ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) 2017-18ರ ಸಾಲಿನ “ಬೆಸ್ಟ್ ಪಿಚ್’ ಪ್ರಶಸ್ತಿಯನ್ನು ಬಿಸಿಸಿಐ ಘೋಷಿಸಿದೆ. ಈ ವಿಷಯವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ ಹಾಗೂ 10 ಲಕ್ಷ ರೂ. ನಗದನ್ನು ಒಳಗೊಂಡಿದೆ. ಪಿಚ್ ಕ್ಯುರೇಟರ್ ಹಾಗೂ ಕ್ರೀಡಾಂಗಣ ನಿರ್ವಹಣಾ ಸಿಬಂದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಈ ಪ್ರಶಸ್ತಿ ನೀಡುತ್ತಿದೆ.
ಕ್ಯುರೇಟರ್‌ಗಳಿಗೆ ಅಭಿನಂದನೆ
ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ವಿನಯ್ ಮೃತ್ಯುಂಜಯ, “ಪ್ರಶಸ್ತಿ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಸ್ಪರ್ಧಾತ್ಮಕ ಪಿಚ್ ರೂಪಿಸುವಲ್ಲಿ ನಮ್ಮ ಕ್ಯುರೇಟರ್‌ಗಳಾದ ಶ್ರೀರಾಮ್ ಹಾಗೂ ಪ್ರಶಾಂತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರ ಕೆಲಸವನ್ನು ಕೆಎಸ್‌ಸಿಎ ಅಭಿನಂದಿಸುತ್ತದೆ’ ಎಂದಿದ್ದಾರೆ.