Advertisement

ಐಪಿಎಲ್ ಹೊಗಳುವ ಭರದಲ್ಲಿ ಬಿಸಿಸಿಐನಿಂದ ಸೈಯದ್‌ ಮುಷ್ತಾಕ್‌ಗೆ ಅವಮಾನ: ಕಿಡಿಕಾರಿದ ಗಾವಸ್ಕಾರ್

10:08 AM Mar 22, 2020 | keerthan |

ಹೊಸದಿಲ್ಲಿ: ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟಕ್ಕೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಪದಾಧಿಕಾರಿ ಅವಮಾನ ಮಾಡಿದ್ದಾರೆ ಎಂದು ಸುನೀಲ್‌ಗಾವಸ್ಕರ್‌ ಕಿಡಿಕಾರಿದ್ದಾರೆ.

Advertisement

“ಐಪಿಎಲ್‌ ಕೂಟದ ವಿಷಯದ ಕುರಿತು ಬಿಸಿಸಿಐ ಪದಾಧಿಕಾರಿ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ವಿದೇಶಿ ಆಟಗಾರರಿಲ್ಲದೆ ಐಪಿಎಲ್‌ ನಡೆಸಲು ಆಗುವುದಿಲ್ಲ ಎನ್ನುವ ಮಾತಿನ ಭರದಲ್ಲಿ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕೂಟಕ್ಕೆ ಅವಮಾನ ಮಾಡಿದ್ದಾರೆ.

ಐಪಿಎಲ್‌ ಅನ್ನು ಸೈಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಂತೆ ನಡೆಸಲು ಆಗುವುದಿಲ್ಲ. ವಿದೇಶಿಗರಿಲ್ಲದೆ ಕೂಟವನ್ನು ನಡೆಸುವುದು ಅಸಾಧ್ಯವಾಗುತ್ತದೆ, ಆಟದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿರುವುದು ನಿಜವಾಗಿಯೂ ದುರದೃಷ್ಟಕರ. ಸೈಯದ್‌ ಮುಷ್ತಾಕ್‌ ಅಲಿಯಂತಹ ಒಬ್ಬ ದಿಗ್ಗಜನಿಗೆ ಮಾಡಿದ ಅಪಮಾನ ಎನ್ನುವುದನ್ನು ಮೊದಲನೆಯದಾಗಿ ಹೇಳಲು ಇಷ್ಟಪಡುತ್ತೇನೆ. ಎರಡನೆಯದಾಗಿ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕೂಟ ಅಷ್ಟೊಂದು ಕಳಪೆಯಾಗಿ ನಡೆಯುತ್ತಿದೆಯೆ? ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಬರೆದ ಅಂಕಣವೊಂದರಲ್ಲಿ ಸುನಿಲ್‌ ಗಾವಸ್ಕರ್‌ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಐಪಿಎಲ್‌ ಮಾ.29ಕ್ಕೆ ಆರಂಭವಾಗಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಕೂಟವನ್ನು ಏ.15ರ ತನಕ ಮುಂದೂಡಲಾಗಿದೆ. ಆನಂತರವೂ ಐಪಿಎಲ್‌ ನಡೆಯುವುದು ಅನುಮಾನ, ಜತೆಗೆ ವಿದೇಶಿ ಕ್ರಿಕೆಟಿಗರಿಗ ಪ್ರಯಾಣದ ಕಡಿವಾಣ ಇರುವುದರಿಂದ ಕೂಟಕ್ಕೆ ಆಗಮಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲ ಐಪಿಎಲ್‌ ಅನ್ನು ಅನಿಶ್ಚಿತತೆಯಲ್ಲಿ ಇಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next