ಮುಂಬಯಿ: ಬಿಸಿಸಿಐ ಸರ್ವಸದಸ್ಯರ ವಾರ್ಷಿಕ ಸಭೆ ಅ. 18ರಂದು ಮುಂಬಯಿಲ್ಲಿ ನಡೆಯಲಿದೆ.
ಕಾರ್ಯದರ್ಶಿ ಜಯ್ ಶಾ ಈ ಕುರಿತು ಸಂಬಂಧಪಟ್ಟ ಎಲ್ಲರಿಗೂ ನೊಟೀಸ್ ಕಳುಹಿಸಿದ್ದಾರೆ. ಹೀಗಾಗಿ ಮಹತ್ವದ ಚುನಾವಣೆಯೂ ನಡೆಯಲಿದೆ.
ಇದರಿಂದ ಸೌರವ್ ಗಂಗೂಲಿ ಅಧ್ಯಕ್ಷರಾಗಿ, ಜಯ್ ಶಾ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗುವುದಕ್ಕೆ ಮುಹೂರ್ತವೂ ನಿಗದಿಯಾಗಿದೆ.
ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಲಿವೆ. ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಅದಕ್ಕೆ ತೆರಿಗೆ ವಿನಾಯಿತಿ ಪಡೆದುಕೊಳ್ಳಿ ಎಂದು ಐಸಿಸಿ, ಬಿಸಿಸಿಐಗೆ ಮನವಿ ಮಾಡಿದೆ.
ಇದನ್ನೂ ಚರ್ಚಿಸಲಾಗುತ್ತದೆ. 2016ರ ಟಿ20 ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ಸಿಕ್ಕಿರಲಿಲ್ಲ. ಆಗ ಐಸಿಸಿ ಬಿಸಿಸಿಐಗೆ ಅಂದಾಜು 200 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ನೀಡಿರಲಿಲ್ಲ.
2021ರ ಟಿ20 ವಿಶ್ವಕಪ್ ತೆರಿಗೆ ಪಡೆಯಿರಿ ಎಂದು ಐಸಿಸಿ ಸೂಚಿಸಿತ್ತು. ಕೊರೊನಾ ಕಾರಣದಿಂದ ಕೂಟವನ್ನೇ ಬಿಸಿಸಿಐ ಯುಎಇಗೆ ಸ್ಥಳಾಂತರಿಸಿತ್ತು. ಈ ಕಾರಣದಿಂದ ತೆರಿಗೆ ತಲೆಬಿಸಿ ತಪ್ಪಿತ್ತು. ಮುಂದಿನ ಬಾರಿ ಹಾಗಾಗಲಿಕ್ಕಿಲ್ಲ. ಒಂದು ವೇಳೆ ತೆರಿಗೆ ವಿನಾಯಿತಿ ಸಿಗದಿದ್ದರೆ, ಐಸಿಸಿ ಕಠಿನ ಕ್ರಮ ತೆಗೆದುಕೊಳ್ಳಬಹುದು.