Advertisement
8 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಈ ಎರಡು ಹೊಸ ತಂಡಗಳಿಗೆ ಲಭಿಸಲಿದೆ. ಅದರಂತೆ ಇದೀಗ ರಿಲೀಸ್ ಆಗಿರುವ ಯಾವುದೇ ಆಟಗಾರರನ್ನು ಬೇಕಿದ್ದರೂ ಹೊಸ ಫ್ರಾಂಚೈಸಿಗಳು ನೇರವಾಗಿ ಸಂಪರ್ಕಿಸಬಹುದು. ಆ ಮೂಲಕ ಮೆಗಾ ಹರಾಜಿಗಿಂತ ಮೊದಲೇ ಒಪ್ಪಂದ ಮಾಡಿಕೊಳ್ಳಬಹುದು.
ಆದರೆ ಇಲ್ಲೂ ಕೂಡ ಕೆಲ ನಿಯಮಗಳು ಅನ್ವಯವಾಗಲಿದೆ. ಈ ಬಾರಿಯ ಮೆಗಾ ಹರಾಜು ಮೊತ್ತವನ್ನು 90 ಕೋಟಿ ಎಂದು ನಿಗದಿಪಡಿಸಲಾಗಿದೆ. ಇದೀಗ ಹೊಸ ಫ್ರಾಂಚೈಸಿಗಳ ವಿಶೇಷ ಆಯ್ಕೆಗೂ ಮೊತ್ತ ನಿಗದಿ ಮಾಡಲಾಗಿದೆ.
ಹೊಸ ಫ್ರಾಂಚೈಸಿಗಳು 33 ಕೋಟಿ ರೂ. ಮೊತ್ತದಲ್ಲಿ ಮೂವರು ಆಟಗಾರರನ್ನು ಆಯ್ಕೆ ಮಾಡಬಹುದು. ಈ ಮೂಲಕ ಇಬ್ಬರು ಭಾರತೀಯ ಆಟಗಾರರು ಪ್ಲಸ್ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಫ್ರಾಂಚೈಸಿ ಗಳು ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 7 ಕೋಟಿ ವ್ಯಯಿ ಸಬೇಕಾಗುತ್ತದೆ. ಜನವರಿ 31 ರೊಳಗೆ ಮೂವರು ಆಟಗಾರರನ್ನು ಆಯ್ಕೆ ಮಾಡಬೇಕೆಂದು ಬಿಸಿಸಿಐ ತಿಳಿಸಿದೆ. ಬಳಿಕ “ಸ್ಪೆಷಲ್ ಪಿಕ್’ ಅವಕಾಶ ಹೊಸ ಫ್ರಾಂಚೈಸಿಗಳಿಗೆ ಇರುವುದಿಲ್ಲ. ಇದನ್ನೂ ಓದಿ:ಟೆನಿಸ್: ಪ್ರಶಸ್ತಿ ಸುತ್ತಿಗೇರಿದ ಬೋಪಣ್ಣ-ರಾಮ್‌ಕುಮಾರ್
Related Articles
Advertisement
ಹೊಸ ಫ್ರಾಂಚೈಸಿಗಳಿಗೆ ಬಂಪರ್!ಈ ವಿಶೇಷ ಆಯ್ಕೆ ಇದೀಗ ಹೊಸ ಫ್ರಾಂಚೈಸಿಗಳಿಗೆ ಬಂಪರ್ ಆಗಿ ಪರಿಣಮಿಸಲಿದೆ. ಏಕೆಂದರೆ, ಹರಾಜು ಪಟ್ಟಿಯಲ್ಲಿ ಸ್ಟಾರ್ ಆಟಗಾರರೇ ತುಂಬಿದ್ದಾರೆ. ಅವರಲ್ಲಿ ಮೂವರು ಆಟಗಾರರನ್ನು ಒಪ್ಪಿಸಿ ತಂಡಕ್ಕೆ ಸೇರಿಸಿಕೊಳ್ಳ ಬಹುದು. ಇದರಿಂದ ಮೆಗಾ ಹರಾಜು ಪಟ್ಟಿಯಲ್ಲಿ 6 ಪ್ರಮುಖ ಆಟಗಾರರು ಲಕ್ನೋ ಹಾಗೂ ಅಹ್ಮದಾಬಾದ್ ತಂಡಗಳ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ! -ಹಳೆಯ ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಮೂವರು ಕ್ರಿಕೆಟಿಗರ ನೇರ ಆಯ್ಕೆ
-ಜ. 31 ಅಂತಿಮ ಗಡುವು