Advertisement

ಆಸ್ಟ್ರೇಲಿಯ,ನ್ಯೂಜಿಲ್ಯಾಂಡ್‌ ಸರಣಿ ಕ್ರಿಕೆಟ್‌ ವೇಳಾಪಟ್ಟಿ ಅಂತಿಮ

06:40 AM Sep 09, 2017 | |

ಹೊಸದಿಲ್ಲಿ: ಭಾರತ ತನ್ನ 2017-18ರ ಋತುವಿನ ತವರಿನ ಕ್ರಿಕೆಟ್‌ ಸರಣಿಯನ್ನು ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯೊಂದಿಗೆ ಆರಂಭಿಸಲಿದೆ. ಬಳಿಕ ನ್ಯೂಜಿಲ್ಯಾಂಡ್‌ ತಂಡದ ಆಗಮನವಾಗಲಿದೆ. ಈ 2 ಸರಣಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ.

Advertisement

ಆಸ್ಟ್ರೇಲಿಯ ವಿರುದ್ಧ 5 ಏಕದಿನ ಹಾಗೂ 3 ಟಿ-20 ಪಂದ್ಯ ನಡೆದರೆ, ನ್ಯೂಜಿಲ್ಯಾಂಡ್‌ ವಿರುದ್ಧ ತಲಾ 3 ಏಕದಿನ ಹಾಗೂ ಟಿ-20 ಪಂದ್ಯಗಳನ್ನು ಆಡಲಾಗುವುದು. ಎರಡೂ ಸರಣಿಗೂ ಮುನ್ನ ಪ್ರವಾಸಿ ತಂಡಗಳಿಗೆ ಅಭ್ಯಾಸ ಪಂದ್ಯಗಳನ್ನೂ ವ್ಯವಸ್ಥೆ ಮಾಡಲಾಗಿದೆ.

ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಗಾಗಿ ಬಿಸಿಸಿಐ ಕಳೆದ ಆಗಸ್ಟ್‌ನಲ್ಲೇ ಪಂದ್ಯದ ತಾಣಗಳನ್ನು ಪ್ರಕಟಿಸಿತ್ತು. ಆದರೆ ಇದನ್ನು ಆಧಿಕೃತವಾಗಿ ಅಂತಿಮಗೊಳಿಸಿರಲಿಲ್ಲ. ಆಸೀಸ್‌ ಸರಣಿಯ ತಾಣಗಳಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಆದರೆ ನ್ಯೂಜಿಲ್ಯಾಂಡ್‌ ಎದುರಿನ ಒಂದು ಏಕದಿನ ಹಾಗೂ ಟಿ-20 ಪಂದ್ಯದ ಆತಿಥ್ಯವನ್ನು ಕಾನ್ಪುರದ “ಗ್ರೀನ್‌ಪಾರ್ಕ್‌ ಸ್ಟೇಡಿಯಂ’ ಮತ್ತು ಕಟಕ್‌ ಬದಲು ಯುಪಿಸಿಎ ಸ್ಟೇಡಿಯಂ ಹಾಗೂ ತಿರುವನಂತಪುರಕ್ಕೆ ವಹಿಸಲಾಗಿದೆ.

ಆಸ್ಟ್ರೇಲಿಯ ವಿರುದ್ಧದ ಏಕದಿನ ಪಂದ್ಯಗಳು ಕ್ರಮವಾಗಿ ಚೆನ್ನೈ (ಸೆ. 17), ಕೋಲ್ಕತಾ (ಸೆ. 21), ಇಂದೋರ್‌ (ಸೆ. 24), ಬೆಂಗಳೂರು (ಸೆ. 28) ಮತ್ತು ನಾಗ್ಪುರದಲ್ಲಿ (ಅ. 1) ನಡೆಯಲಿವೆ. ಟಿ-20 ಪಂದ್ಯಗಳ ತಾಣ ರಾಂಚಿ (ಅ. 7), ಗುವಾಹಟಿ (ಅ. 10) ಮತ್ತು ಹೈದರಾಬಾದ್‌ (ಅ. 13).

ನ್ಯೂಜಿಲ್ಯಾಂಡ್‌ ಎದುರಿನ 3 ಏಕದಿನ ಪಂದ್ಯಗಳು ಮುಂಬಯಿ (ಅ. 22), ಪುಣೆ (ಅ. 25) ಮತ್ತು ಕಾನ್ಪುರದಲ್ಲಿ (ಅ. 29); ಟಿ-20 ಪಂದ್ಯಗಳು ಹೊಸದಿಲ್ಲಿ (ನ. 1), ರಾಜ್‌ಕೋಟ್‌ (ನ. 4) ಮತ್ತು ತಿರುವನಂತಪುರದಲ್ಲಿ (ನ. 7) ನಡೆಯಲಿವೆ.

Advertisement

ಸೆ. 10: ಟಿಕೆಟ್‌ ಮಾರಾಟ
ಸೆ. 17ರ ಚೆನ್ನೈ ಏಕದಿನ ಪಂದ್ಯಕ್ಕಾಗಿ ರವಿವಾರ ಸಾರ್ವಜನಿಕರಿಗೆ ಟಿಕೆಟ್‌ ಮಾರಾಟ ವ್ಯವಸ್ಥೆ ಮಾಡಲಾಗುವುದು ಎಂದು ತಮಿಳುನಾಡು ಕ್ರಿಕೆಟ್‌ ಅಸೋಸಿಯೇಶನ್‌ ಪ್ರಕಟಿಸಿದೆ. ಸಾರ್ವಜನಿಕರು ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ವೆಬ್‌ಸೈಟ್‌ ಮೂಲಕವೂ ಟಿಕೆಟ್‌ಗಳನ್ನು ಕಾದಿರಿಸಬಹುದಾಗಿದೆ.ಕನಿಷ್ಠ ಟಿಕೆಟ್‌ ದರ 1,200 ರೂ. ಆಗಿದ್ದು, ಗರಿಷ್ಠ ದರ 12,000 ರೂ. ಎಂದು ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಮಂಡಳಿ ಇಲೆವೆನ್‌ ತಂಡ ಪ್ರಕಟ
ಆಸ್ಟ್ರೇಲಿಯ ವಿರುದ್ದ ಸೆ. 12ರಂದು ನಡೆಯುವ ಏಕದಿನ ಅಭ್ಯಾಸ ಪಂದ್ಯಕ್ಕಾಗಿ ಮಂಡಳಿ ಅಧ್ಯಕ್ಷರ ಬಳಗವನ್ನು ಪ್ರಕಟಿಸಲಾಗಿದೆ. ಕಳೆದ ಋತುವಿನ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಹಾಗೂ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಗಮನ ಸೆಳೆದ ಬಹುತೇಕ ಆಟಗಾರರು ಈ ತಂಡದಲ್ಲಿದ್ದಾರೆ.

ಮಂಡಳಿ ಇಲೆವೆನ್‌ ತಂಡ: ರಾಹುಲ್‌ ತ್ರಿಪಾಠಿ, ಮಾಯಾಂಕ್‌ ಅಗರ್ವಾಲ್‌, ಶಿವಂ ಚೌಧರಿ, ನಿತೀಶ್‌ ರಾಣ, ಗೋವಿಂದ ಪೋದ್ದರ್‌, ಗುರುಕೀರತ್‌ ಸಿಂಗ್‌ ಮಾನ್‌, ಶ್ರೀವತ್ಸ ಗೋಸ್ವಾಮಿ, ಅಕ್ಷಯ್‌ ಕರ್ನೆವಾರ್‌, ಕುಲ್ವಂತ್‌ ಖೆರೋಲಿಯ, ಕೃಶಾಂಗ್‌ ಪಟೇಲ್‌, ಆವೇಶ್‌ ಖಾನ್‌, ಸಂದೀಪ್‌ ಶರ್ಮ, ವಾಷಿಂಗ್ಟನ್‌ ಸುಂದರ್‌, ರಾಹಿಲ್‌ ಷಾ.

Advertisement

Udayavani is now on Telegram. Click here to join our channel and stay updated with the latest news.

Next