Advertisement

ಬಿ.ಸಿ.ರೋಡ್‌ನ‌ ರಂಗಮಂದಿರ ಇನ್ನು ನೆನಪು ಮಾತ್ರ

09:20 PM May 06, 2021 | Team Udayavani |

ಬಂಟ್ವಾಳ: ತಾಲೂಕಿನ ಸಾವಿರಾರು ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ವೇದಿಕೆಯಾಗಿದ್ದ ಬಿ.ಸಿ.ರೋಡ್‌ನ‌ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಸುಮಾರು 4 ದಶಕಗಳಷ್ಟು ಹಳೆಯದಾದ ರಂಗಮಂದಿರ ಇನ್ನು ನೆನಪು ಮಾತ್ರ.

Advertisement

ಕೈಕುಂಜೆ ರಸ್ತೆ ಅಭಿವೃದ್ಧಿಯ ದೃಷ್ಟಿಯಿಂದ ಈ ರಂಗಮಂದಿರವನ್ನು ತೆರವುಗೊಳಿಸುವ ಕಾರ್ಯ ಗುರುವಾರ ಆರಂಭಗೊಂಡಿದೆ.

ಕಳೆದ ಹಲವು ವರ್ಷಗಳಿಂದ ಯಾವುದೇ ಉಪಯೋಗವಿಲ್ಲದೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ತೆರವುಗೊಳಿಸಲು ನಿರ್ಧರಿ ಸಲಾಗಿತ್ತು. 1983ರಲ್ಲಿ ಅಂದಿನ ತಹಶೀ ಲ್ದಾರ್‌ ಆಗಿದ್ದ ಆರ್‌.ಕೆ.ರಾಜು ಅವರ ಅವಧಿಯಲ್ಲಿ ತಾಲೂಕು ಕಚೇರಿಯ ಹಳೆ ಕಟ್ಟಡದ ಮುಂಭಾಗದಲ್ಲಿ ಈ ರಂಗಮಂದಿರ ನಿರ್ಮಾಣಗೊಂಡಿತ್ತು.

ಈ ರೀತಿ ನಿರ್ಮಾಣಗೊಂಡಿದ್ದ ರಂಗ ಮಂದಿರಕ್ಕೆ ಶೌಚಾಲಯ ಸೇರಿದಂತೆ ಹಲವಾರು ಮೂಲಸೌಕರ್ಯಗಳ ಬೇಡಿಕೆಯ ಮಧ್ಯೆಯೇ ಇಲ್ಲಿ ಸಾವಿ ರಾರು ಕಾರ್ಯಕ್ರಮಗಳು ನಡೆದು ಹೋಗಿತ್ತು. ಪ್ರಸ್ತುತ ರಂಗಮಂದಿರ ತೆರವು ಗೊಳ್ಳುವವರೆಗೂ ರಂಗಮಂದಿರದ ಮೂಲ ಸೌಕರ್ಯದ ಬೇಡಿಕೆ ಈಡೇರಲೇ ಇಲ್ಲ.

ಇಂತಹ ಇಲ್ಲಗಳ ಮಧ್ಯೆಯೇ ನಾಟಕ, ನೃತ್ಯ, ಸಂಗೀತ, ಯಕ್ಷಗಾನ, ವಾರ್ಷಿಕೋತ್ಸವ, ರಾಜಕೀಯ ಸಭೆ ಮೊದಲಾದ ಸಾವಿರಾರು ಕಾರ್ಯಕ್ರಮಗಳು ನಡೆದಿವೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದೆ ತೀರಾ ಹಳೆಯ ಕಟ್ಟಡದಂತೆ ಕಾಣುತ್ತಿತ್ತು.

Advertisement

ಈ ರಂಗಮಂದಿರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿಂತ ಬಳಿಕ ಬಂಟ್ವಾಳಕ್ಕೆ ರಂಗಮಂದಿರವೊಂದು ಬೇಕು ಎಂಬ ಬೇಡಿಕೆ ಕೇಳಿಬರುತ್ತಿತ್ತು. ಹಿಂದೊಮ್ಮೆ ಬಿ.ಸಿ.ರೋಡ್‌ನ‌ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ರಂಗಮಂದಿರ ನಿರ್ಮಾಣದ ಮಾತುಗಳು ಕೇಳಿಬಂದಿದ್ದು, ಆದರೆ ಅದು ನಿರ್ಮಾಣಗೊಂಡಿಲ್ಲ.ರಂಗಮಂದಿರವು ರಸ್ತೆಗೆ ತಾಗಿಕೊಂಡಿರುವುದರಿಂದ ಪ್ರಸ್ತುತ ಕಾಮಗಾರಿ ಮುಂದುವರಿಯಲು ರಂಗ ಮಂದಿರ ತೆರವುಗೊಳ್ಳುತ್ತಿದ್ದು, ಗುರು ವಾರ ಅದರ ಒಳಗಿದ್ದ ಸೊತ್ತುಗಳು, ಮೇಲ್ಛಾವಣಿ ಯನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಮುಂದೆ ಜೇಸಿಬಿ ಯಂತ್ರದ ಮೂಲಕ ಪೂರ್ಣವಾಗಿ ನೆಲಸಮಗೊಳಿಸಲಾಗುತ್ತಿದೆ.

ಅಟಲ್‌ ಜನಸ್ನೇಹಿ ಕೇಂದ್ರ :

ಈ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಂತು ಹೋದ ಬಳಿಕ ಹಾಗೇ ಉಳಿದಿದ್ದ ರಂಗಮಂದಿರದಲ್ಲಿ ಬಂಟ್ವಾಳ ತಾಲೂಕು ಕಚೇರಿಯ ಅಟಲ್‌ ಜನಸ್ನೇಹಿ ಕೇಂದ್ರ ಕಾರ್ಯಾಚರಿಸುತ್ತಿತ್ತು. ಇದನ್ನು ಕೇಂದ್ರಕ್ಕೆ ಬೇಕಾದ ರೀತಿಯಲ್ಲಿ ಪರಿವರ್ತನೆಗೊಳಿಸಲಾಗಿತ್ತು. ಜನಸ್ನೇಹಿ ಕೇಂದ್ರವು ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಗೊಂಡ ಬಳಿಕ ರಂಗಮಂದಿರ ಪಾಳು ಬಿದ್ದ ಸ್ಥಿತಿಯಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next