Advertisement

ಕೋವಿಡ್ 19 ಜಾಗೃತಿಗೆ ಬಿಸಿಸಿಐ ಸಂದೇಶ

12:20 AM Apr 20, 2020 | Sriram |

ಹೊಸದಿಲ್ಲಿ: ಕೋವಿಡ್ 19 ವೈರಸ್‌ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಾಕಷ್ಟು ಪರಿಶ್ರಮ ಪಡುತ್ತಿವೆ. ಇದಕ್ಕೆ ಬೆಂಬಲವಾಗಿ ಹಾಗೂ ಜನತೆಗೆ ಮಹಾಮಾರಿ ವೈರಸ್‌ ಕುರಿತು ಜಾಗೃತಿ ಮೂಡಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) “ಟೀಮ್‌ ಮಾಸ್ಕ್ ಫೋರ್ಸ್‌’ ಎಂಬ ಅಭಿಯಾನವನ್ನು ಆರಂಭಿಸಿದೆ.

Advertisement

ಕೋವಿಡ್‌-19 ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವಂತೆ ಉತ್ತೇಜಿಸಲು ಬಿಸಿಸಿಐ, ಸಚಿನ್‌ ತೆಂಡುಲ್ಕರ್‌ ಹಾಗೂ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರಿಂದ ವೀಡಿಯೋ ಮಾಡಿಸಿದೆ. ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಲು ಅವರೆಲ್ಲ ಸಲಹೆ ನೀಡಿದ್ದಾರೆ.

ಟೀಮ… ಇಂಡಿಯಾ ಈಗ ಟೀಮ್‌ ಮಾಸ್ಕ್ ಫೋರ್ಸ್‌, ಇಂಡಿಯಾ ಫೈಟ್‌ ಕೋವಿಡ್ 19 ಜಾಗೃತಿಗೆ ಕೈಜೋಡಿಸಿ. ಆರೋಗ್ಯ ಸಚಿವಾಲಯದ ಆರೋಗ್ಯಸೇತು ಮೊಬೈಲ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ.

ಹೆಮ್ಮೆಯ ವಿಷಯ
ಭಾರತ ತಂಡದ ಭಾಗವಾಗಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಆದರೆ, ಇಂದು ನಾವು ಟೀಮ್‌ ಮಾಸ್ಕ್ ಫೋರ್ಸ್‌ ಎಂಬ ದೊಡ್ಡ ತಂಡವನ್ನು ರಚಿಸಲಿದ್ದೇವೆ, ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವೀಡಿಯೊದಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ದಿನದ ಪ್ರಮುಖ ಕಾರ್ಯಗಳಲ್ಲಿ ಟೀಮ್‌ ಮಾಸ್ಕ್ ಫೋರ್ಸ್‌ ಕೂಡ ಒಂದು ಭಾಗವಾಗಿದೆ. ಅಗತ್ಯವಾದ ಮುನ್ನೆಚ್ಚರಿಕೆಗಳಿಂದ ನಾವು ಸುರಕ್ಷಿತವಾಗಿರಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಎಂದು ಟ್ವೀಟ್‌ ಮಾಡಿದ್ದಾರೆ.
ಈ ಅಭಿಯಾನದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸ್ಮತಿ ಮಂಧಾನ, ರೋಹಿತ್‌ ಶರ್ಮ, ಹರ್ಭಜನ್‌ ಸಿಂಗ್‌, ಹರ್ಮನ್‌ಪ್ರೀತ್‌ ಕೌರ್‌, ವೀರೇಂದ್ರ ಸೆಹವಾಗ್‌, ರಾಹುಲ್‌ ದ್ರಾವಿಡ್‌ ಮತ್ತು ಮಿಥಾಲಿ ರಾಜ್‌ ಮತ್ತಿತರರು ಮಾಸ್ಕ್ಗಳನ್ನು ಧರಿಸುವ ಪ್ರಾಮುಖ್ಯತೆ ಮತ್ತು ಸರಕಾರದ ನಿರ್ದೇಶನಗಳನ್ನು ಅನುಸರಿಸುವಂತೆ ಜನತೆಗೆ ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next