Advertisement
ಬಿಸಿಸಿಐನ ಯಾವುದೇ ಹುದ್ದೆ ಯಲ್ಲಿರುವ ವ್ಯಕ್ತಿ, ಈ ಹುದ್ದೆಯ ಮೇಲೆ ಪ್ರಭಾವ ಬೀರುವಂತಹ ಇನ್ನೊಂದು ಹುದ್ದೆಯಲ್ಲಿರಬಾರದು. ಇದ್ದರೆ ಅದನ್ನು ಸ್ವಹಿತಾಸಕ್ತಿ ಎಂದು ಪರಿಗಣಿ ಸಲಾಗುತ್ತದೆ. ಸದ್ಯ ದ್ರಾವಿಡ್ ಎನ್‌ಸಿಎ ಮುಖ್ಯಸ್ಥರಾಗಿರುವುದರ ಜತೆಗೆ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ಮಾಲಕ ಸಂಸ್ಥೆಯಾಗಿರುವ “ಇಂಡಿಯಾ ಸಿಮೆಂಟ್ಸ್ ಕಂಪೆನಿ’ಯ ಉಪಾ ಧ್ಯಕ್ಷರೂ ಆಗಿದ್ದಾರೆ. ಇದು ಸ್ವಹಿತಾಸಕ್ತಿ ಎಂಬ ಆರೋಪ ಕೇಳಿಬಂದಿ ರುವುದರಿಂದ ದ್ರಾವಿಡ್ ಈ ಬಗ್ಗೆ ತಮ್ಮ ನಿಲುವನ್ನು ವಿವರಿಸಲಿದ್ದಾರೆ.
ಸದ್ಯ ದ್ರಾವಿಡ್ ಹುದ್ದೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಬದಲಿಗೆ ಸಂಬಳರಹಿತ ರಜೆ ಮೇಲಿದ್ದಾರೆ. ಆದ್ದರಿಂದ ಸ್ವಹಿತಾಸಕ್ತಿ ಸಮಸ್ಯೆ ಬಾಧಿಸು ವುದಿಲ್ಲ ಎನ್ನುವುದು ದ್ರಾವಿಡ್ ಮತ್ತು ಆಡಳಿತಾಧಿಕಾರಿಗಳ ವಾದ. ಇದನ್ನು ವಿರೋಧಿಸಿರುವ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯ ಸಂಜೀವ್ ಗುಪ್ತಾ, ಬಿಸಿಸಿಐ ವಿಚಾರಣಾಧಿಕಾರಿ ಡಿ.ಕೆ. ಜೈನ್‌ಗೆ ದೂರು ಸಲ್ಲಿಸಿದ್ದರು. ಆದ್ದರಿಂದ ದ್ರಾವಿಡ್ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ದ್ರಾವಿಡ್ ಮೇಲೆ ದಾಖಲಾಗಿರುವ ಈ ಪ್ರಕರಣದ ವಿರುದ್ಧ ಹಿರಿಯ ಕ್ರಿಕೆಟಿಗರಾದ ಸೌರವ್ ಗಂಗೂಲಿ, ಹರ್ಭಜನ್ ಸಿಂಗ್ ಧ್ವನಿ ಎತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.