Advertisement

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

04:04 PM Jul 21, 2024 | Team Udayavani |

ಮುಂಬೈ: ಟೀಂ ಇಂಡಿಯಾದ ಮುಂದಿನ ನಾಯಕ ಎಂದೇ ಬಿಂಬಿಸಲಾಗಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಅವರ ಕನಸು ನುಚ್ಚುನೂರಾಗಿದೆ. ರೋಹಿತ್ ಶರ್ಮಾ (Rohit Sharma) ಅವರು ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಹಾರ್ದಿಕ್ ಅವರನ್ನೇ ಚುಟುಕು ಮಾದರಿ ಕ್ರಿಕೆಟ್ ತಂಡದ ನಾಯಕರನ್ನಾಗಿ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಪ್ರಕಟಿಸಲಾದ ಲಂಕಾ ಪ್ರವಾಸದ ತಂಡದಲ್ಲಿ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ಯಾದವ್ (Surya Kumar Yadav) ಅವರಿಗೆ ನಾಯಕತ್ವ ನೀಡಲಾಗಿದೆ.

Advertisement

ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕ ಸೂರ್ಯಕುಮಾರ್ ಅವರಿಗೆ ಉಪನಾಯಕರಾಗಿ ಶುಭ್ಮನ್ ಗಿಲ್ ಅವರನ್ನು ನೇಮಿಸಲಾಗಿದೆ. ಹೊಸ ಕೋಚ್ ಆಗಿ ನೇಮಕವಾದ ಗೌತಮ್ ಗಂಭೀರ್ ಅವರ ಕಾರಣದಿಂದ ಪಾಂಡ್ಯ ನಾಯಕತ್ವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಆದರೆ ಟಿ20 ತಂಡದ ನಾಯಕತ್ವ ಬದಲಾವಣೆಯಲ್ಲಿ ಗೌತಮ್ ಗಂಭೀರ್ ಮಾತ್ರವಲ್ಲದೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಪಾತ್ರವೂ ಇದೆ ಎಂದು ಪಿಟಿಐ ವರದಿ ಮಾಡಿದೆ.

ಮುಖ್ಯ ಆಯ್ಕೆಗಾರ ಅಗರ್ಕರ್ ಅವರು ಹಾರ್ದಿಕ್ ಅವರ ಪಂದ್ಯ ತಂತ್ರದ ಅರಿವಿನ ಬಗ್ಗೆ ಸಂತಸಗೊಂಡಿಲ್ಲ. ಅಂತಾರಾಷ್ಟ್ರೀಯ ನಾಯಕನಿಗೆ ಇರಬೇಕಾದಷ್ಟು ತಂತ್ರಗಾರಿಕೆಯ ಸಮರ್ಥತೆ ಪಾಂಡ್ಯಗಿಲ್ಲ ಎಂದು ಅಜಿತ್ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಹೇಳಿದೆ.

Advertisement

ಮುಂದಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಜೀವನ ಸುಲಲಿತವಾಗಿ ಇರುವುದಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಂಡ್ಯ ಬಯಸಿದರೆ, ಅವರು ಬರೋಡಾ ತಂಡದ ಪರವಾಗಿ ವಿಜಯ್ ಹಜಾರೆ ಟ್ರೋಫಿಯನ್ನು ಡಿಸೆಂಬರ್‌ ನಲ್ಲಿ ಆಡಬೇಕಾಗುತ್ತದೆ. ಅಲ್ಲಿ ಬೌಲಿಂಗ್ ಮಾಡಿ ತನ್ನ ಫಿಟ್ನೆಸ್ ಸಾಬೀತು ಪಡಿಸಬೇಕಿದೆ ಎಂದು ಸೂಚಿಸಲಾಗಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next