ನವದೆಹಲಿ: ಬಿಸಿಸಿಐನ ನೂತನ ಗುತ್ತಿಗೆ ಪದ್ಧತಿ ಜಾರಿಯಾಗಿದೆ. ಇದುವರೆಗೆ ಎ,ಬಿ,ಸಿ ದರ್ಜೆ ಹೊಂದಿದ್ದ ಗುತ್ತಿಗೆ ವ್ಯವಸ್ಥೆಗೆ ಈಗ ಎ ಪ್ಲಸ್ ಎಂಬ ಇನ್ನೊಂದು ಗುಂಪು ಸೇರ್ಪಡೆಯಾಗಿದೆ. ಕೊಹ್ಲಿ, ರೋಹಿತ್‌ರಂತಹ ಮೂರು ಮಾದರಿಯಲ್ಲಿ ಆಡುವ ಪ್ರಮುಖ ಕ್ರಿಕೆಟಿಗರು ಎ ಪ್ಲಸ್ ದರ್ಜೆಯಲ್ಲಿ ಬಂದರೆ, ಎಲ್ಲ ಮಾದರಿಯಲ್ಲಿ ಆಡದ ಆದರೆ ಅತ್ಯಂತ ಮಹತ್ವ ಹೊಂದಿರುವ ಧೋನಿ, ಅಶ್ವಿನ್‌ರಂತಹ ಆಟಗಾರರು ಎ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಇದೇ ಮೊದಲ ಬಾರಿಗೆ ಧೋನಿ ಅಗ್ರ ಗುತ್ತಿಗೆಯಿಂದ ಕೆಳಗಿಳಿದಿದ್ದಾರೆ.
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ವೇಗಿ ಮೊಹಮ್ಮದ್ ಶಮಿ ಈ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಅವರ ವಿರುದ್ಧ ಪತ್ನಿ ಗೃಹಹಿಂಸೆ ದೂರು ನೀಡಿರುವುದರಿಂದ ಬಿಸಿಸಿಐ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಮತ್ತೂಂದು ಕಡೆ ಯುವರಾಜ್ ಸಿಂಗ್, ರಿಷಭ್ ಪಂತ್ ಪಟ್ಟಿಯಿಂದ ಹೊರಬಿದ್ದಿದ್ದಾರೆ. ರಾಜ್ಯದ ಕೆ.ಎಲ್.ರಾಹುಲ್ ಬಿ ಹಾಗೂ ಮನೀಶ್ ಪಾಂಡೆ ಸಿ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ.
ರಣಜಿ ಕ್ರಿಕೆಟಿಗರಿಗೆ ವೇತನ ಏರಿಕೆ: ಬಹುದೀರ್ಘ ಕಾಲದಿಂದ ರಣಜಿ ಕ್ರಿಕೆಟಿಗರಿಗೆ ವೇತನ ಏರಿಕೆ ಮಾಡಬೇಕೆಂಬ ಬೇಡಿಕೆ ಈಡೇರಿದೆ. ಅವರು ಇನ್ನು ಮುಂದೆ ಪಂದ್ಯವೊಂದಕ್ಕೆ 1.40 ಲಕ್ಷ ರೂ. (ಹಿಂದೆ 1 ಲಕ್ಷ ರೂ.) ಪಡೆಯಲಿದ್ದಾರೆ.
ಎ ಪ್ಲಸ್ ದರ್ಜೆಯಲ್ಲಿ ಈಗ 5 ಮಂದಿ ಸ್ಥಾನ ಪಡೆದಿದ್ದು ಅವರು ವರ್ಷಕ್ಕೆ 7 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಉಳಿದಂತೆ ಎ, ಬಿ, ಸಿ ದರ್ಜೆಯಲ್ಲಿ ತಲಾ 7 ಮಂದಿ ಸ್ಥಾನ ಪಡೆದಿದ್ದು ಕ್ರಮವಾಗಿ 5, 3, 1 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.
ಎ ಪ್ಲಸ್ ದರ್ಜೆ: ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜಸಿøàತ್ ಬುಮ್ರಾ.
ಎ ದರ್ಜೆ: ಆರ್.ಅಶ್ವಿನ್, ರವೀಂದ್ರ ಜಡೇಜ, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್ ಧೋನಿ, ವೃದ್ಧಿಮಾನ್ ಸಹಾ.
ಬಿ ದರ್ಜೆ: ಕೆ.ಎಲ್.ರಾಹುಲ್, ಉಮೇಶ್ ಯಾದವ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮ, ದಿನೇಶ್ ಕಾರ್ತಿಕ್.
ಸಿ ದರ್ಜೆ: ಕೇದಾರ್ ಜಾಧವ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಜಯಂತ್ ಯಾದವ್.