Advertisement
ಕೊರೊನಾ ಲಸಿಕೆಯನ್ನು ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲಿರುವ ಎಲ್ಲ ಆಟಗಾರರಿಗೆ, ಅಧಿಕಾರಿಗಳಿಗೆ ಹಾಗೂ ಸಹಾಯಕ ಸಿಬಂದಿಗೆ ನೀಡುವ ಯೋಜನೆ ಇದೆ ಎಂದು ಧುಮಾಲ್ ತಿಳಿಸಿದರು.
ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ಮಾರ್ಚ್ ನಲ್ಲಿ ಲಸಿಕೆ ನೀಡಲು ಈಗಾಗಲೇ ಯೋಜನೆ ರೂಪಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಈ ಸಂಬಂಧ ಈಗಾಗಲೇ ಸೂಚನೆ ನೀಡಿದ್ದು, ಭಾರತೀಯ ಒಲಿಂಪಿಕ್ ಸಮಿತಿ (ಐಒಎ) ಕೂಡ ಕೇಂದ್ರ ಸರಕಾರದ ಜತೆಗೆ ಮಾತುಕತೆ ನಡೆಸುತ್ತಿದೆ. ಕ್ರೀಡಾಪಟುಗಳು ಲಸಿಕೆ ತೆಗೆದು ಕೊಳ್ಳುವುದು ಕಡ್ಡಾಯವಲ್ಲದಿದ್ದರೂ ಅವರು ಲಸಿಕೆಯ 2 ಡೋಸ್ ತೆಗೆದು ಕೊಳ್ಳುವಂತೆ ಮನ ಒಲಿಸುವ ಪ್ರಯತ್ನ ನಡೆಸಲಾಗುವುದು ಎಂದರು.
Related Articles
Advertisement
ಪ್ರೇಕ್ಷಕರಿಗೆ ಅವಕಾಶಸದ್ಯ ದೇಶದಲ್ಲಿನ ಕೊರೊನಾ ಸೋಂಕಿನ ಪ್ರಮಾಣವನ್ನು ನಿಕಟವಾಗಿ ಅವಲೋಕಿಸುತ್ತಿದ್ದು, ಶೀಘ್ರದಲ್ಲಿಯೇ ದೇಶದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಪ್ರೇಕ್ಷರೀಗೆ ಅವಕಾಶ ನೀಡುವ ಕುರಿತು ರಾಜ್ಯ ಮತ್ತು ಕೇಂದ್ರ ಸರಕಾರದ ಸಲಹೆ ಸೂಚನೆಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಧುಮಾಲ್ ತಿಳಿಸಿದ್ದಾರೆ.