಪಿನಿಂದ ಅಗ್ರ 5 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತವೆ. ಸಿ ಗುಂಪಿನಿಂದ ಎರಡು, ಪ್ಲೇಟ್ ಗುಂಪಿನಿಂದ ಒಂದು ತಂಡ ಕ್ವಾರ್ಟರ್ ಫೈನಲ್ ತಲಪುತ್ತದೆ.
ಈ ಹಂತದಲ್ಲಿ ಎಲೈಟ್ ಎ ಮತ್ತು ಬಿ ಗುಂಪಿನ ತಂಡಗಳಿಗೆ ನಷ್ಟವಾಗುತ್ತಿದೆ. ಅತ್ಯಂತ ಬಲಿಷ್ಠ ತಂಡಗಳಿರುವ ಈ ಗುಂಪಿನಲ್ಲಿ ಪೈಪೋಟಿ ಜಾಸ್ತಿ. ಸಿ ಮತ್ತು ಬಿ ಗುಂಪು ಮೂಲತಃ ದುರ್ಬಲ ತಂಡಗಳಿರುವ ಗುಂಪು. ಇಲ್ಲಿಂದ ಮೇಲೇರುವ ತಂಡಗಳೂ ದುರ್ಬಲವಾಗಿಯೇ ಇರುತ್ತವೆ. ಆಗ ನಾಕೌಟ್ ಸುತ್ತಿನಲ್ಲಿ ದುರ್ಬಲ ತಂಡಗಳು ಇರುತ್ತವೆ. ಪ್ರಬಲ ತಂಡಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ, ನಾಕೌಟ್‌ನಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್ ಪಂದ್ಯವಾಡಿಸದೆ, ಪ್ರೀ ಕ್ವಾರ್ಟರ್ ಫೈನಲ್ ಸೇರಿಸುವುದು ಬಿಸಿಸಿಐ ಯೋಚನೆ. ಆಗ ಎ ಮತ್ತು ಬಿ ವಿಭಾಗದಿಂದ ಇನ್ನಷ್ಟು ತಂಡಗಳು ನಾಕೌಟ್‌ನಲ್ಲಿ ಆಡಬಹುದು ಎಂಬ ಯೋಚನೆ ಬಿಸಿಸಿಐನದ್ದು.
Related Articles
ರಣಜಿ ಪಂದ್ಯದಲ್ಲಿ ಅಂಪಾಯರಿಂಗ್ ಗುಣಮಟ್ಟ ಬಹಳ ಕಳಪೆ ಎಂಬ ಆರೋಪಗಳು ಜೋರಾಗಿವೆ. ಆದ್ದರಿಂದ ಈ ಬಾರಿ ಅಲ್ಲಿ ಡಿಆರ್‌ಎಸ್ ಅಳವಡಿಸುವ ಬಗ್ಗೆ ಚಿಂತಿಸಲಾಗಿತ್ತು. ಕಡೆಗೆ ಅದನ್ನು ಕ್ವಾರ್ಟರ್ ಫೈನಲ್‌ನಿಂದ ಅಳವಡಿಸುವ ಯೋಚನೆ ಬಂತು. ಆದರೆ ಜಮ್ಮು ಕಾಶ್ಮೀರದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ತಾಂತ್ರಿಕ ಕಾರಣಗಳಿಗಾಗಿ ಡಿಆರ್‌ಎಸ್ ಅಳವಡಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಎಲ್ಲ ಪಂದ್ಯಗಳಿಂದಲೂ ಇದನ್ನು ಹಿಂತೆಗೆಯಲಾಗಿತ್ತು. ಇದೀಗ ಸೆಮಿಫೈನಲ್‌ಗೆ
ಡಿಆರ್‌ಎಎಸ್ ಅಳವಡಿಸುವ ನಿರ್ಧಾರವಾಗಿದೆ.
Advertisement
ಆದರೆ ಇಲ್ಲೊಂದು ಮುಖ್ಯ ತಕರಾರಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಡಿಆರ್‌ಎಸ್ ವೇಳೆ ಬಳಸುವ “ಹಾಕ್-ಐ’ ಹಾಗೂ “ಅಲ್ಟ್ರಾ ಎಡ್ಜ್’ ತಂತ್ರಜ್ಞಾನ ಇಲ್ಲಿರುವುದಿಲ್ಲ. ಆದ್ದರಿಂದ ಇಲ್ಲಿನ ಡಿಆರ್‌ಎಸ್ ತೀರ್ಪುಗಳು ಎಷ್ಟು ನಿಖರವಾಗಿರುತ್ತವೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.