Advertisement
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ಕಾಮಗಾರಿ ಅನುಷ್ಠಾನ ಗೊಂಡಿದ್ದು, ಭೂಸ್ವಾಧೀನ ಪರಿಹಾರವೂ ಸೇರಿ ದಂತೆ ಒಟ್ಟು 159.70 ಕೋ.ರೂ.ಗಳಲ್ಲಿ ಕಾಮಗಾರಿ ನಡೆದಿದೆ. ಬಿ.ಸಿ.ರೋಡ್‌ನಿಂದ ಜಕ್ರಿ ಬೆಟ್ಟು ವರೆಗೆ 3.85 ಕಿ.ಮೀ. ಚತುಷ್ಪಥ ಕಾಂಕ್ರೀಟ್ ಕಾಮಗಾರಿ ಹಾಗೂ 16 ಕಿ.ಮೀ. ದ್ವಿಪಥ ಹೆದ್ದಾರಿ ಡಾಮರು ಕಾಮಗಾರಿ ನಡೆದಿದೆ.
2020ರಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ತಿಂಗಳ ಕಾಲ ಕಾಮಗಾರಿ ಸಂಪೂರ್ಣ ನಿಂತು ತೊಂದರೆಯುಂಟಾಗಿತ್ತು. ಇದೀಗ ಕಾಮಗಾರಿ ಬಹುತೇಕ ಮುಗಿದು ಉದ್ಘಾ ಟನೆಯ ಹಂತಕ್ಕೆ ಬಂದಿದೆ. 14 ಮೀ. ಅಗಲದ ಚತುಷ್ಪಥ ಹೆದ್ದಾರಿ
ಬಿ.ಸಿ.ರೋಡ್-ಜಕ್ರಿಬೆಟ್ಟು ಮಧ್ಯದ 3.85 ಕಿ.ಮೀ. ಹೆದ್ದಾರಿಯು ಚತುಷ್ಪಥ ಗೊಂಡಿದ್ದು, ಕಾಂಕ್ರೀಟ್ ಕಾಮಗಾರಿ ಯನ್ನು ಜಪಾನ್ ತಂತ್ರಜ್ಞಾನದ ಯಂತ್ರದ ಮೂಲಕ ನಿರ್ವಹಿಸಲಾಗಿತ್ತು. ಈ ಭಾಗ ದಲ್ಲಿ ತಲಾ 7 ಮೀ. ಅಗಲದ ಎರಡು ರಸ್ತೆಗಳು ನಿರ್ಮಾಣ ಗೊಂಡಿದೆ. ಮಧ್ಯದಲ್ಲಿ ಡಿವೈಡರ್ ಸೇರಿದಂತೆ ತಡೆಬೇಲಿಯಾಗಿ ರೈಲಿಂಗ್ಸ್, ಕಾಂಕ್ರೀಟ್ ಚರಂಡಿ, ಪ್ರಮುಖ ಭಾಗಗಳಲ್ಲಿ ಇಂಟರ್‌ಲಾಕ್ ಇದೆ. ಹೆದ್ದಾರಿಗೆ ಕಾಂಕ್ರೀಟ್ ಅಳವಡಿಕೆ ಪೂರ್ಣಗೊಂಡಿದ್ದರೂ, ಭಂಡಾರಿಬೆಟ್ಟು ನೆರೆ ವಿಮೋಚನ ರಸ್ತೆ ಸೇರುವಲ್ಲಿ ಹಾಗೂ ಕಾಮಾಜೆ ಕ್ರಾಸ್ ಬಳಿ ಹೆದ್ದಾರಿ ಮಧ್ಯದ ಡಿವೈಡರ್ ಕಾಮಗಾರಿ, ರೈಲಿಂಗ್ಸ್ ಅಳವಡಿಕೆ, ಪೈಂಟಿಂಗ್, ಬೀದಿದೀಪ ಅಳವಡಿಕೆ ಮೊದಲಾದ ಕಾಮಗಾರಿಗಳು ಬಾಕಿ ಇವೆ.
Related Articles
ಶೇ. 5 ದಷ್ಟು ಬಾಕಿ ಇರುವ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳ್ಳುತ್ತದೆ. ದ್ವಿಪಥ ಡಾಮರು ಅಳವಡಿಕೆ ಪೂರ್ಣಗೊಂಡಿದೆ. ಚತುಷ್ಪಥ ಕಾಮಗಾರಿಯಲ್ಲಿ ಕೆಲವೆಡೆ ರೈಲಿಂಗ್ಸ್, ಡಿವೈಡರ್, ಪೈಂಟಿಂಗ್, ಚರಂಡಿ ಕಾಮಗಾರಿ ಬಾಕಿ ಇದೆ.
– ಕೃಷ್ಣಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾ.ಹೆ. ಇಲಾಖೆ, ಮಂಗಳೂರು.
Advertisement